*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್*

*ಶಿವಮೊಗ್ಗದ ನವುಲೆಯಲ್ಲಿ ಡಿ.ಎಸ್.ಅರುಣ್ ಉಸ್ತುವಾರಿಯಲ್ಲಿ ಗಮನ ಸೆಳೆಯುತ್ತಿದೆ ಕ್ರಿಕೆಟ್ ಸಮ್ಮರ್ ಕ್ಯಾಂಪ್*

ಶಿವಮೊಗ್ಗದ KSCA ನವುಲೆ ಸ್ಟೇಡಿಯಂನಲ್ಲಿ ನಡೆದ KSCA ಅಕಾಡೆಮಿ ಸಮ್ಮರ್ ಕ್ಯಾಂಪ್ ಉದ್ಘಾಟನಾ ಸಮಾರಂಭ ನಡೆಯಿತು.

ಈ ಕಾರ್ಯಕ್ರಮವನ್ನು ಎಸ್ ಪಿ ನಿಖಿಲ್ ಬಿ. ಉದ್ಘಾಟಿಸಿದರು.
ಈ ಸಮಾರಂಭದಲ್ಲಿ ಅವಿನಾಶ್ ವೈದ್ಯ, ಆರ್. ಪಿ. ನಾಗರಾಜ್, ಮಾಜಿ ವಲಯ ಅಧ್ಯಕ್ಷರಾದ ರಾಜೇಂದ್ರ ಕಾಮತ್ ಎನ್., ಎಸ್. ಎಸ್. ಸುಕುಮಾರ್ ಪಟೇಲ್, ಮಾಜಿ ವಲಯ ಸಂಚಾಲಕರಾದ D R . ನಾಗರಾಜ್, ಸದಾನಂದ ಹೆಚ್.ಎಸ್., ಹಾಗೂ KSCA ಪದಾಧಿಕಾರಿಗಳು, ತರಬೇತುದಾರರು, ಪೋಷಕರು, ಕ್ಲಬ್ ಕಾರ್ಯದರ್ಶಿಗಳು, ಜೀವಮಾನ ಸದಸ್ಯರು, ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭವಾಗಿ, ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟನೆ ನೆರವೇರಿತು. ನಂತರ ಹಸಿರು ಅಭಿಯಾನದ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಅಂಡರ್-14 ಬಾಲಕರು, ಅಂಡರ್-16 ಬಾಲಕರು, ಅಂಡರ್-19 ಬಾಲಕರು, ಅಂಡರ್-15 ಬಾಲಕಿಯರು ಹಾಗೂ ಅಂಡರ್-19 ಮಹಿಳಾ ವಿಭಾಗಗಳ ಸಮರ್ ಕ್ಯಾಂಪ್‌ಗಳಿಗೆ ಚಾಲನೆ ನೀಡಲಾಯಿತು.

ಶಿವಮೊಗ್ಗ ವಲಯದ ಸಂಚಾಲಕ, ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ರವರ ನೇತೃತ್ವದಲ್ಲಿ ಈ ಶಿಬಿರ ವಿಶೇಷವಾಗಿ ಗಮನ ಸೆಳೆಯುತ್ತಿದೆ.