ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!* *ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!* *ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?* *ಇಲ್ಲಿದೆ FULL DETAILS*

*ಭದ್ರಾವತಿಯಲ್ಲಿ ಓಸಿ ನಂಬರ್ 24 ಹುಟ್ಟು ಹಾಕಿದೆ ಗ್ಯಾಂಗ್ ವಾರ್!*

*ಆನೆ ಪ್ರದೀಪ್- ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಆಟವಾಡುತ್ತಿದೆ ನಂಬರ್ 24!*

*ಏನಿದು ಘಟನೆ? ಭದ್ರಾವತಿಯ ಓಸಿ ಮಾಫಿಯಾದಲ್ಲಿ ಬಿರುಗಾಳಿ ಎದ್ದಿರೋದೇಕೆ? ಪೊಲೀಸರೇಕೆ ಮೌನ?*

*ಇಲ್ಲಿದೆ FULL DETAILS*

ಓಸಿ ನಂಬರ್ ವಿಚಾರದಲ್ಲಿ ಕೊನೆಗೂ ಭದ್ರಾವತಿಯಲ್ಲಿ ನಡೆದಿದ್ದೇನು? 24 ಎಂಬ ಜೋಡಿ ನಂಬರ್ ಗೆ 80 ಸಾವಿರ ₹ ಗಳನ್ನು ಕಟ್ಟಿದ್ದ ವ್ಯಕ್ತಿಗೆ ಆ ನಂಬರ್ ಸಿಕ್ಕಿದ್ದು ಹೇಗೆ? ಲೀಕಾಗಿತ್ತಾ ಓಸಿ ನಂಬರ್? 80 ಸಾವಿರ ₹ ಗಳಿಗೆ 80 ಲಕ್ಷ ₹ ನೀಡಬೇಕಾದ ಓಸಿ ಬಿಡ್ಡರ್ ಊರು ಬಿಟ್ಟನಾ? ಅದೇ ವಿಷಯಕ್ಕೆ ಭದ್ರಾವತಿಯಲ್ಲಿ ನಡೆಯಿತಾ ಗ್ಯಾಂಗ್ ವಾರ್?…

24 ಎಂಬ ಓಸಿ ಜೂಜಾಟದ ಜೋಡಿ ನಂಬರ್ ಇಡೀ ಭದ್ರಾವತಿಯನ್ನು ಮಾತ್ರವಲ್ಲ ಓಸಿ ಜಗತ್ತನ್ನೇ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ!

ಭದ್ರಾವತಿಯಲ್ಲಿ ಗ್ಯಾಂಗ್ ವಾರ್ ಕೂಡ ನಡೆದಿದೆ. ಕಳೆದ ಫೆಬ್ರವರಿ 9 ರ ಭಾನುವಾರ ಸಂಜೆ 5.15 ರ ಹೊತ್ತಿಗೆ ಭದ್ರಾವತಿಯ ಉಜ್ಜನಿಪುರ ಸರ್ಕಲ್ಲಿನಲ್ಲಿ ಈ ಗ್ಯಾಂಗ್ ವಾರ್ ನಡೆದಿದೆ. ಆದರೂ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿಲ್ಲ!

ಆನೆ ಪ್ರದೀಪ್ ಮತ್ತು ಹಳೇಬಟ್ಟೆ ಆಕಾಶ್ ಗ್ಯಾಂಗಿನ ನಡುವೆ ಓಸಿ ನಂಬರ್ 24 ರ ವಿಚಾರವಾಗಿ ಗ್ಯಾಂಗ್ ವಾರ್ ನಡೆದಿದೆ ಎಂದು ಹೇಳಲಾಗುತ್ತಿದೆ. ಉಜ್ಜನಿಪುರದ ರಾಘವೇಂದ್ರ ವೈನ್ಸ್ ಬಳಿ ಈ ಗ್ಯಾಂಗ್ ವಾರ್ ನಡೆದಿದ್ದು, ಸಿಸಿಟಿವಿ ದೃಶ್ಯಗಳು ಸಾಕ್ಷಿ ಹೇಳುತ್ತಿವೆ. ನಾಲ್ಕೈದು ಬೈಕ್ ಗಳಲ್ಲಿ ಬಂದ ಆಕಾಶ್ ಗ್ಯಾಂಗ್ ಆನೆ ಪ್ರದೀಪನ ಮೇಲೆ ಮುಗಿ ಬಿದ್ದಿದೆ. ಹಲ್ಲೆ ಮಾಡಿದೆ.ಈ ಹಲ್ಲೆ ತಪ್ಪಿಸಲು ಹೋದ ಜಪಾನ್ ಎಂಬಾತನ ತಲೆಬುರುಡೆ ಒಡೆದು ರಕ್ತ ಚಿಮ್ಮಿದೆ. ಸೂಕ್ಷ್ಮ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ಗ್ಯಾಂಗ್ ಗಳ ಮಧ್ಯೆ ಕಲ್ಲು ತೂರಾಟ, ಬಾಟಲಿ ಎಸೆತ ಕೂಡ ನಡೆದಿದೆ. ಇಷ್ಟೆಲ್ಲ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದರೂ ಪೊಲೀಸರು ಗಪ್ ಚುಪ್. ಇನ್ಸ್ ಪೆಕ್ಟರ್ ನಾಗಮ್ಮ ಸುಮೋಟೋ ಪ್ರಕರಣವಾದರೂ ದಾಖಲಿಸಬಹುದಿತ್ತು. ಈವರೆಗೂ ಅದಾಗಿಲ್ಲ.

ಇಷ್ಟಕ್ಕೂ ಈ ಗ್ಯಾಂಗ್ ವಾರಿಗೆ ಕಾರಣ ಓಸಿಯ ಜೋಡಿ ನಂಬರ್ 24!. 1₹ ಗೆ 80₹ ಗಳನ್ನು ಗೆದ್ದ ಜೋಡಿ ನಂಬರಿಗೆ ಓಸಿ ಬಿಡ್ಡರ್ ಗಳು ಕೊಡುತ್ತಾರೆ. 24 ನಂಬರಿನ ಮೇಲೆ 80ಸಾವಿರ ₹ಗಳನ್ನು ಕಟ್ಟಿದ್ದನೊಬ್ಬ. ಆ ನಂಬರ್ ಗೆದ್ದು ಬಿಟ್ಟಿದೆ. ಅದಕ್ಕೆ 80 ಲಕ್ಷ ₹ ಗಳನ್ನು ಓಸಿ ಏಜೆಂಟ್ ಹಣ ಕಟ್ಟಿದ ಗ್ರಾಹಕನಿಗೆ ನೀಡಬೇಕಿತ್ತು. ಆದರೆ, 24 ನಂಬರ್ ಪಬ್ಲಿಕ್ ಆಗಿತ್ತೆಂದು ಏಜೆಂಟ್ ರಗಳೆ ತೆಗೆದು ಕಿರಿಕ್ ಶುರುಮಾಡಿದ್ದಾನೆ. ಈ ವಿಚಾರ ಪ್ರಸ್ತಾಪ ಮಾಡಿದ್ದ ಆನೆ ಪ್ರದೀಪನ ಮೇಲೆ ಹಳೆಬಟ್ಟೆ ಆಕಾಶ್ ಗ್ಯಾಂಗ್ ಮುಗಿಬಿದ್ದಿತ್ತು ಎಂದು ಮೂಲಗಳು ತಿಳಿಸಿವೆ.

ಈಗಲೂ 24 ಸಂಖ್ಯೆಯ ಓಸಿ ಸಮಸ್ಯೆ ಬಗೆಹರಿದಿಲ್ಲ. ಓಸಿ ಬಿಡ್ಡರ್ ಮಾತ್ರ ನಾಪತ್ತೆಯಾಗಿದ್ದಾನೆ! ಗ್ಯಾಂಗ್ ಗಳ ನಡುವಿನ ಕದನ ಬೇರೆ ಬೇರೆ ರೂಪ ತಾಳುವ ಮೊದಲು ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ.