ಈದ್ ಮಿಲಾದ್ ಬಂತು; ಪೊಲೀಸ್ ಇಲಾಖೆ ಸಭೆಯಲ್ಲಿ ಅಡಿಷನಲ್ ಎಸ್ ಪಿ ಭೂಮರೆಡ್ಡಿ ಹೇಳಿದ್ದೇನು?ಏನೆಲ್ಲ ನೀತಿ- ನಿಯಮಗಳಿವೆ…ಮುಸ್ಲೀಮರೇ, ವಿಶೇಷವಾಗಿ ಗಮನಿಸಿ…

ಈದ್ ಮಿಲಾದ್ ಬಂತು;
ಪೊಲೀಸ್ ಇಲಾಖೆ ಸಭೆಯಲ್ಲಿ ಅಡಿಷನಲ್ ಎಸ್ ಪಿ ಭೂಮರೆಡ್ಡಿ ಹೇಳಿದ್ದೇನು?

ಏನೆಲ್ಲ ನೀತಿ- ನಿಯಮಗಳಿವೆ…

ಮುಸ್ಲೀಮರೇ, ವಿಶೇಷವಾಗಿ ಗಮನಿಸಿ…

ಭಾನುವಾರ ಮಧ್ಯಾಹ್ನ ಹೆಚ್ಚುವರಿ ಎಸ್ ಪಿ ಅನಿಲ್ ಕುಮಾರ್ ಭೂಮರಡ್ಡಿರವರ ನೇತೃತ್ವದಲ್ಲಿ, ತುಂಗಾನಗರ ಪೊಲೀಸ್ ಠಾಣೆಯಲ್ಲಿ ಈದ್ ಮಿಲಾದ್ ಸಮಿತಿ ಸದಸ್ಯರುಗಳ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಅವರು ನೀಡಿದ ಸಲಹೆ ಸೂಚನೆಗಳೇನು?

1) *ಈದ್ ಮಿಲಾದ್ ಮೆರವಣಿಗೆ* ಆಯೋಜಕರುಗಳು *ಟ್ಯಾಬುಲಸ್ ಗಳು* ಎಲ್ಲಿಂದ ಪ್ರಾರಂಭವಾಗಿ ಯಾವ ಮಾರ್ಗವಾಗಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಸಾಗುತ್ತವೆ ಎಂಬ ಮಾಹಿತಿಯನ್ನು *ಮುಂಚಿತವಾಗಿ ಸಂಬಂಧಪಟ್ಟ ಸರಹದ್ದಿನ* ಪೊಲೀಸ್ ಠಾಣೆಗೆ ನೀಡುವುದು.

2) *ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆಯನ್ನು* ಬಳಸುವಂತಿಲ್ಲ ಹಾಗೂ ಧ್ವನಿ ವರ್ಧಕಗಳನ್ನು ಬಳಕೆ ಮಾಡುವಾಗ ಕಡ್ಡಾಯವಾಗಿ *ಘನ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ವಯ* ಮಾತ್ರ ಬಳಕೆ ಮಾಡುವುದು.

3) ಈದ್ ಮಿಲಾದ್ ಹಬ್ಬದ *ಫ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು* ಹಾಕುವಾಗ ಸಂಬಂಧಪಟ್ಟ ಇಲಾಖೆಯಿಂದ ಪೂರ್ವಾನುಮತಿ ಪಡೆದು, *ಇತರರ ಭಾವನೆಗಳಿಗೆ ದಕ್ಕೆಯಾಗದಂತಹ* ಬ್ಯಾನರ್ ಮತ್ತು ಫ್ಲೆಕ್ಸ್ ಮಾತ್ರ ಅಳವಡಿಸುವುದು.

4) ಹಬ್ಬದ ಹಿನ್ನೆಲೆಯಲ್ಲಿ *ಲೈಟಿಂಗ್ಸ್ ಮತ್ತು ಬಂಟಿಂಗ್ಸ್ ಗಳನ್ನು* ಹಾಕುವಾಗ ಇತರೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಳವಡಿಸುವುದು.

5) ಸಾಮಾಜಿಕ ಜಾಲತಾಣದಲ್ಲಿ ಯಾವುದೇ *ಆಕ್ಷೇಪಾರ್ಹ ಮತ್ತು ಪ್ರಚೋದನಾಕಾರಿ ಫೋಟೋ ಮತ್ತು ಪೋಸ್ಟ್ ಗಳನ್ನು ಅಪ್ ಲೋಡ್* ಮಾಡುವುದು, ಫಾರ್ವರ್ಡ್ ಮಾಡುವುದು, ಶೇರ್ ಮಾಡುವುದು ಟ್ಯಾಗ್ ಮಾಡುವುದು ಕಾನೂನು ರೀತ್ಯ ಅಪರಾಧವಾಗಿದ್ದು, ಈ ರೀತಿ ಮಾಡುವವರ ವಿರುದ್ಧ *ಕಾನೂನು ರೀತ್ಯಾ ಕ್ರಮ* ಕೈಗೊಳ್ಳಲಾಗುತ್ತದೆ.

6) ಯಾವುದೇ *ಕಿಡಿಗೇಡಿಗಳು ತೊಂದರೆ ನೀಡುತ್ತಿದ್ದಾರೆ,* ಕಾನೂನು ಬಾಹಿರ ಚಟುವಟಿಕಯಲ್ಲಿ ಭಾಗಿಯಾಗಿದ್ದರೆ ಮತ್ತು ಗಾಂಜಾ ಮಾರಾಟ, ಸೇವನೆ ಮಾಡುತ್ತಿರುವುದು ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೆ ಅಂಥವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುತ್ತದೆ.

*ಹಬ್ಬವನ್ನು ಆಚರಿಸುವಾಗ ಇತರರೊಂದಿಗಿನ ಪೈಪೋಟಿಯ ರೀತಿ ಆಚರಿಸದೇ, ಹಬ್ಬದ ಹಿನ್ನೆಲೆಯನ್ನು ತಿಳಿದು ಭಕ್ತಿ ಪೂರ್ವಕವಾಗಿ ಮತ್ತು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿ.*

ಈ ಸಂದರ್ಭದಲ್ಲಿ ತುಂಗಾನಗರ ಸಿಪಿಐ ಮಂಜುನಾಥ್, ತುಂಗಾನಗರ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಠಾಣಾ ವ್ಯಾಪ್ತಿಯ ಈದ್ ಮಿಲಾದ್ ಸಮಿತಿ ಸದಸ್ಯರುಗಳು ಹಾಜರಿದ್ದರು.