ಕವಿಸಾಲು

*ಕವಿಸಾಲು*

1.
ಈ ಜಗತ್ತಿನ
ಎಲ್ಲದನ್ನೂ
ಬಾಚಿಕೊಳ್ಳುವೆವು

ಖಾಲಿ
ಕೈಯಲ್ಲಿ
ಕೊನೆಗೆ ತೆರಳುವೆವು…

2
ಸದ್ದು
ಖರೀದಿಸಬಹುದು;
ಮೌನ
ಖರೀದಿಸಿದವರುಂಟೆ!

ಮಸಣದ್ದು ಕೂಡ
ನಿಶ್ಯಬ್ದ ಮುಗುಳ್ನಗು…

3
ಸಮುದ್ರವೇ,
ಸಿಹಿ ನೀರ
ನದಿಗಳೆಲ್ಲ ನಿನ್ನ ಕಡೆಯೇ
ಹರಿ ಹರಿದು ಬರುತ್ತಿವೆ
ಎಂದರೆ…

ಬೆವರ ಘಮಕ್ಕೆ
ಅದೆಂಥಾ
ತಾಕತ್ತಿದೆ ನೋಡು!

– *ಶಿ.ಜು.ಪಾಶ*
8050112067