*ಶಿವಮೊಗ್ಗದಲ್ಲಿ ಕೃಷಿಮೇಳ;* *ಅ.31ಕ್ಕೆ ಸಚಿವ ಮಧು ಬಂಗಾರಪ್ಪರಿಂದ ಪುಸ್ತಕ/ ತಾಂತ್ರಿಕ ಕೈಪಿಡಿಗಳನ್ನ ಬಿಡುಗಡೆ* *ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹೆಚ್.ಡಿ.ದೇವಿಕುಮಾರ್ ವಿವರಣೆ*
*ಶಿವಮೊಗ್ಗದಲ್ಲಿ ಕೃಷಿಮೇಳ;*
*ಅ.31ಕ್ಕೆ ಸಚಿವ ಮಧು ಬಂಗಾರಪ್ಪರಿಂದ ಪುಸ್ತಕ/ ತಾಂತ್ರಿಕ ಕೈಪಿಡಿಗಳನ್ನ ಬಿಡುಗಡೆ*
*ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹೆಚ್.ಡಿ.ದೇವಿಕುಮಾರ್ ವಿವರಣೆ*
ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯವು ಬರ ನಿರ್ವಹಣೆಗಾಗಿ ನಾವಿನ್ಯತೆ ಕೃಷಿ ಎಂಬ ಧ್ಯೇಯವಾಕ್ಯ ದೊಂದಿಗೆ ಶುಕ್ರವಾರದಿಂದ ಕೃಷಿ ಮೇಳವನ್ನ ಆರಂಭಿಸಿದ್ದು, 4 ದಿನಗಳ ಕಾಲ ನಡೆಯುವ ಈ ಮೇಳಕ್ಕೆ ರೈತರು, ಸಾರ್ವಜ ನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರಯೋಜನ ಪಡೆದುಕೊಳ್ಳು ವಂತೆ ಕೃಷಿ ವಿವಿ ಆಡಳಿತ ಮಂಡಳಿ ಸದಸ್ಯ ಹೆಚ್.ಡಿ.ದೇವಿಕುಮಾರ್ ಮನವಿ ಮಾಡಿದ್ದಾರೆ.
ಮೇಳದ ಎರಡನೇ ದಿನವಾದ ಶನಿವಾರ(ಅ.31 ರಂದು) ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಪುಸ್ತಕ/ ತಾಂತ್ರಿಕ ಕೈಪಿಡಿಗಳನ್ನ ಬಿಡುಗಡೆ ಮಾಡಲಿದ್ದಾರೆ. ಈ ವೇಳೆ ಸಂಸದರು, ಶಾಸಕರು, ಮೇಲ್ಮನೆ ಸದಸ್ಯರು ಜೊತೆಗೆ ನಿಗಮ ಮಂಡಳಿಯ ಅಧ್ಯಕ್ಷರು ಕೂಡ ಪಾಲ್ಗೊಳ್ಳಲ್ಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಬಾರಿಯ ಮೇಳ ಹಲವು ಕಾರಣಕ್ಕೆ ವಿಶೇಷತತೆ ಹೊಂದಿದೆ.ಬರ ನಿರ್ವಹಣೆ ಸಂಬಂಧಪಟ್ಟ ಆಧುನಿಕ ಕೃಷಿ ವಿಧಾನಗಳ ಪ್ರದರ್ಶನದ ಜೊತೆಗೆ ನವೀನ ತಂತ್ರಜ್ಞಾನ ಅನೇಕ ಕೃಷಿ ಪರಿಕರಗಳ ಪ್ರದರ್ಶನವು ಇದೆ.ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಇವುಗಳನ್ನು ವಿಕ್ಷೀಸುವುದರ ಜೊತೆಗೆ ಕೃಷಿಯಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.


