ಭಾಗ-2️⃣ *ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಇದೇನಿದು ಕರ್ಮಕಾಂಡ!* *ನಕಲಿ ನಕ್ಷೆ- ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟನ್ನೇ ಯಾಮಾರಿಸಿದ ಗುತ್ತಿಗೆದಾರರ ಮೇಲೇಕೆ ಸಹಾಯಕ ಇಂಜಿನಿಯರ್ ನವೀನ್ ಗೆ ವಿಶೇಷ ಪ್ರೀತಿ?* *ಏನಿದು ಕರ್ಮ? ಏನಿದು ಮರ್ಮ? ತನಿಖೆ ನಡೆದರೆ ಉರುಳು ಯಾರ್ಯಾರಿಗೆ?*
ಭಾಗ-2️⃣
*ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿ ಇದೇನಿದು ಕರ್ಮಕಾಂಡ!*
*ನಕಲಿ ನಕ್ಷೆ- ದಾಖಲೆ ಸೃಷ್ಟಿಸಿ ಸರ್ಕಾರ ಮತ್ತು ಸುಪ್ರೀಂ ಕೋರ್ಟನ್ನೇ ಯಾಮಾರಿಸಿದ ಗುತ್ತಿಗೆದಾರರ ಮೇಲೇಕೆ ಸಹಾಯಕ ಇಂಜಿನಿಯರ್ ನವೀನ್ ಗೆ ವಿಶೇಷ ಪ್ರೀತಿ?*
*ಏನಿದು ಕರ್ಮ? ಏನಿದು ಮರ್ಮ? ತನಿಖೆ ನಡೆದರೆ ಉರುಳು ಯಾರ್ಯಾರಿಗೆ?*
ಶಿವಮೊಗ್ಗ ಮೆಸ್ಕಾಂ ವೃತ್ತದಲ್ಲಿರುವ ಶಿವಮೊಗ್ಗ ಉಪ ವಿಭಾಗ-1ರ ಸಹಾಯಕ ಇಂಜಿನಿಯರ್ ನವೀನ್ ಈಗ ಸಾಕಷ್ಟು ಚರ್ಚೆಯ ವಿಷಯವಾಗಿದ್ದಾರೆ. ಇತಿಹಾಸದಲ್ಲೇ ಕಂಡು ಕೇಳರಿಯದ ದೊಡ್ಡ ಹಗರಣ ಮಾಡಿದ, ಮಾಡುತ್ತಿರುವ ಕೆಲ ಗುತ್ತಿಗೆದಾರರ ಜೊತೆ ನವೀನ್ ಬಹಳ ಪ್ರೀತಿ ವಿಶ್ವಾಸದಿಂದಲೇ ಕೈ ಜೋಡಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗುತ್ತಿದೆ.
ಈ ವರದಿಯಲ್ಲಿ ದಾಖಲಿಸಿರುವ ಎಸ್ ಆರ್ ನಂಬರ್ ಗಳ ಜೊತೆ ನೂರಾರು ನಂಬರ್ ಗಳಲ್ಲಿ ದಾಖಲೆಗಳನ್ನು ತಿದ್ದಿ ತೀಡಿ, ನಕಲಿ ಮಾಡಿ ಕಾನೂನಾತ್ಮಕವಾಗಿ ನೀಡಲು ಸಾಧ್ಯವಾಗದೇ ಇರುವ ಮನೆ, ಕಟ್ಟಡಗಳಿಗೆ ಸ್ಥಳ ಪರಿಶೀಲನೆ ಮಾಡದೇ ಅಕ್ರಮ ವಿದ್ಯುತ್ ಸಂಪರ್ಕ ನೀಡಿ ಈಗ ಪೀಕಲಾಟಕ್ಕೆ ಸಿಲುಕಿಕೊಂಡಿದ್ದಾರೆ ನವೀನ್.
ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ, ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೂ ದಾಖಲೆಗಳ ಸಮೇತ ಸಹಾಯಕ ಇಂಜಿನಿಯರ್ ನವೀನ್, ಕೆಲ ಭ್ರಷ್ಟ ಗುತ್ತಿಗೆದಾರರ ವಿರುದ್ಧ ದೂರುಗಳನ್ನು ನೀಡುವ ಪ್ರಕ್ರಿಯೆಗಳೂ ಮುಂದುವರೆದಿವೆ.
ಶಿವಮೊಗ್ಗ ಉಪ ವಿಭಾಗದಲ್ಲಂತೂ ಅಕ್ರಮ ವಿದ್ಯುತ್ ಸಂಪರ್ಕಗಳ ಮಹಾ ಮೇಳವೇ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಇಲಾಖೆ ಸೂಕ್ತ ರೀತಿಯಲ್ಲಿ ತನಿಖೆ ಮಾಡಿದರೆ ಸುಗ್ರೀವಾಜ್ಞೆ ಹೊರಡಿಸಿರುವ ಸುಪ್ರೀಂ ಕೋರ್ಟೇ ಬೆಚ್ಚಿ ಬೀಳುವುದರಲ್ಲಿ ಸಂದೇಹವಿಲ್ಲ
( ಮುಂದುವರೆಯುವುದು…)


