*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”* *ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್*

*ಇಬ್ಬರು ದರೋಡೆಕೋರರನ್ನು ಬಂಧಿಸಿ ಜೈಲಿಗಟ್ಟಿದ ಶಿವಮೊಗ್ಗ ಗ್ರಾಮಾಂತರ ಪೊಲೀಸರು…”*

*ಕಾರಿನಿಂದ ಇಳಿದಿದ್ದೇ ತಡ ಚಾಕು ತೋರಿಸಿ ದರೋಡೆ ಮಾಡಿದ್ದ ದೀಪು- ಲಿಖಿತ್*

ಸವಳಂಗದಿಂದ ಶಿವಮೊಗ್ಗಕ್ಕೆ ಕಾರಿನಲ್ಲಿ ವಾಪಸ್ ಆಗುತ್ತಿದ್ದಾಗ ಮೂತ್ರ ವಿಸರ್ಜನೆಗೆ ಇಳಿದ ಹೊತ್ತಲ್ಲಿ ಚಾಕು ತೋರಿಸಿ ನಗದು ಹಣ, ಚಿನ್ನದ ಬ್ರಾಸ್ ಲೈಟ್ ದರೋಡೆ ಮಾಡಿದ್ದ ಇಬ್ಬರು ಯುವಕರನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಕೊಮ್ಮನಾಳಿನ ಲಿಖಿತ್ ಮತ್ತು ಬಿಕ್ಕೋನಹಳ್ಳಿಯ ದೀಪು ಬಂಧಿತರು. ಈ ಇಬ್ಬರು ಕಾರಿನಿಂದ ಮೂತ್ರ ವಿಸರ್ಜನೆಗೆಂದು ಕೆಳಗಿಳಿದಿದ್ದ ಆರ್.ಸುಭಾಷ್ ಎಂಬುವವರಿಗೆ ಆ.14 ರ ರಾತ್ರಿ ಒಂಭತ್ತರ ಸುಮಾರಿಗೆ ಚಾಕು ತೋರಿಸಿ 2 ಸಾವಿರ ರೂ., ನಗದು, 90 ಸಾವಿರ ರೂ., ಬೆಲೆ ಬಾಳುವ ಚಿನ್ನದ ಬ್ರಾಸ್ ಲೈಟ್ ದೋಚಿ ಪರಾರಿಯಾಗಿದ್ದರು.

ಈ ಇಬ್ಬರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ದರೋಡೆ ಸವಳಂಗ ರಸ್ತೆಯ ಕೊಮ್ಮನಾಳು ಬಳಿಯ ಜ್ಞಾನ ಸಾಗರ ಶಾಲೆ ಬಳಿ ನಡೆದಿತ್ತು.