*ಜ.16 ರಿಂದ 18 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ಹಳೇ ನೋಟು- ನಾಣ್ಯ-ಅಂಚೆಚೀಟಿಗಳ ಪ್ರದರ್ಶನ* *12 ವರ್ಷಗಳ ನಂತರ ನಡೆಯುತ್ತಿದೆ ಪ್ರದರ್ಶನ* *ಲಕ್ಷ ಮಕ್ಕಳು ಭಾಗವಹಿಸುವ ನಿರೀಕ್ಷೆ!* *ಅಪೂರ್ವ ನಾಣ್ಯ-ನೋಟು ಅಂಚೆ ಚೀಟಿಗಳ ಪ್ರದರ್ಶನ*

*ಜ.16 ರಿಂದ 18 ರವರೆಗೆ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ಹಳೇ ನೋಟು- ನಾಣ್ಯ-ಅಂಚೆಚೀಟಿಗಳ ಪ್ರದರ್ಶನ*

*12 ವರ್ಷಗಳ ನಂತರ ನಡೆಯುತ್ತಿದೆ ಪ್ರದರ್ಶನ*

*ಲಕ್ಷ ಮಕ್ಕಳು ಭಾಗವಹಿಸುವ ನಿರೀಕ್ಷೆ!*

*ಅಪೂರ್ವ ನಾಣ್ಯ-ನೋಟು ಅಂಚೆ ಚೀಟಿಗಳ ಪ್ರದರ್ಶನ*

2026ರ ಜನವರಿ 16, 17 ಹಾಗೂ 18ರಂದು ಮೂರು ದಿನಗಳ ಕಾಲ ಶಿವವೆಗ್ಗ ವಿನೋಬನಗರ 60ಅಡಿ ರಸ್ತೆಯ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆಚೀಟೆಗಳು ಹಾಗೂ ಅಪರೂಪದ ವಸ್ತುಗಳ ಪ್ರದರ್ಶನ ಎರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ದೇವದಾಸ್ ಎನ್. ನಾಯಕ್, ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್ ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ವಿವಿಧೆಡೆಯಿಂದ ವಿಶ್ವವಿಖ್ಯಾತ ನಾಣ್ಯ ಸಂಗ್ರಾಹಕರು ಪಾಲ್ಗೊಂಡು ತಮ್ಮ ಸಂಗ್ರಹದ ಅಪರೂಪದ ರಾಜ ಮಹಾರಾಜರ ಆಳ್ವಿಕೆ ಕಾಲದ ಆಕರ್ಷಕ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಸೀಸದ ನಾಣ್ಯಗಳನ್ನು ಪ್ರದರ್ಶಿಸಲಿದ್ದಾರೆ ಎಂದರು.

ಜೊತೆಗೆ,ದೇಶ ವಿದೇಶದ ನಾಣ್ಯ ಮತ್ತು ನೋಟುಗಳು, ಪಾಲಿಮರ್ ಪ್ಲಾಸ್ಟಿಕ್ ನೋಟುಗಳು ಸೇರಿದಂತೆ ಭಾರತದಲ್ಲಿ ಬ್ರಿಟೀಷರು, ಪೋರ್ಚುಗೀಸರ ಅಳ್ವಿಕೆಯ ಕಾಲದ ನಾಣ್ಯಗಳು, ನೋಟುಗಳು, ಸ್ವತಂತ್ರ ಭಾರತದ ನವೀಕೃತ ವಿಶೇಷ ನಾಣ್ಯ ನೋಟುಗಳು ಸಹ ಪ್ರದರ್ಶನದಲ್ಲಿರಲಿವೆ. ಸ್ವತಂತ್ರ ಭಾರತದ ಅತೀ ದೊಡ್ಡದಾದ ಸಾವಿರ ರೂ., 100 ರೂ. ನೋಟುಗಳು, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ದೇಶದ ಮಹಾನ್ ವ್ಯಕ್ತಿಗಳ ಹಾಗೂ ವಿಶೇಷ ಸ್ಮಾರಕಗಳ ಬೆಳ್ಳಿ ನಾಣ್ಯಗಳು ಪ್ರದರ್ಶನ ಸಹ ಇರುತ್ತದೆ. ಶಿವಮೊಗ್ಗೆಯ ಸರ್ವರಿಗೂ ಮತ್ತು ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ಇರುತ್ತದೆ ಎಂದು ವಿವರಿಸಿದರು.

ಜ. 16ರ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ರಾಷ್ಟ್ರಮಟ್ಟದ ನಾಣ್ಯ-ನೋಟುಗಳು, ಅಂಚೆಚೀಟೆಗಳ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪ ಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಮಾಜಿ ಶಾಸಕ ಎಸ್. ರುದ್ರೇಗೌಡರು, ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ, ಖ್ಯಾತ ಉದ್ಯಮಿ ಕಿಮ್ಮನ ರೆಸಾರ್ಟ್‌ನ ಕಿಮ್ಮನೆ ಜಯರಾಂ ಅವರು ಒಟ್ಟಾಗಿ ನೆರವೇರಿಸಲಿದ್ದಾರೆ. ನಾಣ್ಯ ಪ್ರದರ್ಶನವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ, ನೋಟುಗಳ ಪ್ರದರ್ಶನವನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಅಂಚೆ ಚೀಟಿಗಳ ಪ್ರದರ್ಶನವನ್ನು ವಿಧಾನ ಪರಿಷತ್ ಶಾಸಕ ಡಿ.ಎಸ್. ಅರುಣ್, ಡೀಲರ್ ಸ್ಟಾಲ್‌ಗಳನ್ನು ಕೆಪಿಸಿಸಿ ರಾಜ್ಯ ಮುಖಂಡರಾದ ಎಂ. ಶ್ರೀಕಾಂತ್ ಹಾಗೂ ಸ್ಟಾಲ್‌ಗಳ ಉದ್ಘಾಟನೆಯನ್ನು ಸೂಡಾ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಜಿ.ಪಂ. ಮಾಜಿ ಸದಸ್ಯ ಕೆ.ಈ. ಕಾಂತೇಶ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ದೇವದಾಸ್ ಎನ್. ನಾಯಕ್ ಅಧ್ಯಕ್ಷತೆ ವಹಿಸುವರು.

ಪ್ರಶಸ್ತಿ ಪ್ರಧಾನ ಮತ್ತು ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೇರಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ ಎಂದರು.

ಶಿವಮೊಗ್ಗ ಅಮೂಲ್ಯ ಶೋಧ ವಸ್ತು ಸಂಗ್ರಹಾಲಯದ ನಿರ್ಮಾತೃ ಹೆಚ್. ಖಂಡೋಬರಾವ್, ರಾಷ್ಟ್ರಮಟ್ಟದ ಖ್ಯಾತ ನಾಣ್ಯ ಸಂಗ್ರಹಕರು ಹಾಗೂ ಕನ್ನಡ ನಾಡು ನಾಣ್ಯ ಸಂಘದ ರಾಜ್ಯಾಧ್ಯಕ್ಷರೂ ಆದ ಶ್ರೀ ರಾಜೇಂದ್ರ ಮಾರು ಮತ್ತು ರಾಷ್ಟ್ರೀಯ ಖ್ಯಾತಿಯ ನಾಣ್ಯ ಸಂಗ್ರಹಕ ಬೆಂಗಳೂರಿನ ಮಂಜುನಾಥ್ ಅವರಿಗೆ ಪ್ರಶಸ್ತಿ ಪ್ರಧಾನ ಇರುತ್ತದೆ. ಇದೇ ಸಂದರ್ಭದಲ್ಲಿ ಅಪರೂಪದ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಪ್ರದರ್ಶಿಸಿದ ಮಂಗಳೂರಿನ ಖ್ಯಾತ ನಾಣ್ಯ ಸಂಗ್ರಹಕ ಪ್ರಶಾಂತ್ ಶೇಟ್ ಮತ್ತು ಬೆಂಗಳೂರಿನ ಖ್ಯಾತ ನಾಣ್ಯ ಸಂಗ್ರಾಹಕ ಛಗನ್ ರಾಜ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಸ್. ಚಂದ್ರಕಾಂತ್,ಜಂಟಿ ಕಾರ್ಯದರ್ಶಿ ಎಲ್. ಸುಬ್ರಹ್ಮಣ್ಯ, ಕೋಶಾಧ್ಯಕ್ಷ ವಿನೋದ್‌ಕುಮಾರ್ ಜೈನ್, ಮತ್ತು ಎಲ್ಲಾ ಟ್ರಸ್ಟಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು ವಿವರಣೆ ನೀಡಿದರು.