*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ*

*ನ.25-27; ಮೂರು ದಿನ ಪೊಲೀಸ್ ಕ್ರೀಡಾಕೂಟ*

ನವೆಂಬರ್ 25 ರಿಂದ 27 ರ ವರೆಗೆ ಮೂರು ದಿನಗಳ ಕಾಲ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾ ಕೂಟ – 2025* ನ್ನು ಹಮ್ಮಿಕೊಳ್ಳಲಾಗಿದೆ.

ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ನ.25 ರ ಬೆಳಗ್ಗೆ 8:30ಕ್ಕೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಗುರುದತ್‌ ಹೆಗಡೆ ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ, ಕ್ರೀಡಾಕೂಟಕ್ಕೆ ಚಾಲನೆ* ನೀಡಲಿದ್ದಾರೆ.