*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್* *ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು* ಸಾಗರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!*
*ನಕಲಿ ಪಿಹೆಚ್ ಡಿ ಪದವಿ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿದ್ದ ಶಿಕಾರಿಪುರದ ಮಾದೇಶ ಪ್ರಭುಗೆ ಗೇಟ್ ಪಾಸ್*
*ಹಾಲಿ ಶಿಕಾರಿಪುರದ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕನಾಗಿದ್ದ ಮಾದೇಶ ಪ್ರಭು*
ಸಾಗ
ರದ ಇಂದಿರಾಗಾಂಧಿ ಕಾಲೇಜಲ್ಲೂ ಕೆಲಸ ಮಾಡಿದ್ದ ಮಾದೇಶ ಪ್ರಭು- ನಕಲಿ ದಾಖಲೆಗಳಲ್ಲೇ 12 ವರ್ಷ ಅತಿಥಿ ಉಪನ್ಯಾಸಕ ಸೇವೆ!*
ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಸುಳ್ಳು ಪಿಹೆಚ್ ಡಿ ಪ್ರಮಾಣ ಪತ್ರ ನೀಡಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಮಾದೇಶ ಪ್ರಭು ಎಂಬಾತನನ್ನು ಏ.17ರ ಇಂದು ಸೇವೆಯಿಂದ ತೆಗೆದು ಹಾಕಲಾಗಿದೆ.
ಕಳೆದ 12 ವರ್ಷಗಳಿಂದ ಈ ನಕಲಿ ಪಿಹೆಚ್ ಡಿ ದಾಖಲೆಯಿಟ್ಟುಕೊಂಡೇ ಮಾದೇಶ ಪ್ರಭು ಸಾಗರದ ಇಂದಿರಾಗಾಂಧಿ ಕಾಲೇಜಲ್ಲಿ, ಕಳೆದ ಡಿಸೆಂಬರಿಂದ ಶಿಕಾರಿಪುರ ಪ್ರಥನ ದರ್ಜೆ ಕಾಲೇಜಲ್ಲಿ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುತ್ತಿದ್ದ.
ಅತಿಥಿ ಉಪನ್ಯಾಸಕರ ಫೇಕ್ ದಾಖಲೆಗಳ ವಿರುದ್ಧ ರಾಜ್ಯ ಸರ್ಕಾರ ಗಂಭೀರ ಕ್ರಮಗಳಿಗೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎಸ್ ಓ ಪಿ ಮೂಲಕ ಈತ ಪಿಹೆಚ್ ಡಿ ಪಡೆದಿದ್ದೇನೆ ಎಂದು ಹೇಳಿದ ಉತ್ತರ ಪ್ರದೇಶದ ಜಾನ್ಸಿಯಲ್ಲಿರುವ ಬುಂದೇಲ್ ಖಂಡ್ ವಿಶ್ವವಿದ್ಯಾನಿಲಯಕ್ಕೆ ಶಿಕಾರಿಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಚನ್ನಪ್ಪ ಇ-ಮೈಲ್ ಮೂಲಕ ಮಾಹಿತಿ ಕೇಳಿದ್ದರು.
ಬುಂದೇಲ್ ಖಂಡ್ ಯೂನಿರ್ಸಿಟಿಯು ವರದಿ ನೀಡಿದ್ದು, ಮಾದೇಶ ಪ್ರಭು ಎಂಬ ವ್ಯಕ್ತಿ ಸಂಬಂಧಿಸಿದ ವಿಷಯದ ಮೇಲೆ ಪಿಹೆಚ್ ಡಿ ಪದವಿಯನ್ನು ಇಲ್ಲಿ ಪಡೆದಿರುವುದಿಲ್ಲ ಎಂದು ಆ ವರದಿಯಲ್ಲಿದೆ.
ಈ ವರದಿಯ ಆಧಾರದ ಮೇಲೆ ಮಾದೇಶ ಪ್ರಭುನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಕಾಲೇಜು ಪ್ರಾಂಶುಪಾಲರಾದ ಚನ್ನಪ್ಪ ಸ್ಪಷ್ಟಪಡಿಸಿದ್ದಾರೆ.
ಈ ನಕಲಿ ಉಪನ್ಯಾಸಕ ಪ್ರತಿ ತಿಂಗಳು 38,000₹ ಸಂಬಳ ಪಡೆದುಕೊಳ್ಳುತ್ತಿದ್ದ. ಅಸಲಿ ದಾಖಲೆಗಳನ್ನಿಟ್ಟುಕೊಂಡು ಅತಿಥಿ ಉಪನ್ಯಾಸಕರಾಗಲು ಹೋರಾಡುತ್ತಿರುವ ಪ್ರಾಮಾಣಿಕರಿಗೆ ಈಗಲಾದರೂ ನ್ಯಾಯಸಿಗಬೇಕಿದೆ.
ಇತ್ತೀಚೆಗಷ್ಟೇ ಶಿವಮೊಗ್ಗ ಮಹಿಳಾ ಕಾಲೇಜಿನ ಇತಿಹಾಸ ವಿಷಯದ ಅತಿಥಿ ಉಪನ್ಯಾಸಕಿ ಶ್ರೀದೇವಿ, ಹೊನ್ನಾಳಿ ಕಾಲೇಜಿನ ಪುಷ್ಪಲತಾ ಕೂಡ ಫೇಕ್ ಸರ್ಟಿಫಿಕೇಟ್ ನೀಡಿ ಕೆಲಸ ಗಿಟ್ಟಿಸಿಕೊಂಡು ಆ ನಂತರ ಸಿಕ್ಕಿಬಿದ್ದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.


