SCI ರಾಷ್ಟ್ರೀಯ ಅಧ್ಯಕ್ಷರಾಗಿ ಜಯೇಷ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸುರೇಖಾ ಮುರಳೀಧರ್ ಆಯ್ಕೆ.”
“SCI ರಾಷ್ಟ್ರೀಯ ಅಧ್ಯಕ್ಷರಾಗಿ ಜಯೇಷ್ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಸುರೇಖಾ ಮುರಳೀಧರ್ ಆಯ್ಕೆ.”
ಮಾರ್ಚ್ 8 ಮತ್ತು 9ರಂದು ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ನಡೆದ “ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್” ಸಂಸ್ಥೆಯ 24ನೇ ರಾಷ್ಟ್ರೀಯ ಸಮಾವೇಶವು ‘SCI ಉಡುಪಿ ಟೆಂಪಲ್ ಸಿಟಿ’ ರವರ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ, ವೈಭವಯುತವಾಗಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ
ಅಂತರಾಷ್ಟ್ರೀಯ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ 2025 – 26ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್ ಮ್ಯಾನೇಜರ್, ಮೂಲತಃ ಶಿವಮೊಗ್ಗದವರಾದ ಜಯೇಶ್ ರವರು ಹಾಗೂ ಶಿವಮೊಗ್ಗ ನಗರದ ಮಾಜಿ ಉಪ ಮಹಾಪೌರರಾದ ಶ್ರೀಮತಿ ಸುರೇಖಾ ಮುರಳಿಧರ್ ರವರು ರಾಷ್ಟ್ರೀಯ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
SCI ಶಿವಮೊಗ್ಗ ಭಾವನ ಸದಸ್ಯೆಯರು ಹಾಗೂ ಶಿವಮೊಗ್ಗ ನಗರದ ವಿವಿಧ ಲೀಜನ್ ನ ಸದಸ್ಯರುಗಳು ಇವರುಗಳನ್ನು ಅಭಿನಂದಿಸಿದ್ದಾರೆ.