ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು
ಶಿವಮೊಗ್ಗದ ಪ್ರೇರಣಾ ಕೆ. ರಾವ್ ಅವರಿಗೆ ರಕ್ಷಾ ವಿವಿಯಿಂದ ಚಿನ್ನದ ಪದಕ
ಪತ್ರಕರ್ತ ದಂಪತಿ ಕಾಶಿ- ಪದ್ಮಿನಿಯವರ ಮಗಳು
ಶಿವಮೊಗ್ಗ,ಏ.16: ಅಹಮದಾಬಾದ್ ನಲ್ಲಿ ನಡೆದ ರಾಷ್ಟ್ರೀಯ ರಕ್ಷಾ ವಿವಿಯ 5ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕಾಶಿ ವಿಶ್ವನಾಥ್ ಹಾಗೂ ಪದ್ಮಿನಿ ವಿಶ್ವನಾಥ್ ಅವರ ಪುತ್ರಿ ಪ್ರೇರಣಾ ಕೆ. ರಾವ್ ಎಂಎಸ್ಸಿ ಸೈಬರ್ ಸೆಕ್ಯುರಿಟಿ ಅಂಡ್ ಡಿಜಿಟಲ್ ಫೋರೆನ್ಸಿಕ್ನಲ್ಲಿ( CS&FD) ಗುಜರಾತ್ ರಾಜ್ಯಪಾಲರಾದ ಆಚಾರ್ಯ ದೇವವ್ರತ್ ರವರಿಂದ ಚಿನ್ನದ ಪದಕ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮುರವರು ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ದೊವೆಲ್ ರವರು ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿಗಳಾದ ಭೂಪೇಂದ್ರ ಬಾಯ್ ಪಟೇಲ್, ಗೃಹ ಸಚಿವರಾದ ನಿತ್ಯಾನಂದ ರಾಯ್, ರಾಷ್ಟ್ರೀಯ ರಕ್ಷಾ ವಿವಿ ಉಪಕುಲಪತಿ ಬಿಮಲ್ ಎನ್ ಪಟೇಲ್ ಹಾಗೂ ಇತರರು ಉಪಸ್ಥಿತರಿದ್ದರು.


