*ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ* *ಇನ್ನುಮೇಲೆ ದಸರಾ ಡಿಸಿ ಅಧ್ಯಕ್ಷತೆಯಲ್ಲಿ ನಡೆಯಲಿ…* *ಪ್ರತಿಭಟನೆಯಲ್ಲಿ ಎರಡು ಚರಣ ವಂದೇ ಮಾತರಂ ಹಾಡಿದ ಅಪಾರ ಕಾಂಗ್ರೆಸ್ ಪ್ರತಿಭಟನಾಕಾರರು*
*ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ*
*ಇನ್ನುಮೇಲೆ ದಸರಾ ಡಿಸಿ ಅಧ್ಯಕ್ಷತೆಯಲ್ಲಿ ನಡೆಯಲಿ…*
*ಪ್ರತಿಭಟನೆಯಲ್ಲಿ ಎರಡು ಚರಣ ವಂದೇ ಮಾತರಂ ಹಾಡಿದ ಅಪಾರ ಕಾಂಗ್ರೆಸ್ ಪ್ರತಿಭಟನಾಕಾರರು*

ನಾಡಹಬ್ಬ ಶಿವಮೊಗ್ಗ ದಸರಾದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿ ಶಾಸಕ, ದಸರಾ ಸಮಿತಿ ಅಧ್ಯಕ್ಷರೂ ಆದ ಎಸ್.ಎನ್.ಚನ್ನಬಸಪ್ಪ ಹಾಗೂ ಆಯುಕ್ತ ಮಾಯಣ್ಣಗೌಡರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.
ದಸರಾ ಸಮಿತಿ ಅಧ್ಯಕ್ಷರಾಗಿರೋ ಶಾಸಕ ಚನ್ನಿ ಯವರ ಅಧ್ಯಕ್ಷತೆಯಲ್ಲೇ ದಸರಾ ಮುಂದುವರೆಸುವುದು ಬೇಡ. ಜಿಲ್ಲಾಧಿಕಾರಿಗಳೇ ಸಮಿತಿ ಅಧ್ಯಕ್ಷರಾಗಿದ್ದುಕೊಂಡು ದಸರಾವನ್ನು ವೈಭವಯುತವಾಗಿ ನಡೆಸಬೇಕು. ನಮ್ಮ ಹೋರಾಟ ದಸರಾ ವಿರುದ್ಧ ಅಲ್ಲ. ಅಲ್ಲಿರುವ ಕೆಲ ಕುತ್ಸಿತ ಬುದ್ದಿಗಳ ವಿರುದ್ಧ ಎಂದು ಟೀಕಿಸಿದರು.
ವಂದೇಮಾತರಂ ಎರಡು ಚರಣಗಳಿಗೇ ಹಾಡುವುದನ್ನು ನಿಲ್ಲಿಸದೇ ಸರ್ಕಾರಿ ಆದೇಶ ಉಲ್ಲಂಘಿಸಲಾಗಿದೆ. ಹಾಗಾಗಿ, ಶಾಸಕ ಚನ್ನಿಯವರಿಗೆ ಸಮಿತಿ ಅಧ್ಯಕ್ಷರಾಗಿ ಮುಂದುವರೆಸಬಾರದು. ಸರ್ಕಾರಿ ಆದೇಶ ಪಾಲಿಸದ ನಗರಪಾಲಿಕೆ ಆಯುಕ್ತ ಮಾಯಣ್ಣ ಗೌಡರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದರು.


