ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಜೊತೆಗಿಟ್ಟುಕೋ ನನ್ನನ್ನು
ನಿನ್ನ ಮೌನಗಳಲ್ಲಿ…

ವಿಚಿತ್ರ ಸದ್ದುಗಳ
ಈ ಜಗತ್ತು ನಿನ್ನಂತಿಲ್ಲ!

2.
ಕೆಲವೊಮ್ಮೆ
ದಾರಿಗಳನ್ನಲ್ಲ

ತನ್ನನ್ನೇ
ಬದಲಾಯಿಸಿಕೊಳ್ಳಬೇಕು
ಹೃದಯವೇ…

3.
ಎಲ್ಲದನ್ನೂ
ತಿಳಿದುಕೊಂಡೇನು ಮಾಡುವೆ?

ನೆಮ್ಮದಿಯಿಂದಿರುವ
ಆತ್ಮ ಅರ್ಥಮಾಡಿಕೊಂಡರೆ
ಸಾಕು!

– *ಶಿ.ಜು.ಪಾಶ*
8050112067
(2/2/2026)