*ಬ್ರಿಟೀಷರ ಕಾಲದ ಕಾನೂನು ಕೈ ಬಿಟ್ಟು ಶಿವಮೊಗ್ಗ ವಾಜಪೇಯಿ ಬಡಾವಣೆಯ ನೊಂದ ನಿವಾಸಿಗಳಿಗೆ ನ್ಯಾಯ ದೊರಕಿಸಿ ಕೊಡಿ…* *ನಗರಸಭೆ ಮಾಜಿ ಸದಸ್ಯ ಎನ್.ಕೆ.ಶ್ಯಾಮಸುಂದರ್ ಮನವಿ*
*ಬ್ರಿಟೀಷರ ಕಾಲದ ಕಾನೂನು ಕೈ ಬಿಟ್ಟು ಶಿವಮೊಗ್ಗ ವಾಜಪೇಯಿ ಬಡಾವಣೆಯ ನೊಂದ ನಿವಾಸಿಗಳಿಗೆ ನ್ಯಾಯ ದೊರಕಿಸಿ ಕೊಡಿ…*
*ನಗರಸಭೆ ಮಾಜಿ ಸದಸ್ಯ ಎನ್.ಕೆ.ಶ್ಯಾಮಸುಂದರ್ ಮನವಿ*

ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಲ್ಲಿಗೇನಹಳ್ಳಿ ವಾಜಪೇಯಿ ಬಡಾವಣೆ ನಿವೇಶನಗಳ ಪ್ರಾಧಿಕಾರದ ತಪ್ಪುಆಯ್ಕೆಹಂಚಿಕೆ ಹಾಗೂ ಕಾನೂನು ತೊಡಕಿನ ಗೊಂದಲದಿಂದ ನ್ಯಾಯ ಬದ್ಧವಾದ ನಾಗರೀಕರು ನಿವೇಶನ ಪಡೆಯಲು 30 ವರ್ಷ. ಅರ್ಜಿ ಸಲ್ಲಿಸಿದಾಗ ಅರ್ಜಿದಾರರಿಗೆ ಸುಮಾರು 35 ವರ್ಷ. ಈಗ ಫಲಾನುಭವಿಗಳಿಗೆ ಸುಮಾರು 60. 65 ವರ್ಷ ಆಗಿರುವುದರಿಂದ ಹಾಗೂ ಈ ಕೆಳಗಿನ ನ್ಯೂನತೆಗಳನ್ನು ಗಮನಿಸಿ ಈ ವಾಜಪೇಯಿ ಬಡಾವಣೆಯ ನಿವೇಶನಗಳನ್ನು ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಫಲಾನುಭವಿಗಳಿಗೆ ಕರಾರು (ಅಗ್ರಿಮೆಂಟ್} ನೋಂದಣಿ ರದ್ದುಪಡಿಸಿ.ಕ್ರಯ ನೋಂದಣಿ (ರಿಜಿಸ್ಟ್ರೇಷನ್ ) ಮಾಡಿ ಅನುಕೂಲ ಮಾಡಿಕೊಡುವಂತೆ ಹಾಗೂ ಬ್ರಿಟಿಷ್ ರ ಕಾಲದ ನಿಯಮಗಳನ್ನು ಮಾರ್ಪಾಡು ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರು ಹಾಗೂ
ಶ್ರೀ ಯತೀಂದ್ರ ಸಿದ್ದರಾಮಯ್ಯ ಮಾನ್ಯ ನಗರಾಭಿವೃದ್ಧಿ ಸಚಿವರು ರವರಿಗೆ
ಮಾನ್ಯ ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖಾಂತರ ಆಗ್ರಹಪೂರ್ವಕ ಮನವಿ ಪತ್ರ ದಿನಾಂಕ 25.11.2026
ನ್ಯೂನ್ಯತೆಗಳು
ಶಿವಮೊಗ್ಗದ ನಾಗರಿಕರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆಯಲು 1994/ 95 ರಿಂದ ನಾಲ್ಕೈದು ಬಾರಿ ಅರ್ಜಿ ಸಲ್ಲಿಸಿರುತ್ತಾರೆ. ಅರ್ಜಿ ಸಲ್ಲಿಸಿದ ಫಲಾನುಭವಗಳಿಗೆ 10.05.2011ರಲ್ಲಿ ಶಿವಮೊಗ್ಗ ನಗರದ ವಾಜಪೇಯಿ ಬಡಾವಣೆಯಲ್ಲಿ ನಿವೇಶನ ಹಂಚಲಾಯಿತು. ಈ ನಿವೇಶನ ಪಡೆಯಲು 16 ವರ್ಷ. ನಿವೇಶನ ಪಡೆದವರು ಪ್ರಾಧಿಕಾರಕ್ಕೆ ಸಂಪೂರ್ಣ ಹಣ ಕಟ್ಟಿ ಅಗ್ರಿಮೆಂಟ್ ಕರಾರು ನೋಂದಣಿ ಮಾಡಿಸಿಕೊಂಡರು.
ಈ ಬಡಾವಣೆಯ ನಿವೇಶನಗಳ ಅಕ್ರಮ ಹಂಚಿಕೆ ಪ್ರಾಧಿಕಾರದ ತಪ್ಪಿನಿಂದ ಹಗರಣ ಬಹಿರಂಗವಾಗಿ ಲೋಕಾಯುಕ್ತ ತನಿಖೆಗೆ ಒಳಪಟ್ಟು ಎಲ್ಲಾ ನಿವೇಶನ ಹಂಚಿಕೆ ಕಾನೂನು ಬಾಹಿರ ಎಂದು ರದ್ದು ಪಡಿಸಿದರು. ಮನೆ ಕಟ್ಟಲು ಅವಕಾಶ ನೀಡಲಿಲ್ಲ. ಖಾತೆ ಮಾಡಿಕೊಡಲಿಲ್ಲ. ಹಿರಿತನದಿಂದ ನ್ಯಾಯಯುತವಾಗಿ ಪಡೆದವರು ಅನ್ಯಾಯಕ್ಕೆ ಒಳಗಾದರು. ಈ ಅನ್ಯಾಯದ ಆದೇಶದ ವಿರುದ್ಧ ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋದರು 2025ರಲ್ಲಿ ನ್ಯಾಯಬದ್ಧವಾಗಿ ಅರ್ಜಿ ಸಲ್ಲಿಸಿ ನಿವೇಶನ ಪಡೆದವರಿಗೆ ನ್ಯಾಯ ಸಿಕ್ಕಿತು. ಈ ಪ್ರಕ್ರಿಯೆ ಮುಗಿಯಲು ನ್ಯಾಯಾಲಯದಲ್ಲಿ ಖರ್ಚು ಸಮಯ 14ವರ್ಷ ವ್ಯರ್ಥವಾಯಿತು. ನ್ಯಾಯಾಲಯದಿಂದ ಮುಕ್ತವಾದ ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರ ಪಾಲಿಕೆಗೆ ಹಸ್ತಾಂತರಿಸಲು ಹಾಗೂ ಅಲ್ಲಿ ಖಾತೆ ಮಾಡಲು ಒಂದು ವರ್ಷ ವ್ಯರ್ಥ. ಒಟ್ಟು ಪ್ರಾಧಿಕಾರದಿಂದ ನಿವೇಶನ ಪಡೆಯಲು ನ್ಯಾಯಾಲಯ.ಲೋಕಾಯುಕ್ತ ತನಿಖೆ ಸೇರಿ ಸುಮಾರು 31 ವರ್ಷ. ಅರ್ಜಿದಾರರಿಗೆ 35 ವರ್ಷ ಒಟ್ಟು 65/ 66 ವರ್ಷ ಕಳೆಯಬೇಕಾಯಿತು. ಪಾಲಿಕೆಯಲ್ಲಿ ಖಾತೆ ಮಾಡಿಸಿದಾಗ ಮಾಲೀಕರ ಹೆಸರು ಆಯುಕ್ತರು ನಗರಾಭಿವೃದ್ಧಿ ಪ್ರಾಧಿಕಾರ ರವರ ಹೆಸರಿನಲ್ಲಿದೆ.ಹಣ ಕಟ್ಟಿ ನಿವೇಶನ ಪಡೆದವರು ಅನುಭೋಗದಾರರ ಕಾಲಂನಲ್ಲಿ ಇದೆ. ನಿವೇಶನ ಪಡೆದವರಿಗೆ ಮನೆ ಕಟ್ಟುವ ಯೋಗವೇ ಇಲ್ಲ. ಏಕೆಂದರೆ ಬ್ಯಾಂಕುಗಳು 60 ವರ್ಷ ಮೇಲ್ಪಟ್ಟವರಿಗೆ ಮನೆ ಕಟ್ಟಲು ಸಾಲ ನೀಡುವುದಿಲ್ಲ. ಮಕ್ಕಳ ಹೆಸರಿಗೆ ಮಾಡಿಕೊಡಲು ತಾಯಿ ತಂದೆಯರನ್ನು ನೋಡಿಕೊಳ್ಳುವುದಿಲ್ಲವೆಂಬ ಆತಂಕ ಭಯ. ಒಂದು ವೇಳೆ ನಿವೇಶನ ಮಾರಾಟ ಮಾಡಿ ಬರುವ ಆ ಹಣ ಬ್ಯಾಂಕಿನಲ್ಲಿ ಠೇವಣಿ ಇಟ್ಟು ಜೀವನ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಇನ್ನೂ ಕೆಲವು ಫಲಾನುಭವಿಗಳು ಮೃತರಾಗಿರುತ್ತಾರೆ. ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿದ ರೈತರಿಗೆ ಕ್ರಯ ಮಾಡಿಕೊಡುತ್ತಾರೆ. ಅದೇ ರೀತಿ ಪ್ರಾಧಿಕಾರದಿಂದ ನಿವೇಶನ ಪಡೆದವರಿಗೂ ಕ್ರಯ ಮಾಡಿಕೊಡುವ ಕಾನೂನು ಜಾರಿಯಾಗಬೇಕು. ನಿವೇಶನ ಸರ್ಕಾರ ಉಚಿತವಾಗಿ ನೀಡುವುದಿಲ್ಲ. ಆಯ್ಕೆಯಾದ ಫಲಾನುಭವಿಗಳು ನಿವೇಶನದ ಸಂಪೂರ್ಣ ಹಣ ಪ್ರಾಧಿಕಾರಕ್ಕೆ ಕಟ್ಟಿ ನಿವೇಶನ ಪಡೆದಿರುತ್ತಾರೆ.
ಆದರಿಂದ ಶಿವಮೊಗ್ಗ ನಗರದ ವಾಜಪೇಯಿ ಬಡಾವಣೆಯ ನಿವೇಶನ ಮಂಜೂರಾಗಿರುವ ಫಲಾನುಭವಿಗಳಿಗೆ ಈ ಎಲ್ಲಾ ಕಾರಣಗಳಿಂದ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಅಗ್ರಿಮೆಂಟ್ ಕರಾರು ರದ್ದುಪಡಿಸಿ ಕ್ರಯ ನೋಂದಣಿ (ರಿಜಿಸ್ಟ್ರೇಷನ್ ) ಮಾಡಿಕೊಡಬೇಕೆಂದು. ಮಾನ್ಯ ಮುಖ್ಯಮಂತ್ರಿಗಳು ನಗರಾಭಿವೃದ್ಧಿ ಸಚಿವರು ಪ್ರಾಧಿಕಾರ ವ್ಯಾಪ್ತಿಯ ಎಲ್ಲಾ ಶಾಸಕರು ಅಧ್ಯಕ್ಷರು ಹಾಗೂ ಸದಸ್ಯರುಗಳಲ್ಲಿ ಆಗ್ರಹ ಪೂರ್ವಕವಾಗಿ ವಿನಂತಿಸುತ್ತೇವೆ…
*ತಮ್ಮ ವಿಶ್ವಾಸಿಗರು*
ಎನ್. ಕೆ.ಶ್ಯಾಮಸುಂದರ್ ಮಾಜಿನಗರ ಸಭಾ ಸದಸ್ಯರು. ಫಲಾನುಭವಿಗಳಾದ ಡಾಕ್ಟರ್ ಸಾತ್ವಿಕ್. ಸತೀಶ್. ಅರುಣ್ ಕುಮಾರ್. ವಿಶ್ವೇಶ್ವರಯ್ಯ. ಡಾಕ್ಟರ್ ಪುರುಷೋತ್ತಮ್. ಸಿರಾಜ್.ಶಿವಕುಮಾರ್.ಚೆನ್ನೇಶ್ ಎನ್ಎಸ್ ರಮೇಶ್.ಗಣೇಶ್ ರಾವ್ ವಿಜಯ್ ಇನ್ನು ಮುಂತಾದವರು..


