ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಅವರು ಹಾಗೆ ಇವರು ಹೀಗೆ
ಎಂದು ಟೀಕಿಸುತ್ತಲೇ
ತಾನು ಹೇಗೆ ಎಂಬುದೇ
ಮರೆತುಬಿಡುವನು
ಮನುಷ್ಯ…

2.
ಉಸಿರಾಡಲಾದರೂ ಬಿಡು
ಹೃದಯವೇ…

ಕಣ್ಣು ತೆರೆದೊಡನೆ
ನೆನಪಾಗಿಬಿಡುತ್ತೀಯಲ್ಲ!

3.
ನರಕಕ್ಕೂ ಹೋಗಲಾರೆ
ಸ್ವರ್ಗಕ್ಕೂ ಹೋಗಲಾರೆ

ನಿನ್ನ ಹೃದಯ ತೊರೆದು
ಮತ್ತೆಲ್ಲೂ ಇರಲಾರೆ!

– *ಶಿ.ಜು.ಪಾಶ*
8050112067
(10/3/2026)