ಮಕ್ಕಳಿಗೆ ಸ್ಕೂಟರ್ ಓಡಿಸಲು ಕೊಟ್ಟು ಕೋರ್ಟ್ ನಿಂದ 26,500₹ ದಂಡದ ಶಿಕ್ಷೆ ಅನುಭವಿಸಿದ ಮಹಿಳೆ ಏನಿದು ಪ್ರಕರಣ? ಮಕ್ಕಳಿಗೇಕೆ ಓಡಿಸಲು ವಾಹನ ಕೊಡ್ತಿದೀರಿ ಪೋಷಕರೇ? ಪೋಷಕರೇ ಹುಷಾರ್…
ಮಕ್ಕಳಿಗೆ ಸ್ಕೂಟರ್ ಓಡಿಸಲು ಕೊಟ್ಟು ಕೋರ್ಟ್ ನಿಂದ 26,500₹ ದಂಡದ ಶಿಕ್ಷೆ ಅನುಭವಿಸಿದ ಮಹಿಳೆ
ಏನಿದು ಪ್ರಕರಣ? ಮಕ್ಕಳಿಗೇಕೆ ಓಡಿಸಲು ವಾಹನ ಕೊಡ್ತಿದೀರಿ ಪೋಷಕರೇ?
ಪೋಷಕರೇ ಹುಷಾರ್…

ದಿನಾಂಕ: 09-10-2026 ರಂದು ಸಂಜೆ 5:57 ಗಂಟೆಗೆ ಶಿವಮೊಗ್ಗ ನಗರದ ಆಲ್ಕೊಳ ಸರ್ಕಲ್ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಮತಿ ಸ್ವಪ್ನಾ ಎಲ್. ಹಾಗೂ ಸಿಬ್ಬಂದಿಗಳಾದ ಶ್ರೀ ಸೂರ್ಯನಾಯ್ಕ, ಸಿಪಿಸಿ-1275 ಮತ್ತು ಶ್ರೀ ಮೊಹಮ್ಮದ್ ಫಾರೂಕ್, ಸಿಪಿಸಿ-1371 ಅವರು ವಿನೋಬನಗರ ಪೊಲೀಸ್ ಚೌಕಿ ರಸ್ತೆಯ ಕಡೆಯಿಂದ ಆಲ್ಕೊಳ ಸರ್ಕಲ್ ಕಡೆಗೆ ಅಪ್ರಾಪ್ತ ಬಾಲಕನೊಬ್ಬ KA-14-EU-***ನೋಂದಣಿ ಸಂಖ್ಯೆಯ TVS Jupiter ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದುದನ್ನು ಗಮನಿಸಿ, ತಡೆದು ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ಸದರಿ ಸ್ಕೂಟರ್ನ ನೋಂದಾಯಿತ ಮಾಲೀಕರಾದ ಆಲ್ಕೊಳ, ಕಟ್ಟೆ ಸುಬ್ಬಣ್ಣ ರಸ್ತೆ, ಶಿವಮೊಗ್ಗ ನಿವಾಸಿ ಶ್ರೀಮತಿ ***** , ಕೋಂ *****, (ವಯಸ್ಸು 40 ವರ್ಷ) ಅವರು ಅಪ್ರಾಪ್ತ ಬಾಲಕನಿಗೆ ವಾಹನ ಚಲಾಯಿಸಲು ನೀಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ, ಅವರ ವಿರುದ್ಧ ಮೋಟಾರು ವಾಹನ ಕಾಯ್ದೆಯ ಕಲಂ 199(ಎ), 146, 196, 190(2) ಹಾಗೂ ಕೇಂದ್ರ ಮೋಟಾರು ವಾಹನ ನಿಯಮಾವಳಿ 115ರ ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಘನ 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯವು ವಾಹನದ ನೋಂದಾಯಿತ ಮಾಲೀಕರಿಗೆ ₹26,500/- ದಂಡ ವಿಧಿಸಿದೆ.
⚠️ ಪೋಷಕರಿಗೆ ಎಚ್ಚರಿಕೆ:
▪️ ಅಪ್ರಾಪ್ತರಿಗೆ ಯಾವುದೇ ಮೋಟಾರು ವಾಹನವನ್ನು ಚಲಾಯಿಸಲು ನೀಡಬೇಡಿ.
▪️ ಮಕ್ಕಳ ಸುರಕ್ಷತೆ ಹಾಗೂ ಸಾರ್ವಜನಿಕರ ಜೀವ ರಕ್ಷಣೆಗೆ ಆದ್ಯತೆ ನೀಡಿ.
▪️ ಸಂಚಾರ ನಿಯಮಗಳನ್ನು ಪಾಲಿಸಿ, ಕಾನೂನು ಕ್ರಮಕ್ಕೆ ಒಳಗಾಗುವುದನ್ನು ತಪ್ಪಿಸಿ.
ನಿಮ್ಮ ಜವಾಬ್ದಾರಿ – ಸುರಕ್ಷಿತ ಸಂಚಾರಕ್ಕೆ ಸಹಭಾಗಿತ್ವ.
🚔 ಶಿವಮೊಗ್ಗ ನಗರ ಸಂಚಾರ ಪೊಲೀಸ್
ಸಂಚಾರ ನಿಯಮ ಪಾಲಿಸಿ – ಜೀವ ಉಳಿಸಿ!


