*ಯುವಕನ ಬರ್ಬರ ಹತ್ಯೆ; ಹೈವೇನಲ್ಲಿ ಶವ ಬಿಸಾಕಿ ಕಣ್ಮರೆ*

*ಯುವಕನ ಬರ್ಬರ ಹತ್ಯೆ; ಹೈವೇನಲ್ಲಿ ಶವ ಬಿಸಾಕಿ ಕಣ್ಮರೆ*

ಯುವಕನ್ನು ಬರ್ಬರವಾಗಿ ಹತ್ಯೆಗೈದ (murder) ದುಷ್ಕರ್ಮಿಗಳ ಗ್ಯಾಂಗ್ ಶವವನ್ನ ರಸ್ತೆಯಲ್ಲಿ ಎಸೆದು ಹೋಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಗದಗ ರಸ್ತೆಯಲ್ಲಿರುವ ಐಟಿಸಿ ಗೋದಾಮಿನ ಬಳಿ ಕೃತ್ಯ ನಡೆದಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಗ್ರಾಮದ ನಿವಾಸಿ ಮಂಜುನಾಥ ಗಾಣಿಗೇರ(29) ಕೊಲೆಯಾದ ಯುವಕ. ಸದ್ಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುನಾಥ ಗಾಣಿಗೇರ ಕೊಲೆಗೆ ಸದ್ಯ ನಿಖರ ಮಾಹಿತಿ ತಿಳಿದುಬಂದಿಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಶವ ಎಸೆದು ಹೋಗಿರುವ ದುಷ್ಕರ್ಮಿಗಳು, ಬೇರೆಡೆ ಕೊಂದು ಸಾಕ್ಷ್ಯನಾಶ ಮಾಡುವ ಉದ್ದೇಶದಿಂದ ಶವ ಸಾಗಣೆ ಮಾಡಿದ್ದಾರೆ.

ರಸ್ತೆಯಲ್ಲಿ ಹೋಗುತ್ತಿದ್ದವರು ಶವ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಶವವನ್ನು ಸ್ಥಳಾಂತರ ಮಾಡಲಾಗಿದೆ.