ಇಬ್ಬರು ಗಾಂಜಾ ಮಾರಾಟಗಾರರಿಗೆ* *3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ*

*ಇಬ್ಬರು ಗಾಂಜಾ ಮಾರಾಟಗಾರರಿಗೆ*
*3 ವರ್ಷ ಜೈಲು- 25 ಸಾವಿರ ರೂ., ದಂಡದ ಶಿಕ್ಷೆ*

ಸಾಗರದ ಇಬ್ಬರು ಗಾಂಜಾ ಮಾರಾಟಗಾರರಿಗೆ ಶಿವಮೊಗ್ಗದ ಪ್ರಧಾನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷಗಳ ಕಠಿಣ ಸಜೆ ಮತ್ತು 25 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶಿಸಿದೆ.

ಶಿಕ್ಷೆಗೊಳಗಾದವರು ಸಾಗರದ ಇಮ್ರಾನ್ ಖಾನ್ ಮತ್ತು ಇಮ್ತಿಯಾಜ್ ಆಗಿದ್ದು, ಈ ಇಬ್ಬರಿಗೆ ನ್ಯಾಯಾಧೀಶರಾದ ಮಂಜುನಾಥ ನಾಯಕರವರು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.

ಸಾಗರ ಟೌನ್ ಸಿಪಿಐ ಆಗಿದ್ದ ಅಶೋಕ ಕುಮಾರ್ 2021ರ ಆಗಸ್ಟ್ 4 ರಂದು ಸಾಗರದ ಬಿ.ಹೆಚ್.ರಸ್ತೆಯ ಸದ್ಗುರು ಲೇ ಔಟ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, ಅವರಿಂದ 1.60 kg ಒಣ ಗಾಂಜಾ ಹಾಗೂ 800₹ ನಗದು ಹಣ, ಓಮಿನಿ ಕಾರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದರು.

ಅ.8ರಂದು ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್ ಕುಮಾರ್ ವಾದ ಮಂಡಿಸಿದ್ದರು.