*ಸರ್ಕಾರಿ ಆಸ್ಪತ್ರೆ ವೈದ್ಯರ ಹಾಜರಾತಿಗೆ ಸ್ಯಾಲರಿ ಲಿಂಕ್?!* *ಕಳ್ಳ ವೈದ್ಯರಿಗೆ ಆರೋಗ್ಯ ಇಲಾಖೆ ಟ್ರೀಟ್ ಮೆಂಟ್!*

*ಸರ್ಕಾರಿ ಆಸ್ಪತ್ರೆ ವೈದ್ಯರ ಹಾಜರಾತಿಗೆ ಸ್ಯಾಲರಿ ಲಿಂಕ್?!*

*ಕಳ್ಳ ವೈದ್ಯರಿಗೆ ಆರೋಗ್ಯ ಇಲಾಖೆ ಟ್ರೀಟ್ ಮೆಂಟ್!*

ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಆರೋಗ್ಯ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಫೇಸಿಯಲ್ ಅಟೆಂಡೆನ್ಸ್ ಮೂಲಕ ಮೊಬೈಲ್ ಹಾಜರಾತಿಗೆ ಸ್ಯಾಲರಿ ಲಂಕ್ ಮಾಡಲು ಮುಂದಾಗಿದೆ.

ಇದಕ್ಕೆ ಸ್ಯಾಲರಿ ಲಿಂಕ್ ಆಗಲಿದ್ದು ಹಾಜರಾತಿಯಾದಷ್ಟೇ ಸಂಬಂಳ ವೈದ್ಯರಿಗೆ ಸಿಗಲಿದೆ. ಆಸ್ಪತ್ರೆಗೆ ಜಿಪಿಎಸ್ ಫಿಕ್ಸ್ ಆಗಲಿದ್ದು, ವೈದ್ಯರ ಕಳ್ಳಾಟಕ್ಕೆ ಕಡಿವಾಣ ಬೀಳಲಿದೆ. ಮೊಬೈಲ್ ನಲ್ಲಿ ಫೇಸಿಯಲ್ ಅಟೆಂಡೆನ್ಸ್ ಸ್ಕ್ರೀನಿಂಗ್ ಆ್ಯಪ್ ಮೂಲಕ ಟ್ರ್ಯಾಕಿಂಗ್ ಮಾಡಲು ಮುಂದಾಗಿದೆ. ವೈದ್ಯರು ಡ್ಯೂಟಿ ಟೈಮ್ ನಲ್ಲಿ ನಿಗಧಿತ ಆಸ್ಪತ್ರೆ ವ್ಯಾಪ್ತಿಯಿಂದ ಹೊರ ಹೋದ್ರೆ ಮಾಹಿತಿ ಸಿಗಲಿದೆ.ಜೊತೆಗೆ ತಡವಾಗಿ ಕರ್ತವ್ಯಕ್ಕೆ ಬಂದ್ರೆ ಕೂಡಾ ಮಾಹಿತಿ ಸಿಗಲಿದ್ದು, ಹಾಜರಾತಿಗೆ ಸ್ಯಾಲರಿ ಲಿಂಕ್ ಮಾಡಿದ್ರೆ ಕೆಲಸ ಮಾಡಿದಷ್ಟು ವೇತನ ಸಿಗಲಿದೆ.ವೈದ್ಯರ ವಿರುದ್ಧ ಕಾನೂನು ಶಿಸ್ತು ಕ್ರಮದ ಅಸ್ತ್ರ ಪ್ರಯೋಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಒಟ್ಟಿನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಂದ್ರೆ ಹೇಳೊರಿಲ್ಲ ಕೇಳೊರಿಲ್ಲ ಎಂಬಂತೆ ಇದ್ದು, ಎಷ್ಟೋ ವೈದ್ಯರು ಆಸ್ಪತ್ರೆಗೆ ಬಂದು ಅಟೆಂಡೆನ್ಸ್ ಪಂಚ್ ಮಾಡಿ ಹೋಗಿ ಬೀಡ್ತಾರೆ. ಹೀಗೆ ಕಳ್ಳಾಟವಾಡುವ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ಈಗ ಆರೋಗ್ಯ ಇಲಾಖೆ ಬಿಸಿ ಮುಟ್ಟಿಸಲು ಮಂದಾಗಿದೆ.