ಔಷಧಿ ಆರ್ಡರ್ ಮಾಡಿದ ಮಹಿಳೆಗೆ ಬಾಕ್ಸ್ನಲ್ಲಿ ಬಂದಿದ್ದು ಮಾನವ ದೇಹದ ಅಂಗಗಳು!!*
*ಔಷಧಿ ಆರ್ಡರ್ ಮಾಡಿದ ಮಹಿಳೆಗೆ ಬಾಕ್ಸ್ನಲ್ಲಿ ಬಂದಿದ್ದು ಮಾನವ ದೇಹದ ಅಂಗಗಳು!!*
ಔಷಧಿಗೆಂದು ಕಾಯುತ್ತಿದ್ದ ಮಹಿಳೆ ಬಾಕ್ಸ್ ನೋಡಿ ಹೌಹಾರಿರುವ ಘಟನೆ ಅಮೆರಿಕದಲ್ಲಿ ನಡೆದಿದೆ. ಮಹಿಳೆ ಔಷಧಿಗಳನ್ನು ಆರ್ಡರ್ ಮಾಡಿದ್ದರು. ಮನೆಗೆ ಬಾಕ್ಸ್ ಬಂದ ಕೂಡಲೇ ತೆರೆದು ನೋಡಿದಾಗ ಅದರಲ್ಲಿ ಔಷಧಿಗಳಲ್ಲ ಬದಲಾಗಿ ಮನುಷ್ಯದ ದೇಹದ ಅಂಗಗಳಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಅದರಲ್ಲಿ ಮನುಷ್ಯನ ತೋಳುಗಳು ಹಾಗೂ ಬೆರಳುಗಳನ್ನು ಐಸ್ ಜತೆಗೆ ಇಟ್ಟಿರುವುದು ಕಂಡುಬಂದಿದೆ. ಕೆಂಟುಕಿಯ ಹಾಪ್ಕಿನ್ಸ್‌ವಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಬುಧವಾರ ಪಾರ್ಸೆಲ್ ಪಡೆದ ನಂತರ, ಪೊಲೀಸರಿಗೆ ಕರೆ ಮಾಡಿದ್ದಾರೆ. ನಾವು ತುರ್ತು ಔಷಧಿಗಳನ್ನು ನಿರೀಕ್ಷಿಸುತ್ತಿದ್ದೆವು ಅವರು ಎರಡು ಬಾಕ್ಸ್ಗಳನ್ನು ನೀಡಿದ್ದರು.
ಒಂದು ಪೆಟ್ಟಿಗೆಯಲ್ಲಿ ಕಸಿಗೆ ಬೇಕಾದ ಮಾನವ ದೇಹದ ಬಿಡಿ ಭಾಗಗಳಿದ್ದವು. ಅದು ಎಲ್ಲಿಗೆ ಹೋಗಬೇಕಿತ್ತು ಎಂಬ ಅರಿವಿಲ್ಲ.ಕ್ರಿಶ್ಚಿಯನ್ ಕೌಂಟಿ ಕರೋನರ್ ಸ್ಕಾಟ್ ಡೇನಿಯಲ್ ಸ್ಥಳಕ್ಕೆ ಬಂದು ಅವಶೇಷಗಳನ್ನು ವಶಪಡಿಸಿಕೊಂಡರು. ಡೇನಿಯಲ್ ಆ ಪ್ಯಾಕೇಜ್ ಅನ್ನು ಸ್ಥಳೀಯ ಶವಾಗಾರಕ್ಕೆ ತೆಗೆದುಕೊಂಡು ಹೋದರು, ಅಲ್ಲಿ ಮರುದಿನ ಬೆಳಗ್ಗೆ ಕೊರಿಯರ್ ಮೂಲಕ ಅದನ್ನು ಮರಳಿ ಪಡೆಯಲಾಯಿತು.
ದೇಹದ ಭಾಗಗಳು ನಾಲ್ಕು ವಿಭಿನ್ನ ದಾನಿಗಳಿಂದ ಬಂದಿದ್ದವು. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸಿದ್ದಕ್ಕಾಗಿ ಡೇನಿಯಲ್ ಆ ಮಹಿಳೆಯನ್ನು ಹೊಗಳಿದ್ದಾರೆ.
ಅಧಿಕಾರಿಗಳನ್ನು ಕರೆಯುವ ಮೂಲಕ ಸರಿಯಾದ ಕೆಲಸ ಮಾಡಿದ್ದಾರೆಂದು ಹೇಳಿದ್ದಾರೆ. ಯಾರದ್ದೋ ಶಸ್ತ್ರಚಿಕಿತ್ಸೆಗೆಂದು ಕಳುಹಿಸಲಾಗಿದ್ದ ದೇಹದ ಅಂಗಾಂಗಗಳು ಈ ಮಹಿಳೆಗೆ ತಲುಪಿದ್ದವು.


