*ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ | REVENUE RULES* *ಡಿಸೆಂಬರ್ 1ರಿಂದ ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿ!*
*ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ | REVENUE RULES*
*ಡಿಸೆಂಬರ್ 1ರಿಂದ ಸರ್ಕಾರಿ ನೌಕರರಿಗೆ ಹೊಸ ನಿಯಮ ಜಾರಿ!*

ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳು, ನಿಗಮಗಳು ಹಾಗೂ ಮಂಡಳಿಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಇನ್ನು ಮುಂದೆ ಚಲನವಲನ ವಹಿ (Movement Register) ಮತ್ತು ನಗದು ಘೋಷಣಾ ವಹಿ (Cash Declaration Register) ಗಳನ್ನು ಕಡ್ಡಾಯವಾಗಿ ‘ಕರ್ತವ್ಯ’ (KAAMS) ಅಪ್ಲಿಕೇಶನ್ನಲ್ಲಿ ದಾಖಲಿಸಬೇಕಾಗಿದೆ.
📅 ಜಾರಿಗೆ ಬರುವ ದಿನಾಂಕ: 01-12-2026
ಸರ್ಕಾರದ ಆದೇಶದ ಪ್ರಮುಖ ಅಂಶಗಳು:
🔹 1. ಚಲನವಲನ ವಹಿ (Movement Register): ಕಚೇರಿ ಅವಧಿಯಲ್ಲಿ ಅಧಿಕೃತ ಕರ್ತವ್ಯದ ನಿಮಿತ್ತ ಹೊರಗೆ ತೆರಳುವಾಗ, ಕರ್ತವ್ಯದ ಕಾರಣವನ್ನು KAAMS ಅಪ್ಲಿಕೇಶನ್ನಲ್ಲಿ ನಮೂದಿಸಿ ಮೇಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಕಡ್ಡಾಯ.
🔹 2. ನಗದು ಘೋಷಣಾ ವಹಿ (Cash Declaration Register): ಪ್ರತಿದಿನ ಕಚೇರಿ ಕೆಲಸದ ಪ್ರಾರಂಭದಲ್ಲಿ ನೌಕರರು ತಮ್ಮೊಂದಿಗೆ ಕಚೇರಿಗೆ ತಂದಿರುವ ನಗದು ಮೊತ್ತವನ್ನು ಅಪ್ಲಿಕೇಶನ್ನಲ್ಲಿ ಘೋಷಿಸಬೇಕು.
🔹 3. ಪರಿಶೀಲನೆ ಮತ್ತು ಶಿಸ್ತು ಕ್ರಮ: ಸಂಬಂಧಪಟ್ಟ ಇಲಾಖೆಗಳ ನೋಡಲ್ ಅಧಿಕಾರಿಗಳು ನಮೂದುಗಳ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ನಿಯಮಾನುಸಾರ ದಾಖಲೆಗಳನ್ನು ನಿರ್ವಹಿಸದಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಸೂಕ್ತ ಶಿಸ್ತು ಕ್ರಮ ಜರುಗಿಸಲಾಗುತ್ತದೆ.
⚠️ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ನಿಯಮವನ್ನು ಗಮನಿಸಿ, ಡಿಸೆಂಬರ್ 1ರಿಂದ ಕಡ್ಡಾಯವಾಗಿ ಪಾಲಿಸಬೇಕು.
📌 ಆದೇಶ ಸಂಖ್ಯೆ: ಸಿಆಸುಇ 126 ಕತವ 2024


