*ನಾಳೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ;* *ಕಾಂಗ್ರೆಸ್ಸಿಗರಿಗೇ ಅವಕಾಶ ಕಲ್ಪಿಸಿಕೊಡಲು ಶಿವಕುಮಾರ್- ಕಲೀಂ ಪಾಷ ನೇತೃತ್ವದ ತಂಡದಿಂದ ಒತ್ತಾಯ*

*ನಾಳೆ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆ;*

*ಕಾಂಗ್ರೆಸ್ಸಿಗರಿಗೇ ಅವಕಾಶ ಕಲ್ಪಿಸಿಕೊಡಲು ಶಿವಕುಮಾರ್- ಕಲೀಂ ಪಾಷ ನೇತೃತ್ವದ ತಂಡದಿಂದ ಒತ್ತಾಯ*

ನ.6ರ ಶುಕ್ರವಾರದಂದು ನಡೆಯಲಿರುವ
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ದುಡಿದಿರುವವರಿಗೆ ಆಯ್ಕೆ ಮಾಡಬೇಕೆಂದು ಶಿವಮೊಗ್ಗ ಉತ್ತರ ಮತ್ತು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಜಿಲ್ಲಾಧ್ಯಕ್ಷ ಹೆಚ್.ಸಿ.ಯೋಗೇಶ್ ರವರಿಗೆ ಮನವಿ ಪತ್ರ ಸಲ್ಲಿಸಿತು.

ಪಕ್ಷದ ಸಿದ್ಧಾಂತಗಳನ್ನು ಪಾಲಿಸಿರುವ, ಪಕ್ಷವು ಕಷ್ಟ ಕಾಲದಲ್ಲಿದ್ದ ಸಂದರ್ಭದಲ್ಲಿಯೂ ಸಹ ಪಕ್ಷದ ಪರವಾಗಿ ನಿಂತಿರುವಂತಹ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತನಾಗಿ ನಿರ್ದೇಶಕನಾಗಿರುವವರಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದರು.

ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ ಎಸ್ ಶಿವಕುಮಾರ್ , ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ಖಾನ್, ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ವೇತಾ ಬಂಡಿ, ದಕ್ಷಿಣ ಕಾಂಗ್ರೆಸ್ ಅಧ್ಯಕ್ಷರಾದ ಕಲೀಮ್ ಪಾಷಾ, ಉತ್ತರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಭಾರತಿ ರಾಮಕೃಷ್ಣ ಹಾಗೂ ಇತರರು ಮನವಿ ಸಲ್ಲಿಸಿದ್ದಾರೆ.