ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ* *ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ* *ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ*
*ಪತ್ರಕರ್ತರೊಂದಿಗೆ ಮಾತಾಡಿದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ*
*ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ- ಬಿಜೆಪಿ ಸರ್ಕಾರದ ತೀರ್ಮಾನ*
*ಸಿ ಎಂ ಉತ್ತರಾಧಿಕಾರಿ- ನನಗೂ ಆಸೆ ಇದೆ*
ಬಡವರ ಬಂಧು, ಮಾಜಿ ಸಿಎಂ ದಿ. ಎಸ್. ಬಂಗಾರಪ್ಪನವರ 93 ನೇ ವರ್ಷದ ಜನುಮದಿನ ಆಚರಿಸಲಾಗುತ್ತಿದೆ
ಸೊರಬದ ಬಂಗಾರಧಾಮದಲ್ಲಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ
ಸಚಿವರಾದ ಸಂತೋಷ್ ಲಾಡ್ ಸೇರಿದಂತೆ ಹಲವಾರು ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ
*ಶರಾವತಿ ಪಂಪ್ಡ್ ಸ್ಟೋರೇಜ್ ನಿರ್ಮಾಣ ವಿಚಾರ*
ಪ್ರತಿಭಟನೆ ನಡೆಸಲು ಎಲ್ಲರಿಗೂ ಅವಕಾಶವಿದೆ
ಸ್ವಾಮೀಜಿಗಳು, ಜನರಿಗೆ ಪ್ರತಿಭಟನೆಗೆ ಅವಕಾಶವಿದೆ
ಹಿಂದಿನ ಸರ್ಕಾರದ ಅವಧಿಯಲ್ಲೇ ಈ ಬಗ್ಗೆ ತೀರ್ಮಾನಿಸಲಾಗಿತ್ತು
ಈ ಯೋಜನೆಯಿಂದ ಏನು ಪರಿಣಾಮ ಆಗುತ್ತದೆ ಎಂಬುದು ಯಾರೂ ಹೇಳುತ್ತಿಲ್ಲ
ಬಿಜೆಪಿಯವರ ಹಣ ಹೊಡೆಯುವ ಯೋಜನೆ ಇದಾಗಿತ್ತು
ಈಗ ಇದರ ವಿರುದ್ಧ ಮಾತನಾಡುತ್ತಿದ್ದಾರೆ
ಬಿಜೆಪಿಯವರಿಗೆ ದುಡ್ಡು ಹೊಡೆಯುವ ಕಲೆ ಗೊತ್ತು ಹಾಗಾಗಿ ಆರೋಪಿಸುತ್ತಿದ್ದಾರೆ
ಇವರ ಯೋಚನೆಗಳು, ದುಡ್ಡು ಹೊಡೆಯುವ ಯೋಜನೆ ಇವರಿಗೆ ತಿಳಿದಿದೆ
ಹಾಗಾಗಿ ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ
ನಿಲ್ಲಿಸುವುದಾದರೆ ಈ ಯೋಜನೆಯನ್ನು ನಿಲ್ಲಿಸಿ ನೋಡೋಣ
ಈ ಯೋಜನೆ ನಿಲ್ಲಿಸಲು ಇವರೇನು ಇಂಜಿನಿಯರ್ ಗಳಾ !?
1,465 ಮೆಗಾವ್ಯಾಟ್ ವಿದ್ಯುತ್ ಯೋಜನೆ ಇದಾಗಿದೆ
ಯಾವುದೇ ಯೋಜನೆ ಆದರೂ ಸ್ವಲ್ಪ ಮಟ್ಟಿನ ಅರಣ್ಯ ಹೋಗಿಯೇ ಹೋಗುತ್ತದೆ
ಯೋಜನೆ ಕೈಗೆತ್ತಿಕೊಂಡಾಗ ಸ್ವಲ್ಪ ಮಟ್ಟಿನ ಪರಿಸರ ಹಾನಿ ಆಗಿಯೇ ಆಗುತ್ತದೆ
ಆದರೆ ರೈತ ಸಂಘದ ಜೊತೆಗೆ ಕೂತು ಬಿಜೆಪಿಯವರು ಹೋರಾಟ ಮಾಡುವುದು ಎಷ್ಟು ಸರಿ
ಬಿಜೆಪಿಯವರು ಸುಮ್ಮ ಸುಮ್ಮನೇ ಗೊಂದಲ ಮೂಡಿಸಬಾರದು
ಸಾರ್ವಜನಿಕವಾಗಿ ಹೇಳಿಕೆ ನೀಡಿ ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ
*ರಾಜ್ಯದಲ್ಲಿ ಮಳೆಯಿಂದಾಗಿ ಹಲವಾರು ಜನರು ಮನೆ ಕಳೆದುಕೊಂಡಿದ್ದಾರೆ*
ರಾಜ್ಯದಲ್ಲಿ ಈ ಬಾರಿ ಮಳೆ ಮತ್ತೆ, ಮತ್ತೆ ಬರುತ್ತಲೇ ಇದೆ
ಮನೆ ಕಳೆದುಕೊಂಡವರಿಗೆ ಹಾಗೂ ಅಡಿಕೆ ಹಾನಿಯಾದ ರೈತರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆನೆ
*ರಾಜ್ಯ ರಾಜಕೀಯದಲ್ಲಿ ಸಿಎಂ ಉತ್ತರಾಧಿಕಾರಿ ವಿಚಾರ*
ಯತೀಂದ್ರ ಸಿದ್ಧರಾಮಯ್ಯನವರು ಸಿದ್ಧರಾಮಯ್ಯ ರಾಜಕೀಯದ ಅಂತಿಮ ಘಟ್ಟದಲ್ಲಿದ್ದಾರೆಂದು ಹೇಳಿಕೆ ಯಾಕೆ ಕೊಟ್ಟರು ಅಂತಾ ಗೊತ್ತಿಲ್ಲ
ಆದರೆ ನಮ್ಮಲ್ಲಿ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡೋದು ನಮ್ಮ ರಾಷ್ಟ್ರೀಯ ನಾಯಕರು
ನಮ್ಮ ಹೈಕಮಾಂಡ್ ಆದೇಶದಂತೆ ನಾವು ನಡೆದುಕೊಳ್ಳುತ್ತೇವೆ
ನನಗೂ ಸಚಿವನಾಗಬೇಕೆಂಬ ಆಸೆ ಇದೆ ಕೊಟ್ಟು ಬಿಡ್ತಾರಾ !?
ನಮ್ಮಲ್ಲಿ ಎಲ್ಲದಕ್ಕೂ ಕೇಂದ್ರ ನಾಯಕರು ಸೂಚನೆ ಕೊಡಬೇಕು
ಅವರ ಸೂಚನೆಯಂತೆ ನಮ್ಮ ನಿರ್ಧಾರ ಇರುತ್ತೆ
ನಾನು ಸಿಎಂ ಆಗ್ಬೇಕು ಅಂತಿನಿ ಮಾಡಿ ಬಿಡ್ತಾರಾ !?
ಯಾರು ಯಾರೂ ಈ ರೀತಿ ಹೇಳಿಕೆ ನೀಡ್ತಾರೋ ಅದೆಲ್ಲಾ ಅವರ ವ್ಯಯಕ್ತಿಕ ಹೇಳಿಕೆ
ಆ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ
ಕೇಂದ್ರದ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೆವೆ
ನಾನು ಯಾರ ಪರವಾಗಿಯೂ ಇಲ್ಲ
ನಾನು ಕಾಂಗ್ರೆಸ್ ಪಕ್ಷದ ಪರವಾಗಿದ್ದೆನೆ
ಯತೀಂದ್ರ ಅವರು ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ
ಅದನ್ನು ಅವರಿಗೆ ಕೇಳಬೇಕು
ಸಿದ್ಧರಾಮಯ್ಯನವರು ಒಳ್ಳೆಯ ಆಡಳಿತ ನೀಡಿದ್ದಾರೆ
ಈಗ ಅವರ ಮಗನೇ ಯಾಕೆ ಈ ರೀತಿ ಹೇಳಿದ್ದಾರೋ ಗೊತ್ತಿಲ್ಲ
ಅವರ ಮಗ ಹೇಳಿದ್ದು ನಡೆಯೋದಿಲ್ಲ ನಮ್ಮ ವರಿಷ್ಠರ ತೀರ್ಮಾನ ನಡೆಯುತ್ತೆ
ಸತೀಶ್ ಜಾರಕಿಹೊಳಿಯವರು ಈ ಹಿಂದಿನ ಚುನಾವಣೆಯಲ್ಲೇ ಹೇಳಿದ್ದರು
2028 ರ ಚುನಾವಣೆ ನನ್ನ ಸಾರಥ್ಯದಲ್ಲಿ ನಡೆಯಬೇಕೆಂದು ಆಗ ಹೇಳಿದ್ದರು
ಆದರೆ ಕೇಂದ್ರದ ನಾಯಕರು ಹೇಳಿದಂತೆ ಅಂತಿಮವಾಗುತ್ತೆ
ಯರ್ಯಾರೋ ಹೇಳಿದ್ದಕ್ಕೆ ನಮ್ಮಲ್ಲಿ ಬೆಲೆ ಇಲ್ಲ
ಅನೇಕ ಶಾಸಕರು ಅನೇಕ ಹೇಳಿಕೆ ನೀಡಿದ್ದಾರೆ
ಆದರೆ ಆ ಹೇಳಿಕೆಗಳು ಅವರ ವ್ಯಯಕ್ತಿಕ ಹೇಳಿಕೆಯಾಗಿದೆ
ಪಕ್ಷದ ನಾಯಕರ ನಿರ್ಧಾರಕ್ಕೆ ನಾವು ಜೈ ಎನ್ನುತ್ತೇವೆ


