ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ;  ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು

ಶಿವಮೊಗ್ಗದ ದುರ್ಗಿಗುಡಿಯಲ್ಲಿರೋ ತೃಪ್ತಿ ಹೆಲ್ತ್ ಕೇರಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಆರೋಗ್ಯದ ಕಡೆ ಪತ್ರಕರ್ತರು ನಿಗಾ ವಹಿಸಿ; 

ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಕಿವಿಮಾತು

ಸದಾ ಕಾಲ ಒತ್ತಡದ ನಡುವೆ ಕೆಲಸ ನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದೆಡೆ ನಿಗಾ ವಹಿಸಿ ಆಗಾಗ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು ಎಂದು ಕಿಡ್ನಿ ಮತ್ತು ಮೂತ್ರಕೋಶ ರೋಗಗಳ ಶಸ್ತ್ರ ಚಿಕಿತ್ಸಾ ತಜ್ಞ ವೈದ್ಯರಾದ ಡಾ. ಎಸ್. ಚಂದ್ರಶೇಖರ್ ಹೇಳಿದರು.

ಇಂದು ಶಿವಮೊಗ್ಗದ ದುರ್ಗಿಗುಡಿ ತೃಪ್ತಿ ಹೆಲ್ತ್ ಕೇರ್ ನಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು. ಕಿಡ್ನಿ ಮತ್ತು ಮೂತ್ರಕೋಶದ ಬಗ್ಗೆ ಬಹಳಷ್ಟು ಜನರಲ್ಲಿ ಅರಿವಿನ ಪ್ರಮಾಣ ಕಡಿಮೆ ಇರುತ್ತದೆ. ನಮ್ಮ ಆರೋಗ್ಯ ಉತ್ತಮವಾಗಿರಲು ಕಿಡ್ನಿ ಸಹ ಬಹಳ ಪ್ರಮುಖವಾದ ಅಂಗವಾಗಿದ್ದು, ಇಡೀ ದೇಹ ಉತ್ತಮವಾಗಿ ಕಾಪಾಡಿಕೊಳ್ಳಲು ನಮ್ಮ ಕಿಡ್ನಿ ಹಾಗೂ ಮೂತ್ರಕೋಶ ಚೆನ್ನಾಗಿ ಕಾಪಾಡಿಕೊಳ್ಳಬೇಕೆಂದು ಹೇಳಿದರು.

ಅನೇಕ ಜನರು ಆರೋಗ್ಯ ಕೆಡಿಸಿಕೊಂಡ ಬಳಿಕ ಆಸ್ಪತ್ರೆಗಳಿಗೆ ಅಲೆಯುವ ಬದಲು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳುತ್ತಿರಬೇಕೆಂದು ಸಲಹೆ ನೀಡದರು. ಅದರಲ್ಲೂ 45 ವರ್ಷದ ಬಳಿಕ ನಿರಂತರ ಆರೋಗ್ಯ ತಪಾಸಣೆ ಹಾಗೂ ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ ಆರೋಗ್ಯಕ್ಕೆ ಸಹಕಾರಿ ಎಂದರು.

ಈ ವೇಳೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ, ವಿದೇಶದಲ್ಲಿ ವೈದ್ಯರಾಗಿ ಹಣ ಗಳಿಸಬೇಕಾದ ವೈದ್ಯ ಡಾ. ಎಸ್. ಚಂದ್ರಶೇಖರ್, ಹಣ ಗಳಿಕೆಯ ಆಸೆಯಿಲ್ಲದೇ, ಉಚಿತ ಶಿಬಿರಗಳನ್ನು ಆಯೋಜಿಸುವ ಮೂಲಕ ನಡೆಸುತ್ತಿರುವ ಸೇವೆ ಸಮಾಜಕ್ಕೆ ಅರ್ಥಪೂರ್ಣವಾಗಿದೆ ಎಂದರು. ಪತ್ರಕರ್ತರ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಪತ್ರಕರ್ತರಿಗೆ ನೆರವಾಗುತ್ತಿದೆ. ಆರೋಗ್ಯ ಶಿಬಿರಗಳ ಮೂಲಕ ಪತ್ರಕರ್ತರ ಆರೋಗ್ಯದ ಬಗ್ಗೆಯೂ ಗಮನ ಹರಿಸಲಾಗುತ್ತಿದೆ ಎಂದರು. ಮುಂಬರುವ ದಿನಗಳಲ್ಲಿ ಪತ್ರಕರ್ತರಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಟ್ರಸ್ಟ್ ಖಜಾಂಚಿ ಪಿ. ಜೇಸುದಾಸ್, ಟ್ರಸ್ಟಿಗಳಾದ ಹುಲಿಮನೆ ತಿಮ್ಮಪ್ಪ ಸೇರಿದಂತೆ ಹಲವರಿದ್ದರು.