ಇವತ್ತಿಂದ ದುಬಾರಿ ದುನಿಯಾ…* *ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!*

*ಇವತ್ತಿಂದ ದುಬಾರಿ ದುನಿಯಾ…*

*ಹೆಚ್ಚಾಯ್ತು ಇವತ್ತಿಂದ ಇವುಗಳ ಬೆಲೆ!*

ಇಂದಿನಿಂದಲೇ ಕರ್ನಾಟಕ (Karnataka) ಜನರಿಗೆ ಬೆಲೆ ಏರಿಕೆಯ (Price Hike) ಬರೆ ಬೀಳುತ್ತಿದೆ. ಸಾಲು ಸಾಲು ಬೆಲೆ ಏರಿಕೆಯ ಬೆಂಕಿ ಸಾಮಾನ್ಯ ಜನರ ಮತ್ತು ಬಡವರ ಜೇಬು ಸುಡಲಿವೆ. ಹಾಲು, ಮೊಸರು, ವಿದ್ಯುತ್, ಟೋಲ್, ಮುದ್ರಾಂಕ ಶುಲ್ಕ ಸೇರಿ ಅನೇಕ ವಸ್ತುಗಳು ಅಥವಾ ಸೇವೆಗಳ ದರ ಏರಿಕೆ ಜಾರಿಗೆ ಬಂದಿದೆ. ಮತ್ತೊಂದೆಡೆ, ಕಸ ಸಂಗ್ರಹ ಸೆಸ್ ಕೂಡ ಜಾರಿಯಾಗುತ್ತಿದೆ. ಇಂದಿನಿಂದ ಯಾವೆಲ್ಲ ವಸ್ತು, ಸೇವೆಗಳ ದರ ಎಷ್ಟು ಹೆಚ್ಚಳವಾಗಿದೆ ಎಂಬ ಮಾಹಿತಿ ಇಲ್ಲಿದೆ.

*ಹಾಲು, ಮೊಸರಿನ ದರ ₹4 ಏರಿಕೆ*

ಇಂದಿನಿಂದ ನಂದಿನಿ ಹಾಲಿನ ಎಲ್ಲಾ ಮಾದರಿಯ ಪ್ಯಾಕೆಟ್​ ದರ ಪ್ರತಿ ಲೀಟರ್​ಗೆ 4 ರೂಪಾಯಿ ಏರಿಕೆಯಾಗಿದೆ. ಜೊತೆಗೆ ಮೊಸರಿನ ದರವೂ ಪ್ರತಿ ಲೀಟರ್​​ಗೆ 4 ರೂಪಾಯಿ ಏರಿಕೆಯಾಗಿದೆ.

*ವಿದ್ಯುತ್ ದರ ಪ್ರತಿ ಯೂನಿಟ್​ಗೆ 36 ಪೈಸೆ ಹೆಚ್ಚಳ*

ಇಂದಿನಿಂದ ಪ್ರತಿಯೂನಿಟ್​ಗೆ 36 ಪೈಸೆ ವಿದ್ಯುತ್ ದರ ಏರಿಕೆಯಾಗಿದೆ. ಇದರ ಜೊತೆಗೆ ಮಾಸಿಕ ಶುಲ್ಕವೂ 20 ರೂಪಾಯಿ ಹೆಚ್ಚಳವಾಗುತ್ತಿದೆ. ಇದರಿಂದ 120 ರೂಪಾಯಿ ಇದ್ದ ನಿಗದಿತ ಶುಲ್ಕ, 140 ರೂಪಾಯಿಗೆ ಏರಿಕೆಯಾಗಲಿದೆ. ಗೃಹಜ್ಯೋತಿ ಬಳಕೆದಾರರು 200 ಯೂನಿಟ್ ದಾಟಿದರೆ, ಬೆಲೆ ಏರಿಕೆ ಬಿಸಿ ತಟ್ಟಲಿದೆ.

*ಹೊಸ ವಾಹನ ಖರೀದಿಗೆ ಹೆಚ್ಚುವರಿ ಸೆಸ್*

ಇಂದಿನಿಂದ ಉಕ್ಕು, ವಾಹನಗಳ ಬಿಡಿಭಾಗಳ ಆಮದು, ಉಕ್ಕುಗಳ ಆಮದು ದರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಇಂದಿನಿಂದ ಹೊಸ ವಾಹನ ಖರೀದಿಸಿದರೆ ಬೆಲೆ ಹೆಚ್ಚು ತೆರಬೇಕಾಗುತ್ತದೆ.

*ಮುದ್ರಾಂಕ ಶುಲ್ಕ, ಅಪಿಡವಿಟ್ ಶುಲ್ಕ ಏರಿಕೆ!*

ಮುದ್ರಾಂಕ ಶುಲ್ಕ 50 ರೂಪಾಯಿಯಿಂದ 500 ರೂಪಾಯಿಗೆ ಏರಿಕೆ ಆಗಲಿದ್ದು, ಅಫಿಡವಿಟ್ ಶುಲ್ಕ 20 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಆಗುತ್ತಿದೆ.

*ಟೋಲ್​ ದರವೂ ಶೇ 3 ರಿಂದ ಶೇ 5 ರಷ್ಟು ಹೆಚ್ಚಳ*

ಇನ್ನು ಹೆದ್ದಾರಿ ಪ್ರಾಧಿಕಾರ ಕೂಡ ಟೋಲ್ ದರವನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಳ ಮಾಡುತ್ತಿದ್ದು, ಇಂದಿನಿಂದಲೇ ಜಾರಿಗೆ ಬರುತ್ತಿದೆ. ರಾಜ್ಯದ ಒಟ್ಟು 66 ಟೋಲ್​ ಪ್ಲಾಜಾಗಳಲ್ಲಿನ ದರ ಏರಿಕೆ ವಾಹನ ಸವಾರರಿಗೆ ಬಿಸಿ ತಟ್ಟಲಿದೆ.

*ಲಿಫ್ಟ್​, ಟ್ರಾನ್ಸ್​ಫಾರ್ಮರ್ ರಿನಿವಲ್ ಶುಲ್ಕ ಏರಿಕೆ*

ಈ ಮಧ್ಯೆ ಇಂಧನ ಇಲಾಖೆಯ ಡಿಪಾರ್ಟ್​ಮೆಂಟ್ ಆಫ್ ಎಲೆಕ್ಟ್ರಿಲ್ ಇನ್ಸ್​ಪೆಕ್ಟೋರೇಟ್ ಸಹ, ಮನೆಯ ಲಿಫ್ಟ್​ ಪರಿಶೀಲನೆ ಮತ್ತು ರಿನಿವಲ್ ಹಾಗೂ ಟ್ರಾನ್ಸ್​ಫಾರ್ಮರ್ ಪರಿಶೀಲನೆ ಮತ್ತು ರಿನಿವಲ್ ಮಾಡುವ ಶುಲ್ಕವನ್ನು ದುಪಟ್ಟು ಹೆಚ್ಚಿಸಿದೆ.