ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ* *ಡಿ.ಕೆ. ಶಿವಕುಮಾರ್ ಡಿಸೆಂಬರ್ ಒಳಗೆ ಸಿಎಂ ಆಗುತ್ತಾರೆ?*
*ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ*
*ಡಿ.ಕೆ. ಶಿವಕುಮಾರ್ ಡಿಸೆಂಬರ್ ಒಳಗೆ ಸಿಎಂ ಆಗುತ್ತಾರೆ?*
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಿಎಂ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಮುಡಾ ಕಂಟಕ ಎದುರಾಗಿದ್ದು, ಸಿಎಂ ರಾಜೀನಾಮೆ ಮಾತು ಕೇಳಿಬರುತ್ತಿವೆ. ಇದರ ಮಧ್ಯ ವಿಪಕ್ಷ ನಾಯಕ ಆರ್ ಅಶೋಕ್ ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ನಾನು ಸನ್ಯಾಸಿ ಅಲ್ಲ ಮುಖ್ಯಮಂತ್ರಿ ಆಗಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಪದೇ ಪದೇ ಹೇಳಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R Ashoka) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಒಳಗಡೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಅಜ್ಜಯ್ಯ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ ಎಂದು ಹೇಳಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಒಳಗಿನ ವಿಚಾರ ನಮಗೆ ಸಂಬಂಧವಿಲ್ಲ. ಜಿ. ಪರಮೇಶ್ವರ, ಖರ್ಗೆ, ಎಂಬಿ ಪಾಟೀಲ್ ಮತ್ತು ಡಿಕೆ ಶಿವಕುಮಾರ್ ಯಾರು ಸಿಎಂ ಆಗಬೇಕು ಎಂಬುವುದು ಅವರ ಪಕ್ಷದ ನಿರ್ಧಾರ. ನಮ್ಮ ಹೋರಾಟದ ಫಲವಾಗಿ ಸಚಿವರರೊಬ್ಬರ ತಲೆತಂಡವಾಗಿದೆ. ಅದೇ ರೀತಿ ಸಿಎಂ ವಿಕೆಟ್ ಕೂಡ ಬೀಳಬೇಕು ಎಂದು ಕಿಡಿಕಾರಿದ್ದಾರೆ.