ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ  ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ

ಫೆ.18 ರ ಇಂದು ಸಂಜೆ ಕುವೆಂಪು ರಂಗಮಂದಿರದಲ್ಲಿ 

ಡಾ.ಗಣೇಶ್ ಆರ್.ಕೆಂಚನಾಲರ ಉಡುತಡಿ ನಾಟಕ ಪ್ರದರ್ಶನ- ಪುಸ್ತಕ ಬಿಡುಗಡೆ

ಮಲೆನಾಡು ಕಲಾ ತಂಡ ಶಿವಮೊಗ್ಗ, ದಿ. ಎಂ.ಕೆ. ರೇಣುಕಪ್ಪಗೌಡ ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗಣೇಶ್ ಆರ್ ಕೆಂಚನಾಲ್ ರಚನೆಯ ‘ಉಡು -ತಡಿ’ ನಾಟಕದ ಪುಸ್ತಕ ಬಿಡುಗಡೆ ಮತ್ತು ನಾಟಕ ಪ್ರದರ್ಶನವನ್ನು ಫೆ.೧೮ ರಂದು ಸಂಜೆ ೬.೩೦ ಕ್ಕೆ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಲೇಖಕರು ಹಾಗೂ ರಂಗನಿರ್ದೇಶಕರಾದ ಗಣೇಶ್ ಆರ್.ಕೆಂಚನಾಲ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡು-ತಡಿ ನಾಟಕ ಶಿವಮೊಗ್ಗ ಜಿಲ್ಲೆಯ ವಚನಗಾರ್ತಿ ಅಕ್ಕಮಹಾದೇವಿ ಅವರ ಕುರಿತಾಗಿದ್ದು, ಈ ನಾಟಕ ಯಶಸ್ವಿಯಾಗಿ ೫ನೇ ಪ್ರದರ್ಶನ ಕಾಣುತ್ತಿದೆ. ಕಾರ್ಯಕ್ರಮಕ್ಕೆ ಶ್ರೀ ಬೆಕ್ಕಿನಕಲ್ಮಠದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಸಾನಿಧ್ಯ ವಹಿಸಲಿದ್ದಾರೆ. ಪುಸ್ತಕ ಬಿಡುಗಡೆಯನ್ನು ವಿಧಾನ ಪರಿ?ತ್ ಮಾಜಿ ಶಾಸಕ ಎಸ್. ರುದ್ರೇಗೌಡರು ನೆರವೇರಿಸಲಿದ್ದಾರೆ. ವಿಶ್ರಾಂತ ಪ್ರಾಂಶುಪಾಲರು ಹಾಗೂ ರಂಗಕ್ಕಾವಿದರೂ ಆದ ಡಾ. ಹೆಚ್.ಎಸ್.ನಾಗಭೂ?ಣ್ ಪುಸ್ತಕ ಕುರಿತು ಮಾತನಾಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿ?ತ್ ಶಾಸಕ ಡಾ. ಧನಂಜಯ ಸರ್ಜಿ, ಮಹಾನಗರ ಪಾಲಿಕೆ ಮಾಜಿ ಸದಸ್ಯ ಹೆಚ್.ಸಿ. ಯೋಗೀಶ್, ಅ.ಭಾ.ಶರಣ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ಹೆಚ್.ಎನ್.ಮಹಾರುದ್ರ, ಲೇಖಕರು ಹಾಗೂ ರಂಗ ನಿರ್ದೇಶಕರಾದ ಡಾ. ಗಣೇಶ್ ಆರ್ ಕೆಂಚನಾಲ್ ಉಪಸ್ಥಿತರಿರಲಿದ್ದಾರೆ. ರಂಗ ಸನ್ಮಾನವನ್ನು ರಾ? ಪ್ರಶಸ್ತಿ ಪುರಸ್ಕೃತ ರಂಗನಟಿ ಲಕ್ಷ್ಮೀ ಎಸ್ ಭದ್ರಾವತಿ ನೀಡಲಾಗುವುದು ಎಂದರು.

ಈ ನಾಟಕವನ್ನು ಮಂಜುಳಾ ಬದಾಮಿ, ವೈಡಿ, ಬದಾಮಿ, ಸಾಣೇಹಳ್ಳಿಯವರು ನಿರ್ದೇಶಿಸಿದ್ದಾರೆ. ೧೨ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿ?ತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ ನಡೆ-ನುಡಿಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ. ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ಆಕೆಯದು. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದೆ. ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಾಡಿನ ಹಲವೆಡೆ ಯಶಸ್ವೀ ಪ್ರದರ್ಶನ ಕಂಡ ಈ ನಾಟಕ, ಅಕ್ಕನ ವ್ಯಕ್ತಿತ್ವವನ್ನು ಭಿನ್ನ ಆಯಾಮದಲ್ಲಿ ಕಟ್ಟಿಕೊಡುವುದರ ಮೂಲಕ ಹೊಸ ಚಿಂತನೆಗೆ ನಮ್ಮನ್ನು ಹಚ್ಚುತ್ತಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು.

ಈ ನಾಟಕಕ್ಕೆ ಒಬ್ಬರಿಗೆ ರೂ.೯೯ ಗಳ ಪ್ರವೇಶ ಶುಲ್ಕವಿದ್ದು, ನಾಟಕ ವೀಕ್ಷಿಸಲು ಬಂದವರಿಗೆ ಬಿಡುಗಡೆಯಾಗುವ ಕೃತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್ ನೆಲ್ಲಿಸರ, ಶಕುಂತಲಾ, ಕಿರಣ್ ದೇಸಾಯಿ ಉಪಸ್ಥಿತರಿದ್ದರು.