ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಲೈಫ್
ಬಹಳ‌ ಸರಳ!

ನೆಗೆಟೀವ್ ಜನರನ್ನು
ಕಿತ್ತು ಬಿಸಾಕಿ ಬಿಟ್ಟರೆ…

2.
ಏ
ಆರಾಮಿದ್ದೀನಿ…

ಅಂತ ಹೇಳುತ್ತಲೇ
ಎಷ್ಟೊಂದು ದುಃಖಗಳನ್ನು
ಈ ಜನರಿಗಾಗಿ ಹೂತು ಹಾಕಿಬಿಟ್ಟೆ…

3.
ನೀನಷ್ಟೇ ಇದ್ದಿದ್ದು
ದುಃಖ ಹಂಚಿಕೊಳ್ಳಲು…

ಇಲ್ಲದಿದ್ದರೆ;

ಕಣ್ಣೀರು ಕೂಡ
ಕಣ್ಣು ಮುಚ್ಚಿಕೊಂಡೇ ಸುರಿಸುತ್ತಿದ್ದೆ ನಾನು!

– *ಶಿ.ಜು.ಪಾಶ*
8050112067
(6/11/2026)