ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ*
*ಕರ್ನಾಟಕ ಇಂರ್ಟನ್ಯಾಷನಲ್ ಟ್ರಾವೆಲ್ ಎಕ್ಸ್ಪೋನಲ್ಲಿ ಭಾಗವಹಿಸಿ- ಗುರುದತ್ತ ಹೆಗಡೆ*
ರಾಜ್ಯದ ರೋಮಾಂಚಕ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರದರ್ಶಿಸಲು, ವ್ಯಾಪಾರ ಅವಕಾಶಗಳನ್ನು ಆಕರ್ಷಿಸಲು ಮತ್ತು ಪ್ರಮುಖ ಜಾಗತಿಕ ಪ್ರವಾಸ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲು ಪ್ರವಾಸೋದ್ಯಮ ಇಲಾಖೆಯು ಫೆ. 26 ರಿಂದ 28ರವರೆಗೆ ಬೆಂಗಳೂರಿನಲ್ಲಿ “2nd Edition of the Karnataka International Travel Expo (KITE) 2025” ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು Hosted Buyers, ಭಾರತ ಹಾಗೂ 30ಕ್ಕೂ ಹೆಚ್ಚು ದೇಶಗಳಿಂದ 50 ಮಾಧ್ಯಮಗಳು ಭಾಗವಹಿಸಲಿದ್ದು, ಇಂತಹ ಒಂದು ವಿಶೇಷವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಮುಖ ಸ್ಥಳಗಳು, ಪ್ರವಾಸೋದ್ಯಮ ಉತ್ಪನ್ನಗಳು ಮತ್ತು ಸೇವೆಗಳು, ಸಾಂಸ್ಕೃತಿಕ ಪರಂಪರೆ, ಅನನ್ಯ ಪರಂಪರೆಗಳನ್ನು ಬಿಂಬಿಸುವ ಪ್ರವಾಸಿ ಯೋಜನೆಗಳನ್ನು ಪ್ರಚುರಪಡಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ಹಾಗೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ಆಸಕ್ತ ಪ್ರವಾಸೋದ್ಯಮ ಪಾಲುದಾರರು, ಸ್ಥಳೀಯ ರೆಸಾರ್ಟ್ ಮಾಲೀಕರು, ಟ್ರಾವೆಲ್ ಆಪರೇಟರ್‌ಗಳು, ಹೋಟೆಲ್ ಮಾಲೀಕರು, ಹೋಂ ಸ್ಟೇ ಮಾಲೀಕರು ಹಾಗೂ ಇತರ ಉದ್ಯಮ ಪ್ರತಿನಿಧಿಗಳಿಗೆ ತಿಳಿಸಿದೆ.
ಕಾರ್ಯಕ್ರಮದ ಹೆಚ್ಚಿನ ಮಾಹಿತಿಗಾಗಿ https://www.karnatakatravelexpo.org/ ಅಥವಾ For Stand Booking, ದೂ.ಸಂ.: 8722277132 / 9845215387 ಅಥವಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಧರ್ಮಪ್ಪ ಟಿ. -9448721646 ರವರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗುರುದತ್ತ ಹೆಗಡೆರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.