*ಓಸಿ ಮತ್ತು ಆತ್ಮಹತ್ಯೆ ಪ್ರಕರಣ* *ನ್ಯಾಯಾಲಯದಿಂದ 10 ವರ್ಷಗಳ ಕಠಿಣ ಸಜೆ, 1 ಲಕ್ಷ ರೂ., ದಂಡ ವಿಧಿಸಿ ಆದೇಶ*
*ಓಸಿ ಮತ್ತು ಆತ್ಮಹತ್ಯೆ ಪ್ರಕರಣ*
*ನ್ಯಾಯಾಲಯದಿಂದ 10 ವರ್ಷಗಳ ಕಠಿಣ ಸಜೆ, 1 ಲಕ್ಷ ರೂ., ದಂಡ ವಿಧಿಸಿ ಆದೇಶ*
ಓಸಿ ಜೂಜಾಟದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಆರೋಪಿಯೊಬ್ಬನಿಗೆ 10 ವರ್ಷದ ಕಠಿಣ ಜೈಲು ಶಿಕ್ಷೆ, 1 ಲಕ್ಷ ರೂ., ದಂಡ ವಿಧಿಸಿ ಆದೇಶಿಸಿದೆ.
ಪಿರ್ಯಾದಿದಾರರಾದ ಶ್ರೀಮತಿ ಪಿ ಮುನಿಯಪ್ಪ (45 ವರ್ಷ ಅಗರದಳ್ಳಿ ಕ್ಯಾಂಪ್ ಭದ್ರಾವತಿ* ತಾಲ್ಲೂಕು) 2019 ರ ಏಪ್ರಿಲ್ 28 ರಂದು ನೀಡಿದ ದೂರಿನಲ್ಲಿ ತನ್ನ ಮಗನಾದ ಶ್ರೀಧರ ಪಿ.ಎಂ (21 ವರ್ಷ)ನಿಗೆ ಆರೋಪಿತನಾದ ಚಂದ್ರಪ್ಪ (50 ವರ್ಷ ಅಗರದಳ್ಳಿ ಕ್ಯಾಂಪ್ ಭದ್ರಾವತಿ ತಾಲ್ಲೂಕು) ಓಸಿ ಮಟ್ಕಾ ಜೂಜಾಟವನ್ನು ಕಲಿಸಿ ತಪ್ಪು ದಾರಿಗೆ ತಂದು ಜೂಜಾಟದಿಂದ ಬಂದ ಹಣವನ್ನು ನೀಡುವಂತೆ ಹಿಂಸೆ ಮಾಡುತ್ತಿದ್ದು, ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡು ಹಿಂಸೆ ತಾಳಲಾರದೇ ಯಾವುದೋ ಕ್ರಿಮಿನಾಶಕವನ್ನು ಸೇವನೆ ಮಾಡಿ ದಿನಾಂಕ:12-01-2019 ಜನವರಿ 12 ರಂದು ಬೆಳಗ್ಗೆ ಮೃತಪಟ್ಟಿದ್ದ.
ಈ ಸಂಬಂಧ ಹೊಳೆಹೊನ್ನೂರು ಠಾಣಾ ಗುನ್ನೆ ಸಂಖ್ಯೆ 141/2019 ಕಲಂ :IPC 1860 U/s-306 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸಬ್ ಇನ್ಸ್ ಪೆಕ್ಟರ್ ಮೋಹನ್ ಜಿ ರವರು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ರತ್ನಮ್ಮ ಪಿ,* ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು, ಘನ 4ನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ಯಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿ ಚಂದ್ರಪ್ಪ (50 ವರ್ಷ, ಅಗರದಹಳ್ಳಿ ಕ್ಯಾಂಪ್, ಭದ್ರಾವತಿ)ನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್* ರವರು ಆರೋಪಿಗೆ 10 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 1,00,000/-* ರೂ ದಂಡ ವಿಧಿಸಿ ಆದೇಶಿಸಿದ್ದಾರೆ.


