*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ* *ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ* *ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.* *ಮತ್ತೇನೆಲ್ಲಾ ಅಂದ್ರು ಈ ಇಬ್ಬರು?*

*ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿಂದ ನೂತನ ಡಿಸಿ- ಎಸ್ ಪಿಗೆ ಸನ್ಮಾನ- ಸಂವಾದ*

*ಪ್ರವಾಸಿ ತಾಣಗಳ‌ ಅಭಿವೃದ್ಧಿಗೆ ಆದ್ಯತೆ ಎಂದ ಡಿಸಿ ಪ್ರಭುಲಿಂಗ ಕವಳಿಕಟ್ಟಿ*

*ಸಾಹಿತ್ಯ ಓದುತ್ತಲೇ ಖಾಕಿ ಪ್ರವೇಶಿಸಿದ್ದೇನೆ ಎಂದ ಎಸ್ ಪಿ ನಿಖಿಲ್ .ಬಿ.*

*ಮತ್ತೇನೆಲ್ಲಾ ಅಂದ್ರು ಈ ಇಬ್ಬರು?*

ಪ್ರಾಕೃತಿಕ ಸೌಂದರ್ಯ, ಸಾಂಸ್ಕೃತಿಕ ವೈಭವ ಹಾಗೂ ಐತಿಹಾಸಿಕ ಮಹತ್ವದಿಂದ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಯಲ್ಲಿರುವ, ಆದರೆ ಜನಮನಕ್ಕೆ ಇನ್ನೂ ತಲುಪದಿರುವ ಅನೇಕ ಎಲೆಮರೆಕಾಯಿಯಂತಿರುವ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಅವುಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಲಾಗುವುದು ಎಂದು ನೂತನ ಜಿಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ನೂತನ ಜಿಧಿಕಾರಿ ಹಾಗೂ ಜಿ ರಕ್ಷಣಾಧಿಕಾರಿಗಳ ಗೌರವಾರ್ಥ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ ಜನಪ್ರಿಯತೆ ಪಡೆದಿರುವ ಪ್ರವಾಸಿ ತಾಣಗಳ ಜೊತೆಗೆ, ಸಾರ್ವಜನಿಕರ ಗಮನಕ್ಕೆ ಬಾರದಿರುವ ಪ್ರಕೃತಿ ಸೌಂದರ್ಯದಿಂದ ಕೂಡಿದ ಸ್ಥಳಗಳನ್ನು ಗುರುತಿಸಿ, ಅವುಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಉzಶ ಹೊಂದಲಾಗಿದೆ ಎಂದರು.
ಶರಾವತಿ ಸಂತ್ರಸ್ತರ ಸಮಸ್ಯೆಯ ಕುರಿತು ಮಾತನಾಡಿದ ಜಿಧಿಕಾರಿಗಳು, ಈ ವಿಷಯ ಈಗ ತಾರ್ಕಿಕ ಹಂತಕ್ಕೆ ತಲುಪಿದ್ದು, ಹಿಂದಿನ ಜಿಧಿಕಾರಿ ಗುರುದತ್ತ ಹೆಗಡೆ ಅವರು ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸುವ ಜೊತೆಗೆ, ಸಮಸ್ಯೆಯನ್ನು ಶಾಶ್ವತ ವಾಗಿ ಬಗೆಹರಿಸುವ ನಿಟ್ಟಿನಲ್ಲಿ ತಾವು ಕಾರ್ಯೋನ್ಮುಖರಾಗುವುದಾಗಿ ಭರವಸೆ ನೀಡಿದರು.
ಜೊತೆಗೆ ಜಿಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಅಗತ್ಯ ವಿರುವ ಎ ಮುಂಜಗ್ರತಾ ಹಾಗೂ ತಡೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೆರೆ ಹಾಗೂ ಕಂದಾಯ ಭೂಮಿಗಳ ಒತ್ತುವರಿ ವಿಚಾರದಲ್ಲಿ ಯಾವುದೇ ರೀತಿಯ ಸಡಿಲಿಕೆ ಇಲ್ಲದೆ, ಕಾನೂನಿನ ಚೌಕಟ್ಟಿನೊಳಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಪರಿಸರ ಸಂರಕ್ಷಣೆಯ ಕುರಿತಾಗಿ ಯುವಜನತೆಯಲ್ಲಿ ಪರಿಸರ ಸ್ನೇಹಿ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮುಂಜಗ್ರತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ರತಿದಿನವೂ ಸವಾಲುಗಳು ಎದುರಾಗುತ್ತವೆ, ಆದರೆ ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಮೂಲಕ ಅವುಗಳನ್ನು ಸಮರ್ಥವಾಗಿ ಎದುರಿಸಲಾಗುವುದು ಎಂದರು.
ನಂತರ ಮಾತನಾಡಿದ ನೂತನ ಜಿ ವರಿಷ್ಠಾಧಿಕಾರಿ ನಿಖಿಲ್ ಅವರು, ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಮಾಜದ ಶಾಂತಿ, ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವುದೇ ಪೊಲೀಸ್ ಇಲಾಖೆಯ ಆದ್ಯತೆಯಾಗಲಿದೆ ಎಂದರಲ್ಲದೇ, ಶಿವಮೊಗ್ಗ ಜಿ ಪ್ರಕೃತಿ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಈ ಜಿ ಗಳಿಸಿರುವ ಗೌರವವೇ ನನಗೆ ಪ್ರೇರಣೆಯಾಗಿದೆ ಎಂದರು.
ನಕ್ಸಲ್ ನಿಗ್ರಹ ಪಡೆಯಲ್ಲಿದ್ದ ಸಂದರ್ಭದಲ್ಲಿ ಜಿಯ ಕಾಡು ಪ್ರದೇಶಗಳಲ್ಲಿ ಸಾಕಷ್ಟು ಸಂಚರಿಸಿರುವ ಅನುಭವವಿದ್ದು, ಈಗ ಜಿ ರಕ್ಷಣಾಧಿಕಾರಿಯಾಗಿ ಜಿಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ನಿರಂತರವಾಗಿ ಸಂಚರಿಸಿ ಅಪರಾಧ ಚಟುವಟಿಕೆ ಗಳಿಗೆ ಕಡಿವಾಣ ಹಾಕುವುದಾಗಿ ಭರವಸೆ ನೀಡಿದರು.
ಮಹಿಳೆಯರು ಹಾಗೂ ಮಕ್ಕಳ ವಿರುದ್ಧ ನಡೆಯುವ ಕಿರುಕುಳ, ಅಸಭ್ಯ ವರ್ತನೆ ಹಾಗೂ ಯಾವುದೇ ರೀತಿಯ ದೌರ್ಜನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗುವುದು. ಮಹಿಳೆಯರಲ್ಲಿ ಜಗೃತಿ ಮೂಡಿಸುವ ಉzಶದಿಂದ ಅಕ್ಕ ಪಡೆ ರಚಿಸಲಾ ಗುವುದು. ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ರಕ್ಷಣೆ ಹಾಗೂ ಸಹಾಯ ನೀಡುವುದೇ ಈ ಪಡೆಯ ಮುಖ್ಯ ಉzಶ ಎಂದು ವಿವರಿಸಿದರು.
ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿನಿ ಯರ ರಕ್ಷಣೆ ಹಾಗೂ ಅವರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ತಮ್ಮ ವೈಯಕ್ತಿಕ ಬದುಕಿನ ಕುರಿತು ಮಾತನಾಡಿದ ಎಸ್‌ಪಿ ನಿಖಿಲ್ ಅವರು, ತಾವು ಮೂಲತಃ ಚಿತ್ರದುರ್ಗ ಜಿಯವರಾಗಿದ್ದು, ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿರುವುದಾಗಿ ತಿಳಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದ ತಮಗೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅವಕಾಶ ಹಾಗೂ ವಿದೇಶದಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತರೂ, ಕರ್ನಾಟಕದಲ್ಲಿಯೇ ಸೇವೆ ಸಲ್ಲಿಸಬೇಕೆಂಬ ಬಯಕೆಯಿಂದ ಯುಪಿಎಸ್ಸಿ ಪರೀಕ್ಷೆ ಬರೆದು ರಾಜ್ಯದಲ್ಲಿಯೇ ಐಪಿಎಸ್ ಅಧಿಕಾರಿಯಾಗಿರುವುದಾಗಿ ಹೇಳಿದರು.
ನನ್ನ ಕರ್ನಾಟಕವೇ ನನಗೆ ವಿಶ್ವ ಎಂಬ ಅಭಿಮಾನಭರಿತ ಮಾತುಗಳೊಂದಿಗೆ, ಅತ್ಯಂತ ಸಂತೋಷದಿಂದ ಜನಸೇವೆಯಲ್ಲಿ ತೊಡಗಿರುವುದಾಗಿ ನುಡಿದರು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್,ಕಾರ್ಯದರ್ಶಿ ನಾಗರಾಜ್ ನೇರಿಗೆ, ಸಹಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಸೇರಿದಂತೆ ಟ್ರಸ್ಟಿಗಳು, ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ವರದಿಗಾರರು ಉಪಸ್ಥಿತರಿದ್ದರು.