ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…**ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ*
*ಭದ್ರಾವತಿ; ಇವತ್ತಿನ ಡಿಎಸ್ ಎಸ್ ಕಾರ್ಯಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ…*
*ಎಂ.ಗುರುಮೂರ್ತಿ ನೇತೃತ್ವದ ಸಂಘಟನೆಗೆ ಸಿಕ್ಕ ಜಯ*
ಭದ್ರಾವತಿಯಲ್ಲಿ ಜ.29ರ ಬುಧವಾರ ಬೆಳಿಗ್ಗೆ 11.30 ಕ್ಕೆ ವೀರಶೈವ ಸಭಾ ಭವನದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ಹೆಸರಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿ ಆದೇಶಿಸಿದೆ.
ನ್ಯಾಯಾಲಯದಲ್ಲಿರುವ ಪ್ರಕರಣ ಇತ್ಯರ್ಥವಾಗುವವರೆಗೆ ಪ್ರೊ.ಕೆ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೆಸರನ್ನು ದುರ್ಬಳಕೆ ಮಾಡಿಕೊಂಡರೆ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ಕೋರ್ಟ್ ನೀಡಿದೆ.
ಹೈಕೋರ್ಟ್ 20/2021ರಲ್ಲಿ ಎಂ.ಗುರುಮೂರ್ತಿಯವರ ಪರ ತೀರ್ಪು ನೀಡಿತ್ತಾದರೂ ಕೆಲವರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಈಗಲೂ ಈ ಪ್ರಕರಣ ಅಂತಿಮ ಆದೇಶ ಪಡೆದಿಲ್ಲ. ಆದರೂ, ಈ ಡಿಎಸ್ ಎಸ್ ಗುರುಮೂರ್ತಿಯವರಿಗೆ ಸೇರಿದ್ದೆಂದು ಹೇಳಿತ್ತು.
ಈ ನಡುವೆ ಕೆಲವರು ಇದೇ ಸಂಘಟನೆಯ ಹೆಸರಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವುದರ ವಿರುದ್ಧ ಗುರುಮೂರ್ತಿ ಮತ್ತು ಸಂಗಡಿಗರು ಭದ್ರಾವತಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಕೋರಿದ್ದರು.
ನ್ಯಾಯಾಲಯ ಈ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಿದೆ. ಇದು ನಿಜವಾದ ನಮ್ಮ ಸಂಘಟನೆಗೆ ಸಿಕ್ಕ ಜಯವೆಂದು ಎಂ.ಗುರುಮೂರ್ತಿ ತಿಳಿಸಿದ್ದಾರೆ.