*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…* *ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…* *ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?*

*ಶಿವಮೊಗ್ಗದ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ…*

*ಫೇಸ್ ಬುಕ್ ಪರಿಚಯ- ಪ್ರೀತಿ- ಅತ್ಯಾಚಾರ- ಗರ್ಭಿಣಿ- ಅಬಾರ್ಷನ್- ಕೊಲೆ ಬೆದರಿಕೆ…*

*ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಬಂಧನ ಈವರೆಗೆ ಯಾಕಾಗಿಲ್ಲ?*

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿರುವ ಪೊಲೀಸ್ ಕಾನ್ಸ್ ಟೆಬಲ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯುವತಿಗೆ ಫೇಸ್ ಬುಕ್ ನಲ್ಲಿ ಪರಿಚಯಿಸಿಕೊಂಡ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ಆನಂತರ ಪ್ರೀತಿಸುವ ನಾಟಕವಾಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೇ, ಆಕೆ ಗರ್ಭಿಣಿಯಾದಾಗ ಅಬಾರ್ಷನ್ ಕೂಡ ಬಲವಂತವಾಗಿ ಮಾಡಿಸಿದ್ದಾನೆಂದು ಯುವತಿ ನೀಡಿದ ಲಿಖಿತ ದೂರಿನಲ್ಲಿದೆ.

ಫೇಸ್ ಬುಕ್ಕಲ್ಲಿ ಪರಿಚಯವಾಗಿದ್ದ ಪೊಲೀಸ್ ಈರೇಶ್ ಬಾಬು, 2025ರ ಅಕ್ಟೋಬರ್ 30 ರಂದು ಬೆಳಿಗ್ಗೆ ಬಸ್ ನಿಲ್ದಾಣಕ್ಕೆ ಊರಿಂದ ಬಂದಿಳಿದಾಗ ಭೇಟಿ ಮಾಡಿದ. ಆನಂತರ ಪುಸಲಾಯಿಸಿ ನೆಹರೂ ರಸ್ತೆಯಲ್ಲಿರುವ ಲಾಡ್ಜಿಗೆ ಕರೆದುಕೊಂಡು ಹೋಗಿದ್ದಾನೆ. ಬರಲ್ಲ ಎಂದರೂ ಪೊಲೀಸ್ ಎಂದು ಹೆದರಿಸಿದ್ದಾನೆ. ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಗರ್ಭಿಣಿ ಎಂದು ತಿಳಿದಾಗ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಯಾವುದೋ ಮಾತ್ರೆ ಕೊಟ್ಟು ಅಬಾರ್ಷನ್ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾಳೆ.

ಫೋನ್ ಮಾಡಿಯೂ ಕೊಲೆ ಬೆದರಿಕೆ ಹಾಕುತ್ತಿದ್ದ ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬು ವಿರುದ್ಧ ಯುವತಿ ನೀಡಿದ ದೂರಿನ ಮೇಲೆ ಶಿವಮೊಗ್ಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಾಗಿ ಹಲವು ದಿನಗಳೇ ಕಳೆದಿದ್ದರೂ ಆರೋಪಿ ಪೊಲೀಸ್ ಕಾನ್ಸ್ ಟೆಬಲ್ ಈರೇಶ್ ಬಾಬುನನ್ನು ಪೊಲೀಸರು ಬಂಧಿಸಿಲ್ಲ. ಆತ ಕಣ್ಮರೆಯಾಗಿದ್ದಾನೆಂದು ಅಧಿಕೃತ ಮೂಲಗಳು ತಿಳಿಸಿವೆ.

*ಮಹಿಳಾ ಆಯೋಗದಿಂದ ಎಸ್ ಪಿ ಗೆ ಪತ್ರ*

ಸಂತ್ರಸ್ತ ಯುವತಿ ರಾಜ್ಯ ಮಹಿಳಾ ಆಯೋಗಕ್ಕೂ ಲಿಖಿತ ದೂರು ನೀಡಿದ್ದು, ಆಯೋಗ ಶಿವಮೊಗ್ಗದ ಎಸ್ ಪಿ ಯವರಿಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.