ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ* *ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ*

*ಅ.24 ರಿಂದ ಅಲ್ಲಮ ನುಡಿಗಟ್ಟುಗಳ ಕುರಿತು ಚಿಂತನ ಕಾರ್ತಿಕ*

*ಪತ್ರಿಕಾಗೋಷ್ಠಿಯಲ್ಲಿ ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ*

ಶಿವಮೊಗ್ಗ ಬಸವಕೇಂದ್ರದ 19ನೇ ವರ್ಷದ ಚಿಂತನ ಕಾರ್ತಿಕ ಕಾರ್ಯಕ್ರಮ ಅಕ್ಟೋಬರ್ 24ರಿಂದ ನವೆಂಬರ್ 23ರವರೆಗೆ ನಡೆಯಲಿದೆ ಎಂದು ಬಸವಕೇಂದ್ರದ ಅಧ್ಯಕ್ಷ ಬೆನಕಪ್ಪ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.

ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠ ಹಾಗೂ ಶಿವಮೊಗ್ಗ ಬಸವಕೇಂದ್ರದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಿಸಿದ್ದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನಗರದ ವಿವಿಧ ಕಡೆ ಚಿಂತನ ಕಾರ್ತಿಕ ನಡೆಯಲಿದೆ.

ಪ್ರತೀ ವರ್ಷವೂ ಒಂದೊಂದು ವಸ್ತು- ವಿಷಯ ಇಟ್ಟುಕೊಂಡು ಚಿಂತನೆ ನಡೆಸಲಾಗುತ್ತಿದೆ. ಈ ವರ್ಷ ಮೇರು ವಚನಕಾರರರಾದ ಅಲ್ಲಮಪ್ರಭುಗಳ ವಚನಗಳಲ್ಲಿ ಇರುವ ನುಡಿಗಟ್ಟುಗಳ ಬಗ್ಗೆ ಉಪನ್ಯಾಸಗಳು ನಡೆಯಲಿವೆ. ಈ ನುಡಿಗಟ್ಟುಗಳು ವಚನಗಳ ಸಾಲುಗಳಾಗಿ ಒಂದು ಬಂಧಕ್ಕೆ ಒಳಪಡುತ್ತವೆ. ಹಾಗೇ, ಸ್ವತಂತ್ರವಾಗಿಯೂ ಈ ನುಡಿಗಟ್ಟುಗಳು ಅರ್ಥಪೂರ್ಣವಾಗಿವೆ ಎಂದರು.

ಚಿಂತನ ಕಾರ್ತಿಕ ಉದ್ಘಾಟನಾ ಸಮಾರಂಭ 24ರ ಸಂಜೆ 6.30ಕ್ಕೆ ಬಸವಕೇಂದ್ರದಲ್ಲಿ ನಡೆಯಲಿದ್ದು, ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಉದ್ಘಾಟನೆ ನೆರವೇರಿಸಲಿದ್ದಾರೆ. ಬಸವಕೇಂದ್ರದ ಶ್ರೀ ಮ.ನಿ.ಪ್ರ. ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು ಸಾನ್ನಿಧ್ಯವಹಿಸಲಿದ್ದಾರೆ. ಬಸವಕೇಂದ್ರದ ಅಧ್ಯಕ್ಷರಾದ ಶರಣ ಜಿ. ಬೆನಕಪ್ಪ ಅಧ್ಯಕ್ಷತೆವಹಿಸಲಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಸಾಸ್ನೇಹಳ್ಳಿ ಸತೀಶ್ ಅವರಿಗೆ ಈ ಸಂದರ್ಭದಲ್ಲಿ ಅಭಿನಂದಿಸಲಾಗುತ್ತದೆ. ವಿದ್ಯುತ್ ಇಲಾಖೆ ನೌಕರರ ಸಂಘದ ಅಧ್ಯಕ್ಷ ಶಶಿಧರ್, ಕಾರ್ಯಾಧ್ಯಕ್ಷ ಎಂ.ಆ‌ರ್. ಜಯದೇವಪ್ಪ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಡಾ. ಅರಡಿ ಮಲ್ಲಯ್ಯ, ರೇವಣಸಿದ್ದಯ್ಯ ಹಿರೇಮಠ, ಡಾ. ಹೆಚ್.ಎಸ್. ನಾಗಭೂಷಣ, ಡಾ. ಚಿದಾನಂದ್, ತುರವನೂರು ಮಲ್ಲಿಕಾರ್ಜುನ್, ಹೆಚ್.ಎನ್. ಮಹಾರುದ್ರ, ಎಂ.ಎನ್. ಸುಂದರರಾಜ್, ಡಾ. ಕೆ.ಜಿ.ವೆಂಕಟೇಶ್, ಡಾ. ಕಲೀಂ ಉಲ್ಲಾ, ಡಾ. ಜಿ.ವಿ. ಹರಿಪ್ರಸಾದ್, ಡಾ. ಎಂ. ಬಸವರಾಜು, ಕಿರಣ್ ಕುಮಾರ್, ನ್ಯಾಮತಿ ಚನ್ನಬಸಪ್ಪ, ನಾಗಶ್ರೀ ತ್ಯಾಗರಾಜ್, ಡಾ.ಭಾರತಿ ದೇವಿ, ವಿಜಯ ಶ್ರೀಧರ್, ಡಾ. ಮೋಹನ ಚಂದ್ರಗುತ್ತಿ, ಬಸವನಗೌಡ ಮಾಳಗಿ ಡಾ.ಜಿ.ಕೆ. ಪ್ರೇಮಾ ಇನ್ನಿತರರು ಈ ವಿವಿಧ ನುಡಿಗಟ್ಟುಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ್‌, ಖಜಾಂಚಿ ಚಂದ್ರಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹೆಚ್.ಎನ್. ಮಹಾರುದ್ರ, ವೀರಶೈವ ಮಹಾಸಭಾ ಅಧ್ಯಕ್ಷ ರುದ್ರಮುನಿ ಸಜ್ಜನ್ ಇನ್ನಿತರರು ಉಪಸ್ಥಿತರಿದ್ದರು.