ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ* *ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ* *ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ*
*ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಪತ್ರಿಕಾಗೋಷ್ಠಿ*
*ಅತಿಥಿ ಉಪನ್ಯಾಸಕರಿಗೆ, ಗುತ್ತಿಗೆದಾರರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಬೇಡಿ*
*ಕ್ರಾಂತಿವೀರ ಬ್ರಿಗೇಡ್ ನಿಂದ ಸಿಎಂ ಸಿದ್ರಾಮಯ್ಯ- ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಲಿಖಿತ ಪತ್ರ*
ಅತಿಥಿ ಉಪನ್ಯಾಸಕರು ಬದುಕಬೇಕೋ ಸಾಯಬೇಕೋ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆಗಸ್ಟ್ ತಿಂಗಳಿಂದ ವೇತನ ಬಂದಿಲ್ಲ. ಹೇಗೆ ಬದುಕಬೇಕು ಇವರು? ಹಾಗಾಗಿ,ಮುಖ್ಯಮಂತ್ರಿಗಳಿಗೆ ಪತ್ರ ಬರೀತಿದ್ದೇನೆ.
ಟ್ರಜರಿವರೆಗೆ ಹಣ ಬರುತ್ತಂತೆ. ಆದರೆ, ಅಲ್ಲೇ ತಡೆಯಾಗ್ತಿದೆ. ಪುಗಸಟ್ಟೆ ಯಾವುದೂ ಕೇಳ್ತಿಲ್ಲ. ಸೇವೆಗೆ ಹಣ ಕೇಳ್ತಿದ್ದಾರೆ.
ಕೊಡುವಂಥ ವೇತನ ಕೊಡದೇ ಇದ್ರೆ ಅವರೇನು ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಸರ್ಕಾರ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡದಿರಲಿ. ಡಿಸೆಂಬರ್ ತನಕದ್ದು ಕೊಡದೇ ಜನವರಿದು ವೇತನ ಕೊಡಿ ಅಂತ ಸರ್ಕಾರ ಹುಚ್ಚು ಆದೇಶ ಬೇರೆ ಮಾಡಿದೆ. ನಾಚಿಕೆ ಆಗಬೇಕು.
ಎಲ್ಲ ಮಂತ್ರಿಗಳದ್ದು ಒಂದು ತಿಂಗಳು ಸಂಬಳ ನಿಲ್ಲಿಸಿಬಿಡಿ. ಏನಾಗುತ್ತೆ ನೋಡೋಣ. ಕ್ರಾಂತಿವೀರ ಬ್ರಿಗೇಡ್ ನಿಂದ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವ ಮಧು ಬಂಗಾರಪ್ಪರಿಗೆ ಪತ್ರ ಬರೀತಿದ್ದೇನೆ.
ಗುತ್ತಿಗೆದಾರರ ಬಾಕಿ 64ಸಾವಿರ ಕೋಟಿ ಇದ್ದರೆ, ಜಿಲ್ಲೆಯಲ್ಲಿ 2250 ಕೋಟಿ ಬಾಕಿ ಇದೆ. ಇವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳಬೇಕಾ?
ಅತಿಥಿ ಉಪನ್ಯಾಸಕರು, ಶಿಕ್ಷಕರು, ಗುತ್ತಿಗೆದಾರರನ್ನು ಜೀವಂತ ಉಳಿಸಿ.
ಮೈಸೂರು ಉದಯಗಿರಿಯಲ್ಲಿ ಆದ ಘಟನೆ ಒಪ್ಪುವಂಥದ್ದಲ್ಲ. ಡಿವೈಎಸ್ ಪಿ ಮೇಲೆ ಸಾವಿರಾರು ಜನ ಕಲ್ಲು ತೂರುತ್ತಾರೆಂದರೆ ಆಶ್ಚರ್ಯವಾಗುತ್ತೆ. ಲೋಡುಗಟ್ಟಲೆ ಕಲ್ಲು, ಸಾವಿರಾರು ಜನ ಹೇಗೆ ಬರಲು ಸಾಧ್ಯ? ಆರ್ ಎಸ್ ಎಸ್ ಮೇಲೆ ಆರೋಪ ಮಾಡಿದ್ದಾರೆ. ಹೇಡಿಗಳಲ್ಲ ಹರಿಪ್ರಸಾದ್, ಲಕ್ಷ್ಮಣ್ ರವರೇ. ನೇರಾನೇರ ಬರೋರು. ಬುರ್ಖಾ, ಟೋಪಿ ಹಾಕ್ಕೊಂಡು ಬಂದಿದ್ರಾ ಆರ್ ಎಸ್ ಎಸ್ ನೋರು?
ಭದ್ರಾವತಿ ಶಾಸಕರ ಮಗನ ಅತ್ಯಂತ ಅಶ್ಲೀಲ ಪದಗಳನ್ನು ಕೇಳಲು ಸಾಧ್ಯವೇ ಇಲ್ಲ. ಮಹಿಳಾ ಸರ್ಕಾರಿ ಅಧಿಕಾರಿಗೆ ಬೈದಿದ್ದಕ್ಕೆ ಕ್ಷೀರಾಭಿಷೇಕ ಆಗಿದೆ. ಮುಂದೆ ಹರಿಪ್ರಸಾದ್, ಲಕ್ಷ್ಮಣ್ ರಿಗೂ ಕ್ಷೀರಾಭಿಷೇಕವಾಗಬಹುದು.ಪೊಲೀಸರಿಗೇ ರಕ್ಷಣೆ ಇಲ್ಲದ ಸ್ಥಿತಿ ಇದ್ರೆ ಮತ್ಯಾರಿಗೆ ರಕ್ಷಣೆ ಕೊಡ್ತೀರಿ? ಪೊಲೀಸ್ ಇಲಾಖೆಗೆ ನಿರಾಸಕ್ತ ಭಾವನೆ ಬಂದುಬಿಟ್ಟರೇನು ಗತಿ.
ಗೃಹಮಂತ್ರಿಗಳು ಕಠಿಣ ಕ್ರಮದ ಮಾತಾಡ್ತಾರೆ ಅಷ್ಟೇ. ಆರೋಪಿಗಳ ಹೆಸರೇ ಸೇರಿಸದಂತೆ ಪ್ರಭಾವ ಬೀರಲಾಗುತ್ತಿದೆ. ಕೆ.ಎನ್. ರಾಜಣ್ಣ ಪೊಲೀಸ್ ಇಲಾಖೆ ಮೇಲೆಯೇ ಬೆರಳು ಮಾಡಿದ್ದಾರೆ. ಕೂಡಲೇ ದೇಶದ ಜನರ ಕ್ಷಮೆ ಕೇಳಬೇಕು.
ಮುಖ್ಯಮಂತ್ರಿ ಆಗಲು ಓಡಾಡುತ್ತಿರುವ ಡಿಕೆಶಿ ಪೊಲೀಸರ ಮೇಲೆ ಹಲ್ಲೆ ಮಾಡಿರೋರು ಅಪ್ರಾಪ್ತರು ಅಂತ ಹೇಳ್ತಾರೆ. ನಾಳೆ ಇದೇ ದ್ರೋಹಿಗಳು ಗುಂಡು ಹೊಡೆದರೇನು ಕಥೆ? ಗುಂಡಾಗಳನ್ನು ಬಚಾವು ಮಾಡಲು ಕಾಂಗ್ರೆಸ್ ಸರ್ಕಾರ ಇರೋದಾ? ಬರ್ತಾ ಬರ್ತಾ ಸಮಾಜವೇ ದ್ರೋಹಿಗಳ ವಿರುದ್ಧ ನಿಂತರೆ…ಕಾನೂನು ಕೈಗೆ ತಗೊಂಡರೆ?
ಯಾರಿಗೂ ರಕ್ಷಣೆ ಇಲ್ಲ. ಏನು ಮಾಡಬೇಕು ಜೀವ ರಕ್ಷಿಸಿಕೊಳ್ಳಲು?
ಪ್ರಯಾಗ್ ರಾಜ್ 144 ವರ್ಷಗಳ ನಂತರ ಕುಂಭಮೇಳ ಆಗ್ತಿದೆ. 56 ಕೋಟಿ ಜನ ಸ್ನಾನ ಮಾಡಿ ಬಂದಿದ್ದಾರೆ. ಗಾಂಧಿಯವರು ಪವಿತ್ರವಾಗಿ ಕಂಡಿದ್ದರು. ಅಂಥವರನ್ನು ಅಪಮಾನ ಮಾಡಿದ್ದಾರೆ. ದೊಡ್ಡ ಪಾಪಿ ಖರ್ಗೆಯವರು ಈಗಲೂ ಬಹಳ ದೊಡ್ಡ ತಪ್ಪು ಮಾಡಿದೆ ಅಂತ ಕ್ಷಮೆ ಕೇಳಲಿ. ಡಿಕೆಶಿ ಸೇರಿದಂತೆ ಬಹಳ ಜನ ಹೋಗಿಬಂದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ತೀರಾ?
ಸಿದ್ದರಾಮಯ್ಯರವರೇ, ಹಾಸಿಗೆ ಇದ್ದಷ್ಟು ಕಾಲುಚಾಚಿ. ಕಳೆದ ಬಜೆಟ್ಟಲ್ಲಿ 78 ಗ್ಯಾರಂಟಿ ಕೊಟ್ಟಿದ್ರು. ಜಾರಿಗೆ ತಂದ ಐದನ್ನೂ ನೆಟ್ಟಗೆ ಜಾರಿಗೊಳಿಸಿ.
ಗ್ಯಾರಂಟಿ ನಿಂತಿರೋದು ಗೊತ್ತಿಲ್ಲ ಅಂದಿರುವ ಸಿಎಂ ನಾಚಿಕೆಗೇಡು.
ವಕ್ಫ್ ಬೋರ್ಡ್ ಮಸೂದೆ ಜಾರಿ ತಂದ ಮೋದಿಯವರಿಗೆ ಅಭಿನಂದನೆ.