ವಲಯ ಚಾಂಪಿಯನ್ ಆಗಿ ರೋಟರಿ ಕ್ಲಬ್ ಮಿಡ್ ಟೌನ್ – ಹರ್ಷ ಕಾಮತ್

*ವಲಯ ಚಾಂಪಿಯನ್ ಆಗಿ ರೋಟರಿ ಕ್ಲಬ್ ಮಿಡ್ ಟೌನ್ – ಹರ್ಷ ಕಾಮತ್*

ಶಿವಮೊಗ್ಗದ ಸುವರ್ಣ ಸಂಸ್ಕೃತಿ ಭವನದಲ್ಲಿ ನಡೆದ ರೋಟರಿ ವಲಯ–10 ಸಾಂಸ್ಕೃತಿಕ ಸ್ಪರ್ಧೆಯಲ್ಲಿ, ರೋಟರಿ ಕ್ಲಬ್ ಮಿಡ್ ಟೌನ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಒಟ್ಟು ಎಂಟು ಪ್ರಶಸ್ತಿಗಳನ್ನು ಗಳಿಸಿ, ಒವರ್ ಆಲ್ ಚಾಂಪಿಯನ್‌ಶಿಪ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ ಎಂದು
ಕ್ಲಬ್ ಅಧ್ಯಕ್ಷರಾದ ರೋಟರಿಯನ್ ಹರ್ಷ ಭಾಸ್ಕರ್ ಕಾಮತ್ ಹೇಳಿದರು.

ಈ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾ ಹೇಳಿದ ಅವರು,
> “ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೇವಲ 110 ದಿನಗಳಲ್ಲಿ ಕ್ಲಬ್ 97ಕ್ಕೂ ಹೆಚ್ಚು ಸೇವಾ ಮತ್ತು ಸಾಮಾಜಿಕ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಒಟ್ಟು ₹13,68,000 ಮೌಲ್ಯದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ 63 ಪಬ್ಲಿಕ್ ಇಮೇಜ್ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
ಈ ಪ್ರಶಸ್ತಿ ನಮ್ಮ ಕ್ಲಬ್ ಸದಸ್ಯರ ಶ್ರಮ, ಸಮರ್ಪಣೆ ಮತ್ತು ಒಗ್ಗಟ್ಟಿನ ಪ್ರತಿಫಲವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರೋಟರಿಯನ್ ಆರ್.ಎನ್. ಮಂಜುನಾಥ್,
ಅಸಿಸ್ಟೆಂಟ್ ಗವರ್ನರ್ ಕೆ.ಪಿ ಶೆಟ್ಟಿ, ಅನ್ಸ್ ಅಧ್ಯಕ್ಷ ರೋಟರಿಯನ್ ಪವಿತ್ರ ಕಾಮತ್
ಮತ್ತು ರೋಟರಿಯನ್ ಪ್ರೀತಿ ದೀಪಕ್ ಸಾರಥಿ ಕಾರ್ಯದರ್ಶಿ ಅವರು ಉಪಸ್ಥಿತರಿದ್ದರು.

*ಮಿಡ್ ಟೌನ್ ಕ್ಲಬ್ ಪಡೆದ ಪ್ರಶಸ್ತಿಗಳು:*

ಮಹಿಳೆಯರ ಸೊಲೋ ಹಾಡು ಪ್ರಥಮ ಸ್ಥಾನ
ಪುರುಷರ ಸೊಲೋ ಹಾಡು ಪ್ರಥಮ ಸ್ಥಾನ
ಡ್ಯೂಯೆಟ್ ಹಾಡು ಪ್ರಥಮ ಸ್ಥಾನ
ಗುಂಪು ಹಾಡು ದ್ವಿತೀಯ ಸ್ಥಾನ
ಗುಂಪು ನೃತ್ಯ ಪ್ರಥಮ ಸ್ಥಾನ
ಆನೇಟ್ ಸೊಲೋ ನೃತ್ಯ ದ್ವಿತೀಯ ಸ್ಥಾನ
ರೋಟೇರಿಯನ್ ಸೊಲೋ ನೃತ್ಯ ದ್ವಿತೀಯ ಸ್ಥಾನ
ನಾಟಕ (ಸ್ಕಿಟ್) ದ್ವಿತೀಯ ಸ್ಥಾನ

ಒಟ್ಟು 8 ಕ್ಲಬ್‌ಗಳ ಸ್ಪರ್ಧೆಯಲ್ಲಿ ಭಾಗವಹಿಸಿದ ರೋಟರಿ ಕ್ಲಬ್ ಮಿಡ್ ಟೌನ್, ಅತ್ಯಧಿಕ ಅಂಕಗಳನ್ನು ಪಡೆದು ಒವರ್ ಆಲ್ ಚಾಂಪಿಯನ್ ಪಟ್ಟಕ್ಕೇರಿದೆ.

ಈ ಯಶಸ್ಸಿನಲ್ಲಿ ಭಾಗಿಯಾದ ಎಲ್ಲ ಸ್ಪರ್ಧಾರ್ಥಿಗಳಿಗೆ, ಸದಸ್ಯರಿಗೆ ಹಾಗೂ ಬೆಂಬಲಿಗರಿಗೆ ಕ್ಲಬ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಸಲ್ಲಿಸಲಾಯಿತು.