ಜೆಡಿಎಸ್ ಕಚೇರಿಯಲ್ಲಿ ಜೆ ಪಿ ಜನ್ಮದಿನಾಚರಣೆ

ಜೆಡಿಎಸ್ ಕಚೇರಿಯಲ್ಲಿ ಜೆ ಪಿ ಜನ್ಮದಿನಾಚರಣೆ

ತುರ್ತು ಪರಿಸ್ಥಿತಿಯ ವಿರುದ್ಧ ಸಿಡಿದೆದ್ದು, ಭಾರತದಲ್ಲಿ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸಿದ ಮಹಾಪುರುಷ ಲೋಕನಾಯಕ  ಜಯಪ್ರಕಾಶ ನಾರಾಯಣ ಅವರ 124ನೇ ಜನ್ಮದಿನವನ್ನು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಇಂದು ನಗರ ಜೆಡಿಎಸ್ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಯಿತು.

ಭಾರತದ ರಾಜಕೀಯ ವ್ಯವಸ್ಥೆಗೆ ಚಿಕಿತ್ಸಕ ದೃಷ್ಟಿಕೋನ ನೀಡಿ, ಪರ್ಯಾಯ ರಾಜಕಾರಣದ ಮನ್ವಂತರಕ್ಕೆ ನಾಂದಿ ಹಾಡಿದ ಲೋಕನಾಯಕನ ಜನ್ಮದಿನದ ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳು ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸಿದರು.

ಇದೆ ಸಂದರ್ಭ ನಗರದ ಮಾಜಿ ಶಾಸಕರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ಆದ  ಕೆ ಬಿ ಪ್ರಸನ್ನ ಕುಮಾರ್ ರವರು, ನಗರ ಜೆಡಿಎಸ್ ಅಧ್ಯಕ್ಷರಾದ ದೀಪಕ್ ಸಿಂಗ್ ರವರು, ಜೆಡಿಎಸ್ ಪ್ರಮುಖರಾದ ತ್ಯಾಗರಾಜ್, ಸಂಗಯ್ಯ, ರಮೇಶ್ ನಾಯಕ್, ವಿಜಯ್ ಕುಮಾರ್, ರಾಜಮ್ಮ, ಮಾಧವ್ ಮೂರ್ತಿ, ರಾಘವೇಂದ್ರ ಉಡುಪ, ಗೋವಿಂದ, ಗೋಪಿ, ಭಾರತಿ ರಾಮಣ್ಣ, ವೀರೇಶ್,ವೆಂಕಟೇಶ್, ಸುನಿಲ್ ಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.