ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್* *ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು ಏನಿದು ಡಿಜಿಟಲ್ ಅರೆಸ್ಟ್?
*ಶಿವಮೊಗ್ಗದ ವ್ಯಕ್ತಿಗೆ ಡಿಜಿಟಲ್ ಅರೆಸ್ಟ್*
*ಕಳೆದುಕೊಂಡಿದ್ದ 19 ಲಕ್ಷ ರೂ ಹಣ ಫ್ರೀಸ್ ಮಾಡಿ ವಾಪಸ್ ತಲುಪಿಸಿದ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸರು
ಏನಿದು ಡಿಜಿಟಲ್ ಅರೆಸ್ಟ್?
ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದ ವ್ಯಕ್ತಿಯೊಬ್ಬನಿಂದ 19 ಲಕ್ಷ ರೂ.,ಗಳನ್ನು ಪಡೆದು ವಂಚಿಸಿದ ಪ್ರಕರಣವನ್ನು ಶಿವಮೊಗ್ಗ ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಭೇದಿಸಿ ಶಹಬ್ಬಾಶ್ ಗಿರಿಗೆ ಒಳಗಾಗಿದ್ದಾರೆ.
ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಕಳೆದ ಸೆ.17 ರಂದು ಅಪರಿಚಿತ ಮೊಬೈಲಿಂದ ವ್ಯಾಟ್ಪಪ್ ಕರೆ ಬಂದಿತ್ತು. ತಾನು ಮುಂಬೈ ಕೊಲಬಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್. ಆಧಾರ್ ಕಾರ್ಡ್ ಬಳಸಿ ಮುಂಬೈಯ ಕೆನರಾ ಬ್ಯಾಂಕಲ್ಲಿ ಖಾತೆ ಮಾಡಿಸಿ ಅದರಲ್ಲಿ ಸ್ಕ್ಯಾಮರ್ ಒಬ್ಬನಿಗೆ ಅಕ್ರಮ ಹಣ ವರ್ಗಾವಣೆ ಮಾಡಿದ್ದೀರಿ. ನಿಮ್ಮ ಮೇಲೆ ಪ್ರಕರಣ ದಾಖಲಾಗಿದೆ ಎಂದು ಹೆದರಿಸಿ ಮುಂಬೈಗೆ ಬರಬೇಕೆಂದು ಹೆದರಿಸಿದ್ದಾನೆ.
ಇಂಟರ್ ನ್ಯಾಷನಲ್ ಸೆಕ್ಯೂರಿಟಿ ವಿಚಾರ. ಯಾರಿಗೂ ಹೇಳಬಾರದೆಂದು ಎಚ್ಚರಿಸಿದ್ದಾನೆ. ಮಾರನೇ ದಿನ ವೀಡಿಯೋ ಕಾಲ್ ಮಾಡಿದ ಪೊಲೀಸ್ ಯೂನಿಫಾರ್ಮ್ ನಲ್ಲಿದ್ದ ವಂಚಕ ವೀಡಿಯೋ ಕಾನ್ ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸುತ್ತೇನೆಂದು ಹೇಳಿದ್ದಾನೆ. ನಿನಗೆ ಬೇಲ್ ತೆಗೆದುಕೊಳ್ಳುತ್ತಿದ್ದೇನೆಂದು ಹೇಳಿ ಕೋರ್ಟ್ ಹಾಲ್ ನಂತೆಯೇ ಇರುವ ಕೊಠಡಿಯೊಳಕ್ಕೆ ತೆರಳಿದ್ದು, ಅಲ್ಲಿ ಜಡ್ಜ್ ನಂತೆಯೇ ಕುಳಿತಿದ್ದ ವ್ಯಕ್ತಿ ಇದ್ದ.
ಆ ಜಡ್ಜ್ ನಿನ್ನ ಬ್ಯಾಂಕ್ ಲಾಕರಲ್ಲಿರೋ ಬಂಗಾರವನ್ನು ತೂಕ ಮಾಡಿಸಿ ಅದರ ಮೇಲೆ ಎಷ್ಟು ಸಾಲ ತೆಗೆಯಬಹುದೆಂದು ತಿಳಿದುಕೊಂಡು ಅಕೌಂಟಿಗೆ ಹಣ ಹಾಕಿಸಿಕೋ ಎಂದು ಹೇಳಿದ್ದರ ಮೇರೆಗೆ 19 ಲಕ್ಷ ರೂ.,ಗಳನ್ನು ಸಾಲ ಮಾಡಿ ಖಾತೆಗೆ ಹಾಕಿದ್ದಾರೆ.
ಅವರು ಹೇಳಿದ ಬ್ಯಾಂಕ್ ಅಕೌಂಟಿಗೆ ಈ ಹಣ ವರ್ಗಾಯಿಸಿದ್ದಾರೆ. ಆ ನಂತರ ತಮ್ಮ ಮಗಳಿಗೆ ಈ ವಿಚಾರ ತಿಳಿಸಿದಾಗ ಮೋಸ ಹೋಗಿದ್ದು ಗೊತ್ತಾಗಿದೆ.
ಸೆ.23ರಂದು ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ ಪಿ ಮಿಥುನ್ ಕುಮಾರ್, ಹೆಚ್ಚುವರಿ ಎಸ್ ಪಿ ಗಳಾದ ಎ.ಜಿ.ಕಾರ್ಯಪ್ಪ, ರಮೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಡಿವೈಎಸ್ ಪಿ ಕೃಷ್ಣಮೂರ್ತಿ ರವರ ಮೇಲ್ವಿಚಾರಣೆಯಲ್ಲಿ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದ ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.
ಈ ಪ್ರಕರಣದಲ್ಲಿ ವಂಚಿಸಿದ 19 ಲಕ್ಷ ರೂ ಹಣವನ್ನು ಫ್ರೀಸ್ ಮಾಡಿಸಿ, ಈ ಹಣ ವಂಚನೆಗೊಳಗಾದ ಶಿವಮೊಗ್ಗದ ವ್ಯಕ್ತಿಗೆ ಹಿಂದಿರುಗಿಸಿದ್ದಾರೆ.
ಈ ಕಾರ್ಯಕ್ಕೆ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.