ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ *ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ* *ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ* *ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?*

ಮಂಗಳಮುಖಿಯನ್ನೇ ದೋಚಿದ್ದ ಆಟೋ ಚಾಲಕ ದೇವರಾಜನ ಬಂಧನ

*ಪ್ರಕರಣ ದಾಖಲಾಗಿ 12 ಗಂಟೆಯೊಳಗೇ ಪೊಲೀಸ್ ಬಲೆಗೆ ಬಿದ್ದ ಚೋರ*

*ಪಿಎಸ್ ಐ ತಿರುಮಲೇಶ್ ತಂಡದ ವಿಶೇಷ ಸಾಧನೆ*

*ಏನಿದು ಪ್ರಕರಣ? ಹೇಗಿತ್ತು ಕಾರ್ಯಾಚರಣೆ?*

ಮಂಗಳ ಮುಖಿಯನ್ನೇ ಅಪಹರಿಸಿ ಲೂಟಿ ಮಾಡಿದ್ದ ಆಟೋ ಚಾಲಕ ಶಿವಮೊಗ್ಗದ ಹಳೆ ಮಂಡ್ಲಿಯ ದೇವರಾಜ್(27) ಎಂಬಾತನನ್ನು ವಿನೋಬನಗರ ಠಾಣೆ ಪೊಲೀಸರು ಬಂಧಿಸಿ, ಆತನಿಂದ 3.20 ಲಕ್ಷ ರೂ.,ಗಳ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿಯಿಂದ ಓರ್ವ ಮಂಗಳಮುಖಿಯನ್ನು ಆಟೋದಲ್ಲಿ ಕೂರಿಸಿಕೊಂಡು ಹೋದ ದೇವರಾಜ, 4 ಸಾವಿರ ರೂ., ನಗದು, ಮೊಬೈಲ್, ಕೊರಳ ಚೈನ್, ಬಂಗಾರದ ಉಂಗುರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಈ ಸಂಬಂಧ ಏ.24 ರಂದು ಪ್ರಕರಣ ದಾಖಲಾಗಿತ್ತು. ಎಸ್ ಪಿ ನಿಖಿಲ್, ಅಡಿಷನಲ್ ಎಸ್ ಪಿ ಎ.ಜಿ.ಕಾರಿಯಪ್ಪ, ಡಿವೈಎಸ್ ಪಿ ಟಿ.ಡಿ.ಸಂಜೀವಕುಮಾರ್ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆಯ ಪ್ರಭಾರ ಸಿಪಿಐ ಸುರೇಶ್ ಉಸ್ತುವಾರಿಯಲ್ಲಿ ಪಿಎಸ್ ಐ ಜಿ.ತಿರುಮಲೇಶ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆರೋಪಿ ದೇವರಾಜನನ್ನು ಕೇವಲ 12 ಗಂಟೆಗಳಲ್ಲಿ ಬಂಧಿಸಿ ಅಚ್ಚರಿ ಮೂಡಿಸಿದ್ದಾರೆ.

20 ಸಾವಿರ ರೂ.,ಗಳ ಮೌಲ್ಯದ ಮೊಬೈಲ್, ಕೃತ್ಯಕ್ಕೆ ಬಳಸಿದ ಆಟೋ, 3 ಲಕ್ಷ ಹಾಗೂ ಚಾಕೂ ಸೇರಿದಂತೆ ಒಟ್ಟು 3.20 ಲಕ್ಷ ರೂ.,ಗಳ ಮೌಲ್ಯದ ಮಾಲು ವಶಕ್ಕೆ ಪಡೆದಿದ್ದಾರೆ.

ಈ ತನಿಖಾ ತಂಡದಲ್ಲಿ ಸಿಬ್ಬಂದಿಗಳಾದ ಕೆ.ಆರ್.ರಾಜು, ಬಿ.ಚಂದ್ರಾನಾಯ್ಕ, ವಿಜಯಕುಮಾರ್, ಮನುಶಂಕರ ಇದ್ದರು.ಎಸ್ ಪಿ ನಿಖಿಲ್ ಎಲ್ಲರಿಗೂ ಅಭಿನಂದಿಸಿದ್ದಾರೆ.