ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆ;* *ವಿಐಪಿ ಪಾಸುಗಳು ಮಾರಾಟವಾಗುತ್ತಿದ್ದಾವಾ?!* *200₹ ವಿಶೇಷ ದರ್ಶನದ ನಕಲಿ ಟಿಕೇಟುಗಳು ಕಥೆ ಏನು?* *ಅದ್ಯಾವುದು ದೇವಿ ದುಡ್ಡನ್ನು ಕದಿಯಲು ಹೊರಟ ಕಥೆ?!*

*ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆ;*

*ವಿಐಪಿ ಪಾಸುಗಳು ಮಾರಾಟವಾಗುತ್ತಿದ್ದಾವಾ?!*

*200₹ ವಿಶೇಷ ದರ್ಶನದ ನಕಲಿ ಟಿಕೇಟುಗಳು ಕಥೆ ಏನು?*

*ಅದ್ಯಾವುದು ದೇವಿ ದುಡ್ಡನ್ನು ಕದಿಯಲು ಹೊರಟ ಕಥೆ?!*

ಶಿವಮೊಗ್ಗದ ಶ್ರೀ ಕೋಟೆ ಮಾರಿಕಾಂಬ ಜಾತ್ರೆಯಲ್ಲಿ ನಕಲಿ ಪಾಸ್ ಗಳು ಓಡಾಡುತ್ತಿರುವ ಅನುಮಾನಗಳನ್ನು ಬಹುತೇಕ ಭಕ್ತರು ವ್ಯಕ್ತಪಡಿಸಿದ್ದಾರೆ.

ಜೊತೆಗೆ, ವಿಶೇಷ ದರ್ಶನಕ್ಕೂ ನಕಲಿ ಟಿಕೇಟ್ ಮಾಡಿ ಕೆಲವರು ಲೂಟಿ ಮಾಡುತ್ತಿರುವ ಚರ್ಚೆಗಳೂ ಗಂಭೀರವಾಗಿಯೇ ನಡೆದಿವೆ.

ನಕಲಿ ಪಾಸ್ ಆಗದಿರಲೆಂದು ಮಾರಿಕಾಂಬ ಸಮಿತಿ ವಿಶೇಷವಾಗಿ ಸ್ಟಿಕ್ಕರ್ ವ್ಯವಸ್ಥೆಯನ್ನು‌ ಪಾಸ್ ಮೇಲೆ ಮಾಡಿದ್ದರೂ ಆ ಪಾಸ್ ಗಳನ್ನೂ ನಕಲು ಮಾಡಿ ಬಹಳಷ್ಟು ಜನ ಅಪಬಳಕೆ ಮಾಡಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಜೊತೆಗೆ, ಅಧ್ಯಕ್ಷರ ಹತ್ತಿರದಲ್ಲೇ ಇದ್ದ ನೂರಾರು ವಿಐಪಿ ಪಾಸ್ ಗಳನ್ನು ಎಗರಿಸಿ ಅಪಬಳಕೆ ಮಾಡಿಕೊಂಡಿರುವ ಮಾಹಿತಿ ಇದೆ.

ಮಾರಿಕಾಂಬೆ ದೇವಿಯ ವಿಶೇಷ ದರ್ಶನಕ್ಕೆ ನಿಗದಿ ಪಡಿಸಲಾದ 200₹ ಗಳ ಕೌಂಟರ್ ಟಿಕೇಟ್ ಗಳ ಗೋಲ್ ಮಾಲ್ ಕೂಡ ಈ ಬಾರಿಯ ಮಾರಿ ಜಾತ್ರೆಯ ಚರ್ಚಾ ವಿಷಯ.

ಮಾರಿಕಾಂಬೆಯ ಹೆಸರಲ್ಲಿ ಕೆಲವರು ಎಣಿಸುತ್ತಿದ್ದ ಹಣವನ್ನೇ ಎಗರಿಸಲು ಪ್ರಯತ್ನಿಸಿದ್ದರು. ಅಂಥದನ್ನೇ ಮುಚ್ಚಿ ಹಾಕಲಾಗಿದೆ ಎಂಬ ವಿಷಯವನ್ನೇ ಮುಂದಿಟ್ಟುಕೊಂಡು ನಕಲಿ ಪಾಸ್, ವಿಶೇಷ 200₹ ಟಿಕೇಟಿನ ನಕಲಿ ವ್ಯವಸ್ಥೆ ಕೂಡ ಭೀಕರ ಚರ್ಚೆಗಳಿಗೆ ಕಾರಣವಾಗುತ್ತಿದೆ.