*ಅ.26 ರಂದು ಯಕ್ಷ ಸಂಗಮ ಬಳಗದಿಂದ ಯಕ್ಷದೀಪ*
*ಅ.26 ರಂದು ಯಕ್ಷ ಸಂಗಮ ಬಳಗದಿಂದ ಯಕ್ಷದೀಪ*
ಯಕ್ಷ ಸಂಗಮ ಬಳಗ ಇವರ ಸಂಯೋಜನೆಯಲ್ಲಿ ಅ. ೨೬ರಂದು ಸಂಜೆ ೪.೩೦ರಿಂದ ರಾತ್ರಿ ೧೦ ಗಂಟೆಯವರೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷದೀಪ ಎಂಬ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಅಂಗವಾಗಿ ಚಕ್ರಸಂಭವ, ಅಗ್ನಿಸಂಭವೆ ಎಂಬ ಎರಡು ಪೌರಾಣಿಕ ಯಕ್ಷಗಾನ ಪ್ರಸಂಗಗಳನ್ನು ಆಯೋಜಿಸಲಾಗಿದೆ ಎಂದು ಯಕ್ಷ ಸಂಗಮ ಬಳಗದ ಶ್ರೀನಿವಾಸ ಆಚಾರ್ಯ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಎರಡು ಯಕ್ಷಗಾನ ಪ್ರಸಂಗಗಳು ವಿಶೇಷವಾಗಿದ್ದು ತೆಂಗು ತಿಟ್ಟು ಮತ್ತು ಬಡಗುತಿಟ್ಟು ಕಲಾವಿದರ ಕೂಡುವಿಕೆಯಲ್ಲಿ ನಡೆಯಲಿದೆ. ಯಕ್ಷಗಾನಕ್ಕೆ ಈಗ ವಿಶೇಷ ಆದ್ಯತೆ ದೊರೆಯುತ್ತಿದ್ದು, ಇಡೀ ರಾಷ್ಟ್ರಾದ್ಯಂತ ಮನ್ನಣೆ ನೀಡಲಾಗುತ್ತಿದೆ. ಎಷ್ಟೋ ಜನರು ದೈವತ್ವದಲ್ಲಿ ನಂಬಿಕೆ ಇರುವವರು ಯಕ್ಷಗಾನ ಆಟ ಆಡಿಸುತ್ತೇವೆ ಎಂದು ಹರಕೆ ಹೊರುತ್ತಾರೆ. ಹರಕೆ ಮೇಳದ ಹೆಸರಿನಲ್ಲಿಯೇ ಯಕ್ಷಗಾನ ಪ್ರಸಂಗಗಳು ನಡೆಯುತ್ತಿವೆ ಎಂದರು.
ಸಂಚಾಲಕ ನಾಗರಾಜ್ ಮಾತನಾಡಿ, ಈ ಎರಡೂ ಪ್ರಸಂಗಗಳಲ್ಲಿ ತೆಂಗುತಿಟ್ಟು ಮತ್ತು ಬಡಗುತಿಟ್ಟಿನ ಸಂಭಾಷಣೆಗಳು, ವೇಷ -ಭೂಷಣಗಳು ಕಾಣಿಸಿಕೊಳ್ಳುತ್ತವೆ. ಪ್ರಸಿದ್ಧ ಕಲಾವಿದರು ಇದರಲ್ಲಿ ಅಭಿನಯಿಸಲಿದ್ದಾರೆ.
ಹಿಮ್ಮೇಳನದಲ್ಲಿ ಭಾಗವತರಾಗಿ ಶ್ರೀರಾಮಕೃಷ್ಣ ಹೆಗ್ಗಡೆ ಹಿಲ್ಲೂರು, ಚಂದ್ರಕಾಂತರಾವ್ ಮೂಡಬೆಳ್ಳೆ, ಮದ್ದಳೆಯಲ್ಲಿ ಸುನಿಲ್ ಭಂಡಾರಿ ಕಡತೋಕ, ಕೌಶಲ್ ರಾವ್ ಪುತ್ತಿಗೆ, ಚಂಡೆಯಲ್ಲಿ ಶಿವಾನಂದ ಕೋಟಾ, ಚಕ್ರದಾಳದಲ್ಲಿ ನಿಶ್ವ್ವ್ಪತ್ ಜೋಗಿ ಇರುವರು ಎಂದರು. ಹಾಗೆಯೇ ಮುಮ್ಮೇಳದಲ್ಲಿ ವಿವಿಧ ಪಾತ್ರಗಳಲ್ಲಿ ಮಂಕಿ ಈಶ್ವರನಾಯ್ಕ್, ರಕ್ಷಿತ್ ಶೆಟ್ಟಿ ಪಡ್ರೆ, ಕಾರ್ತಿಕ್ ಚಿಟ್ಟಾಣಿ, ವಿದ್ಯಾಧರರಾವ್, ರವಿರಾಜ್ ಭಟ್, ಶಶಿಕಾಂತ್ ಶೆಟ್ಟಿ, ಪ್ರಮೋದ್ ಪೂಜಾರಿ, ಪ್ರಸನ್ನ ಶೆಟ್ಟಿಗಾರ್, ಬಸವ ಪೂಜಾರಿ, ವಿಘ್ನೇಶ್ ಪೈ ಸೇರಿದಂತೆ ಹಲವು ಪ್ರಸಿದ್ಧ ಕಲಾವಿದರು ಅಭಿನಯಿಸುವರು ಎಂದರು.
೩೫೦ ರೂ. ಪ್ರವೇಶ ದರ ಇದೆ.(ಗೌರವ ಪ್ರವೇಶ ಹೊರತುಪಡಿಸಿ) ನಿಗದಿಪಡಿಸಲಾಗಿದ್ದು, ಹೆಚ್ಚಿನ ಮಾಹಿತಿಗೆ ೯೮೪೫೮ ೬೩೫೪೯ ಅನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಶಿ ಎಸ್. ಮಂಗಳಗಾರ್ ಇದ್ದರು.


