ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ* *ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ*

*ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗೆ ನೂತನ ಸಾರಥಿ*

*ಶ್ರೀಮತಿ ಶ್ವೇತಾ ಬಂಡಿ ನೂತನ ಅಧ್ಯಕ್ಷೆ*

ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ನೂತನ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರನ್ನು ಘೋಷಿಸಲಾಗಿದೆ.

ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಅಲ್ಕಾ ಲಾಂಬಾರವರ ಆದೇಶದ ಮೇರೆಗೆ ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೌಮ್ಯಾರೆಡ್ಡಿಯವರು ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯನ್ನಾಗಿ ಶ್ರೀಮತಿ ಶ್ವೇತಾ ಬಂಡಿಯವರ ಹೆಸರು ಘೋಷಿಸಿ ಆದೇಶಿಸಿದ್ದಾರೆ.

ಶ್ವೇತಾ ಬಂಡಿಯವರು ಹೊಸನಗರ ತಾಲ್ಲೂಕು ರಿಪ್ಪನ್ ಪೇಟೆ ಸಮೀಪದ ಕೆರೆಹಳ್ಳಿ ವಾಸಿ. ಇವರು ಜಿಲ್ಲಾ ಪಂಚಾಯತ್ ಸದಸ್ಯೆ ಆಗಿದ್ದವರು. ಹಿರಿಯ ಕಾಂಗ್ರೆಸ್ಸಿಗ ಬಿ.ಪಿ.ರಾಮಚಂದ್ರರವರ ಪುತ್ರಿ. ವಕೀಲ ಭರತ್ ರವರ ಪತ್ನಿ.

ದೊಡ್ಡ ಸವಾಲುಗಳಿರುವ ಜಾಗ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥನ. ಆ ಸವಾಲುಗಳನ್ನು ಎದುರಿಸುತ್ತಾರಾ ಶ್ವೇತಾ ಬಂಡಿ? ಕಾಂಗ್ರೆಸ್ಸಿಗರು ಭರವಸೆ ಇಟ್ಟುಕೊಳ್ಳಬಹುದು.