ಮೆಕ್ಕಾ ಮಸೀದಿ ಆವರಣದಲ್ಲಿ ಅಶ್ಲೀಲ ಕೃತ್ಯ; ಇಬ್ಬರಿಗೂ ಗಲ್ಲಿಗೇರಿಸಿದ ಸೌದಿ ಅರೇಬಿಯಾ
ಮೆಕ್ಕಾ ಮಸೀದಿ ಆವರಣದಲ್ಲಿ ಅಶ್ಲೀಲ ಕೃತ್ಯ;
ಇಬ್ಬರಿಗೂ ಗಲ್ಲಿಗೇರಿಸಿದ ಸೌದಿ ಅರೇಬಿಯಾ
ಪವಿತ್ರ ಮಕ್ಕಾ ಮಸೀದಿಯ ಆವರಣದಲ್ಲಿ ಅಸಭ್ಯ ಹಾಗೂ ಆಕ್ಷೇಪಾರ್ಹ ಕೃತ್ಯಗಳಲ್ಲಿ ತೊಡಗಿದ್ದ ಬಾಂಗ್ಲಾದೇಶ ಮೂಲದ ಇಬ್ಬರು ವ್ಯಕ್ತಿಗಳಿಗೆ ಸೌದಿ ಅರೇಬಿಯಾ ಆಡಳಿತ ಮರಣದಂಡನೆ ಶಿಕ್ಷೆ ಜಾರಿಗೊಳಿಸಿದೆ. ಅಕ್ಟೋಬರ್ 14ರಂದು ಮಕ್ಕಾ ವ್ಯಾಪ್ತಿಯಲ್ಲಿ ಇಬ್ಬರನ್ನೂ ಗಲ್ಲಿಗೇರಿಸಲಾಗಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಘಟನೆಯ ವಿವರ:
ಬಾಂಗ್ಲಾದೇಶ ಮೂಲದ ಅಬ್ದುಲ್ ಬಶೀರ್ ಮತ್ತು ಸಿತಿ ಅತ್ತರ್ ಎಂಬ ಇಬ್ಬರು ವ್ಯಕ್ತಿಗಳು ಪವಿತ್ರ ಮಸೀದಿಯೊಳಗೆ ತೀವ್ರ ಆಕ್ಷೇಪಾರ್ಹ ಮತ್ತು ಅಸಭ್ಯ ನಡವಳಿಕೆ ತೋರಿದ್ದಾರೆ ಎಂದು ಆರೋಪಿಸಲಾಗಿತ್ತು. ಭದ್ರತಾ ಸಿಬ್ಬಂದಿ ಇವರ ಕೃತ್ಯವನ್ನು ಗಮನಿಸಿ ತಕ್ಷಣವೇ ಇಬ್ಬರನ್ನೂ ವಶಕ್ಕೆ ಪಡೆದು, ಮುಂದಿನ ಕಾನೂನು ಕ್ರಮಕ್ಕಾಗಿ ಪೊಲೀಸರಿಗೆ ಒಪ್ಪಿಸಿದ್ದರು.
48 ಗಂಟೆಗಳಲ್ಲೇ ಮರಣದಂಡನೆ ಜಾರಿ:
ಈ ಪ್ರಕರಣದ ವಿಚಾರಣೆ ನಡೆಸಿದ ಸೌದಿ ನ್ಯಾಯಾಲಯವು ಆರೋಪಿಗಳ ಮೇಲಿನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಬಳಿಕ, ಸೌದಿ ಅರೇಬಿಯಾದ ಆಡಳಿತಗಾರರು ಈ ಮರಣದಂಡನೆ ಶಿಕ್ಷೆಯನ್ನು ಅನುಮೋದಿಸಿ ಅಧಿಕೃತ ರಾಜಾಜ್ಞೆ (ರಾಯಲ್ ಡಿಕ್ರಿ) ಹೊರಡಿಸಿದರು.
ಶರಿಯಾ ಕಾನೂನಿನ ನಿಯಮಾವಳಿಗಳ ಅನ್ವಯ, ರಾಜಾಜ್ಞೆ ಜಾರಿಯಾದ ಕೇವಲ 48 ಗಂಟೆಗಳ ಒಳಗಾಗಿ ಇಬ್ಬರೂ ಅಪರಾಧಿಗಳನ್ನು ಮಕ್ಕಾ ಪ್ರದೇಶದಲ್ಲಿ ಗಲ್ಲಿಗೇರಿಸುವ ಮೂಲಕ ಶಿಕ್ಷೆಯನ್ನು ಪೂರ್ಣಗೊಳಿಸಲಾಗಿದೆ. ಪವಿತ್ರ ಧಾರ್ಮಿಕ ಸ್ಥಳಗಳ ಪಾವಿತ್ರ್ಯತೆಯನ್ನು ಕಾಪಾಡುವಲ್ಲಿ ಕಠಿಣ ಕ್ರಮ ಕೈಗೊಳ್ಳುವ ಸೌದಿ ನಿಯಮಗಳಿಗೆ ಈ ಘಟನೆ ಮತ್ತೊಂದು ನಿದರ್ಶನವಾಗಿದೆ.
(FB NEWS)


