ಬೆಂಗಳೂರಿನ ಲಾಡ್ಜ್ ನಲ್ಲಿ ಬೆಂಕಿಗಾಹುತಿಯಾದ 3 ಮಕ್ಕಳ ತಾಯಿ* *ಭೀಕರ ಘಟನೆಯ ಹಿಂದಿನ ರಹಸ್ಯವೇನು?*

*ಬೆಂಗಳೂರಿನ ಲಾಡ್ಜ್ ನಲ್ಲಿ ಬೆಂಕಿಗಾಹುತಿಯಾದ 3 ಮಕ್ಕಳ ತಾಯಿ*

*ಭೀಕರ ಘಟನೆಯ ಹಿಂದಿನ ರಹಸ್ಯವೇನು?*

ಬೆಂಗಳೂರಿನ ಲಾಡ್ಜ್‌ನಲ್ಲಿ ಬೆಂಕಿ ಅವಗಢ ಪ್ರಕರಣದ ತನಿಖೆಯ ವೇಳೆ ಆಶ್ಚರ್ಯಕರ ಸಂಗತಿ ಬೆಳಕಿಗೆ ಬಂದಿದೆ.

ಮೃತ ಮಹಿಳೆ ಕಾವೇರಿ ಬಡಿಗೇರ್‌ಗೆ ಮದುವೆಯಾಗಿ ಮೂರು ಮಕ್ಕಳಿದ್ದರು ಎನ್ನುವ ವಿಚಾರ ಗೊತ್ತಾಗಿದೆ.

ಪತಿ ಹಾಗೂ ಮಕ್ಕಳನ್ನ ಬಿಟ್ಟು ಕೆಲಸ ಮಾಡುತ್ತೇನೆಂದು ಬೆಂಗಳೂರಿಗೆ ಕಾವೇರಿ ಬಂದಿದ್ದಳು.

ಗದಗ ಮೂಲದ ರಮೇಶ್‌ ಹಾಗೂ ಹನಗುಂದ ಮೂಲದ ಕಾವೇರಿ ಬಡಿಗೇರ್‌ ನಡುವೆ ಅನೈತಿಕ ಸಂಬಂಧವಿತ್ತು. ಮದುವೆ ವಿಚಾರಕ್ಕೆ ರಮೇಶ್‌ ಒತ್ತಡ ಹಾಕಿದ್ದ ಎಂದು ತಿಳಿದುಬಂದಿದೆ. ಆದರೆ, ಇದಕ್ಕೆ ಕಾವೇರಿ ಒಪ್ಪಿರಲಿಲ್ಲ. ಇದಕ್ಕಾಗಿ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆದರಿಕೆ ಹಾಕಲು ಹೋಗಿ ಬೆಂಕಿಗೆ ಆಹುತಿಯಾಗಿದ್ದಾನೆ.

ರಮೇಶ್‌ ಮೈಗೆ ಬೆಂಕಿಹೊತ್ತಿಕೊಂಡ ಬಳಿಕ. ಕಾವೇರಿ ಬಾತ್‌ರೋಮ್‌ ಬಾಗಿಲು ಮುಚ್ಚಿ ಬದುಕುಳಿಯುವ ಪ್ರಯತ್ನ ಮಾಡಿದ್ದರು. ಆದರೆ, ಉಸಿರುಗಟ್ಟಿ ಅವರು ಕೂಡ ಸಾವು ಕಂಡಿದ್ದಾರೆ. ಬಾತ್ ರೂಮ್ ಕ್ಲೋಸ್ ಮಾಡಿ ಮೊದಲು ಸ್ಪಾ ಮಾಲೀಕನಿಗೆ ಯುವತಿ ಕರೆ ಮಾಡಿದ್ದಳು. ಸ್ಪಾ ಮಾಲೀಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆದರೆ, ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರೂ ಕೂಡ ಸಾವು ಕಂಡಿದ್ದಾರೆ.