*ಕೊಲೆ ಮಾಡಲೆತ್ನಿಸಿದ್ದ ಮಂಜುನಾಥ ಬಡಣವಣೆಯ ಸಂತೋಷ್ @ಸಂತು, ಶರತ್, ಬುದ್ಧನಗರದ ಪ್ರಶಾಮತ್ ಗೆ 5 ವರ್ಷ ಕಠಿಣ ಜೈಲುವಾಸ*
*ಕೊಲೆ ಮಾಡಲೆತ್ನಿಸಿದ್ದ ಮಂಜುನಾಥ ಬಡಣವಣೆಯ ಸಂತೋಷ್ @ಸಂತು, ಶರತ್, ಬುದ್ಧನಗರದ ಪ್ರಶಾಮತ್ ಗೆ 5 ವರ್ಷ ಕಠಿಣ ಜೈಲುವಾಸ*

ಮಾರಣಾಂತಿಕವಾಗಿ ಹಲ್ಲೆ ಮಾಡಿ ಕೊಲೆ ಮಾಡಲೆತ್ನಿಸಿದ್ದ ಶಿವಮೊಗ್ಗದ ಮಂಜುನಾಥ ಬಡಾವಣೆಯ ಇಬ್ಬರು, ಬುದ್ಧನಗರದ ಓರ್ವನಿಗೆ ನ್ಯಾಯಾಲಯವು 5 ವರ್ಷಗಳ ಕಠಿಣ ಸಜೆ ನೀಡಿ ಆದೇಶಿಸಿದೆ.
ದಿನಾಂಕ:20-03-2022 ರಂದು ರಾತ್ರಿ *ಶಿವಮೊಗ್ಗ ನಗರ ಮಂಜುನಾಥ ಬಡಾವಣೆ ಮಹಾನಗರ ಪಾಲಿಕೆಯ ಖಾಲಿ ಜಾಗದಲ್ಲಿ ಪಿರ್ಯಾದುದಾರರಾದ ಬಾಬು ಕಿರಣ* ರವರು ತಾನು ಕೆಲಸ ಮಾಡಿದ ಹಣವನ್ನು ಪಡೆದುಕೊಂಡು ವಾಪಸ್ ಮನೆಗೆ ಬರುತ್ತಿರುವಾಗ, ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು *ಕೊಲೆ ಮಾಡುವ ಉದ್ದೇಶದಿಂದ ಬೆನ್ನಿಗೆ ಚುಚ್ಚಿದ್ದು, ಹಾಗೂ ಹೊಟ್ಟೆ ಮತ್ತು ಮೈಕೈಗೆ ಕೈಯಿಂದ ಹೊಡೆದು ನೋವುಂಟು ಮಾಡಿ, ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಪ್ರಾಣ ಬೆದರಿಕೆ* ಹಾಕಿದ ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ನೀಡಿದ ದೂರಿನ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 142/2022 ಕಲಂ 323, 324, 341, 307, 504, 506 ಸಹಿತ 34 ಐಪಿಸಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ *ಶ್ರೀ ತಿಮ್ಮಪ್ಪ ಪಿಎಸ್ಐ (ನಿವೃತ್ತ) ರವರು ಪ್ರಕರಣದ ತನಿಖೆ ಪೂರೈಸಿ,* ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ *ಶ್ರೀ ಮಮತಾ ಬಿ.ಎಸ್ ಸರ್ಕಾರಿ ಅಭಿಯೋಜಕರವರು* ವಾದ ಮಂಡಿಸಿದ್ದು *ಘನ 1 ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ* ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ *ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ* ರವರು ದಿನಾಂಕ:31-01-2026 ರಂದು *ಎ1 ಸಂತೋಷ್ @ ಸಂತು, 27 ವರ್ಷ, ಮಂಜುನಾಥ್ ಬಡಾವಣೆ ಶಿವಮೊಗ್ಗ. ಎ2 ಶರತ್, 24 ವರ್ಷ, ಮಂಜುನಾಥ್ ಬಡಾವಣೆ ಶಿವಮೊಗ್ಗ ಮತ್ತು ಎ3 ಪ್ರಶಾಂತ್ ಎಂ, 24 ವರ್ಷ, , ಬುದ್ದಾನಗರ ಶಿವಮೊಗ್ಗ.* ಇವರುಗಳಿಗೆ *5 ವರ್ಷ ಕಠಿಣ ಕಾರಾವಾಸ ಮತ್ತು 12,000 ರೂ ದಂಡವನ್ನು ವಿಧಿಸಿದ್ದು, ತಪ್ಪಿದ್ದಲ್ಲಿ 1 ವರ್ಷ ಸಾಧಾರಣ ಸಜೆಯನ್ನು* ಆದೇಶಿಸಿರುತ್ತದೆ.


