ಭಾಗ-1️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!* *ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!* *ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!* ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!*

ಭಾಗ-1️⃣

*ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಮಹಾ ಲೂಟಿ!*

*ನಕ್ಷೆ- ದಾಖಲೆಗಳನ್ನೇ ನಕಲಿ ಸೃಷ್ಟಿಸಿ ಸರ್ಕಾರಕ್ಕೆ ಕೋಟಿ ಕೋಟಿ ವಂಚನೆ- ದೇಶದಲ್ಲೇ ದೊಡ್ಡ ಹಗರಣ!*

*ಅಕ್ರಮ ವಿದ್ಯುತ್ ಸಂಪರ್ಕ ಜಾಲದ ಹಿಂದೆ ಸಹಾಯಕ ಇಂಜಿನಿಯರ್ ನವೀನನೇ ಮಾಸ್ಟರ್ ಮೈಂಡ್?!*

ಮೆಸ್ಕಾಂನಲ್ಲಿ ಕಡತ ಕಾಣೆಮಾಡಿತೇ ಹಂಸನಡಿಗೆ?!*

*ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿನ ಮೂರೂ ಉಪವಿಭಾಗಗಳ ಬುಡದಲ್ಲಿ ಈಗ ಬೆಂಕಿ ಬಿದ್ದಿದೆ. ಬಿದ್ದ ಬೆಂಕಿಯ ಶಾಖಕ್ಕೆ ಆ ವಿಭಾಗಗಳ ಎಇಇಗಳು, ಸಹಾಯಕ ಇಂಜಿನಿಯರ್ ಗಳು ವಿಲವಿಲ ಒದ್ದಾಡುವಂತಾಗಿದೆ. ಜೊತೆಗೆ, ಲಕ್ಷಾಂತರ ರೂ., ಹಣ ಕೊಟ್ಟ ಗ್ರಾಹಕರೂ, ಮಧ್ಯವರ್ತಿಗಳಾಗಿ ನಿಂತು ವ್ಯವಹರಿಸಿದ ಕೆಲ ವಿದ್ಯುತ್ ಗುತ್ತಿಗೆದಾರರ ಚಡ್ಡಿಗಳಿಗೂ ಬೆಂಕಿ ತಗುಲಿ ಅಂಡು ಸುಡತೊಡಗಿದೆ!

ಸುಪ್ರೀಂ ಕೋರ್ಟಿನ ಆದೇಶಕ್ಕೂ ಹೀಗೆ ಉಂಡೆನಾಮ ತಿಕ್ಕಬಹುದು, ಆ ಕೋರ್ಟಿನ ಆದೇಶದ ಮೇಲೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಆಜ್ಞೆಗೂ ಸೆಗಣಿ ಬಳಿದು ದುಡ್ಡು ಮಾಡಬಹುದೆಂದು ಶಿವಮೊಗ್ಗ ಮೆಸ್ಕಾಂ ವೃತ್ತದ ಕೆಲ ಅಧಿಕಾರಿಗಳು, ಕೆಲ ಗುತ್ತಿಗೆದಾರರು, ಸ್ಥಳೀಯ ಸಂಸ್ಥೆಯ ಒಂದಿಷ್ಟು ಅಧಿಕಾರಿಗಳು ಹಾಗೂ ಒಂದಿಷ್ಟು ಗ್ರಾಹಕರು ಇಡೀ ದೇಶಕ್ಕೇ ತೋರಿಸಿಕೊಟ್ಟು ಮಾದರಿಯಾಗಿದ್ದಾರೆ! ಇಡೀ ರಾಜ್ಯವೇ ಇವರ ಮೇಲೆ ಥೂ ಥೂ ಎಂದು ಉಗಿಯುವಂತಾಗಿದೆ!!

ಸುಪ್ರೀಂ ಕೋರ್ಟಿನ ಆಜ್ಞೆಯಂತೆ ರಾಜ್ಯ ಸರ್ಕಾರ ಒಂದು ನಿರ್ಧಾರಕ್ಕೆ ಬರುತ್ತದೆ; 1200 ಚದರ ಅಡಿ ಅಥವಾ ಅದಕ್ಕಿಂತ ಕಡಿಮೆ ಜಾಗದಲ್ಲಿ ನಿರ್ಮಾಣಗೊಂಡ ಕಟ್ಟಡಗಳಿಗೆ ಮೆಸ್ಕಾನಿಂದ ವಿದ್ಯುತ್ ಸಂಪರ್ಕ ನೀಡಬಹುದು. ನಕ್ಷೆ ಉಲ್ಲಂಘಿಸಿದ, ಸೆಟ್ ಬ್ಯಾಕ್ ಬಿಡದ, ಕಾನೂನು ಪಾಲಿಸದ, 30×40 ಅಡಿ ಅಳತೆ ಮೀರಿ ಕಟ್ಟಿದ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಬಾರದೆಂಬ ನಿರ್ಧಾರ ರಾಜ್ಯ ಸರ್ಕಾರ ತೆಗೆದುಕೊಂಡಿದ್ದೇ ತಡ ಭ್ರಷ್ಟ ಅಧಿಕಾರಿ, ಗುತ್ತಿಗೆದಾರರು ರಂಗೋಲಿ ಕೆಳಗೆ ನುಸುಳಿ ಈ ದಿಟ್ಟ ಆದೇಶವನ್ನೇ ಹಣದ ಯಂತ್ರ ಮಾಡಿಕೊಂಡರು ಎಂಬ ಗಂಭೀರ ಆರೋಪಗಳಿವೆ.

30×40 ಅಳತೆ ಮೀರಿದ ಬಂಗ್ಲೆಗಳೇನೋ ನಿರ್ಮಾಣವಾಗಿ ವಿದ್ಯುತ್ ಸಂಪರ್ಕಕ್ಕೆ ಕಾಯುತ್ತಿದ್ದವು. ಇಂಥ ಬಂಗ್ಲೆಗಳಿಗೆ ಈ ಸರ್ಕಾರಿ ಆದೇಶ ನುಂಗಲಾರದ ತುತ್ತಾಯಿತು. ಆದರೆ, ಇಂಥ ಬಂಗಲೆಗಳಿಗೂ ಆ ನಂತರದಲ್ಲಿ ವಿದ್ಯುತ್ ಸಂಪರ್ಕ ಸುಲಭವಾಗಿ ದೊರೆಯುತ್ತಿರುವುದು ನೋಡಿ ಬಹಳಷ್ಟು ವಿದ್ಯುತ್ ಗುತ್ತಿಗೆದಾರರೇ ಹೌಹಾರಿದರು!

ಶಿವಮೊಗ್ಗ ಉಪವಿಭಾಗ 1ರ ಯೂನಿಟ್ 1ರ ಸಹಾಯಕ ಇಂಜಿನಿಯರ್ ನವೀನ್ ತನ್ನ ವ್ಯಾಪ್ತಿಯ ಬಹುತೇಕ ಬಂಗಲೆಗಳಂಥ, ಅಳತೆ ಮೀರಿದ ಮನೆಗಳಿಗೂ ಸುಲಭವಾಗಿ ವಿದ್ಯುತ್ ಸಂಪರ್ಕ ನೀಡಿಸುವಲ್ಲಿ ಯಶಸ್ವಿಯಾದಂತಿದೆ.

ಎಸ್ ಆರ್ ನಂಬರ್ ಗಳಾದ SA-105203, SA- 105010, SA-105211…ಹೀಗೆ ನೂರಾರು ಅಳತೆ ಮೀರಿದ ಮನೆಗಳಿಗೆ ದಾಖಲೆ, ನಕ್ಷೆ ತಿದ್ದುಪಡಿ ಮಾಡಿಯೋ, ನಕಲಿ ದಾಖಲೆಗಳನ್ನೇ ಸೃಷ್ಟಿಸಿಯೋ ಅಕ್ರಮ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮೆಸ್ಕಾಂ ಇಲಾಖೆಯ ಇಂಜಿನಿಯರ್ ಗಳು ಕೆಲ ಗುತ್ತಿಗೆದಾರರೊಂದಿಗೆ ಸೇರಿ 30×50ಅಡಿ ಅಳತೆಯ ಹಾಗೂ ರೆವಿನ್ಯೂ ದಾಖಲೆಗಳನ್ನು ತಿದ್ದುಪಡಿ ಮಾಡಿ ವಿದ್ಯುತ್ ಸಂಪರ್ಕ ನೀಡಿರುವುದು ಇನ್ನೂ ಕತ್ತಲೆಯಲ್ಲಿ ಉಳಿದಿಲ್ಲ…

ಶಿವಮೊಗ್ಗ ಮೆಸ್ಕಾಂ ವೃತ್ತದ ಉಪವಿಭಾಗ ಎರಡರಲ್ಲಂತೂ ಇನ್ನೊಂದು ರೀತಿಯ ರಾಮಾಯಣವೇ ನಡೆಯುತ್ತಿದ್ದು, ಇಲ್ಲಿ ಭ್ರಷ್ಟ ವ್ಯವಸ್ಥೆ ತೋರಿಸುವ ಕಡತಗಳೇ ಕಚೇರಿಯಿಂದ ಕೆಲ ಅಧಿಕಾರಿಗಳು ಹಂಸ ನಡಿಗೆಯ ಮೂಲಕ ಕಾಣೆ ಮಾಡಿದ್ದಾರೆಂದು ಅನುಮಾನ ವ್ಯಕ್ತವಾಗಿವೆ. ಇದ್ದ ಕಡತಗಳೆಲ್ಲ ನಾಪತ್ತೆಯಾದರೆ ಲಕ್ಷ ಲಕ್ಷ ಉಂಡು, ಸ್ಥಳ ಪರಿಶೀಲಿಸದೇ ನೀಡಿದ ವಿದ್ಯುತ್ ಸಂಪರ್ಕಗಳೆಲ್ಲ ಕಣ್ಮರೆಯಾಗಲು ಸಾಧ್ಯವೇ?

ಇಂಥ ಅಕ್ರಮ ವಿದ್ಯುತ್ ಸಂಪರ್ಕಗಳು ಉಪವಿಭಾಗ ಮೂರರಲ್ಲೂ ಕಡಿಮೆಯೇನೂ ನಡೆದಿಲ್ಲ…ಉಪವಿಭಾಗ ಒಂದರ ನವೀನನೇ ಎಲ್ಲದಕ್ಕೂ ಮಾಸ್ಟರ್ ಮೈಂಡ್ ಆಗಿ ಅಕ್ರಮ ವಿದ್ಯುತ್ ಸಂಪರ್ಕಗಳ ಹಿಂದಿದ್ದಾನೆ ಎಂಬುದು ಕೆಲ ಗುತ್ತಿಗೆದಾರರ ಆರೋಪ.

ಇಂಥ ಆರೋಪಗಳು ಬಂದ ಕೂಡಲೇ ಈಗಾಗಲೇ ಲಕ್ಷ ಲಕ್ಷ ನೀಡಿ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಕೆಲ ಗ್ರಾಹಕರಿಗೆ ಮೆಸ್ಕಾಂ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ವಂಚನೆಯ ಜಾಲದೊಳಗಿನ ಗ್ರಾಹಕರೇ ತಮ್ಮನ್ನು ಲೂಟಿ ಮಾಡಿದ ಗುತ್ತಿಗೆದಾರರ, ಅಧಿಕಾರಿಗಳ ಕುಂಡೆಗೆ ಬೆಂಕಿ ಹಚ್ಚುತ್ತಿರುವುದು ಕೂಡ ಒಂದೊಂದಾಗಿಯೇ ಬಹಿರಂಗವಾಗುತ್ತಿದೆ.

ರಾಜ್ಯ ಸರ್ಕಾರಕ್ಕೆ ಕೆಲ ಅಧಿಕಾರಿಗಳು, ಕೆಲ ಗುತ್ತಿಗೆದಾರರಿಂದ ಕೋಟಿ ಕೋಟಿ ಹಣ ವಂಚನೆಯಾಗಿದ್ದು, ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
(ಮುಂದುವರೆಯುವುದು…)