*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು* *ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…*

*ಭದ್ರಾವತಿ ಅಂತರಗಂಗೆ ಗ್ರಾಮದ 5 ಜನ ಯುವಕರಿಗೆ ತಲಾ 2 ವರ್ಷ ಜೈಲು- 1 ಲಕ್ಷ ರೂ., ದಂಡವಿಧಿಸಿ ಕೋರ್ಟ್ ತೀರ್ಪು*

*ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿದ್ದ ಪ್ರಕರಣ…*

ಮಹಿಳೆ ಮನೆಗೆ ಅಕ್ರಮ ಪ್ರವೇಶ ಮಾಡಿ, ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ್ದಲ್ಲದೇ ಜಾತಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ಅಂತರಗಂಗೆ ಗ್ರಾಮದ ಐವರಿಗೆ 2 ವರ್ಷ ಜೈಲು, 1 ಲಕ್ಷ ರೂ.,ಗಳ ದಂಡ ವಿಧಿಸಿ ಭದ್ರಾವತಿಯ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ.

ನವೀನ(25), ಮನು(31), ಸಂತೋಷ(31), ಮಂಜುನಾಥ.v.(33) ಮತ್ತು ಅಭಿಷೇಕ್(24) ಶಿಕ್ಷೆಗೊಳಗಾದವರು.

2023ರ ಜೂ.6 ರಂದು ರಾತ್ರಿ ಅಂತರಗಂಗೆಯ ಶ್ರೀಮತಿ ರಾಧರವರ ಮನೆಗೆ ಈ ಐವರು ನುಗ್ಗಿದ್ದರು. ಈ ಬಗ್ಗೆ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆಗಿನ ಭದ್ರಾವತಿ ಎಎಸ್ ಪಿ, ಹಾಲಿ ಚಿಕ್ಕಮಗಳೂರಿನ ಎಸ್ ಪಿ ಜಿತೇಂದ್ರ ಕುಮಾರ್ ದಯಾಮ ಪ್ರಕರಣದ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ನ್ಯಾಯಾಧೀಶರಾದ ಶ್ರೀಮತಿ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಈ ತೀರ್ಪು ನೀಡಿದ್ದು, ಸರ್ಕಾರಿ ಅಭಿಯೋಜಕರಾಗಿ ಶ್ರೀಮತಿ ರತ್ನಮ್ಮ ಪಿ. ವಾದ ಮಂಡಿಸಿದ್ದರು.