ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು**ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು*
*ಇನ್ನೋವಾ ಕಾರಿನಲ್ಲಿ 1.15 ಲಕ್ಷ ರೂ., ಗಾಂಜಾ; 7ಜನರನ್ನು ಬೇಟೆಯಾಡಿದ ದೊಡ್ಡಪೇಟೆ ಪೊಲೀಸರು*
*ಆಝಾದ್ ನಗರದ ಮಾರ್ಕೆಟ್ ಫೌಜಾನ್,ಮೊಹಮ್ಮದ್ ಇಬ್ರಾಹಿಂ(ಮುನ್ನ), ಆರ್ ಎಂ ಎಲ್ ನಗರದ ಅಕೀಪ್(ಪುಕ್ಕಿ), ಇಲ್ಯಾಜ್ ನಗರದ ಅರ್ಬಾಜ್ ಖಾನ್(ಮಜಹರ್), ಟಿಪ್ಪುನಗರದ ಜಾಫರ್ ಸಾದಿಖ್, ಸವಾಯಿಪಾಳ್ಯದ ಅಬ್ದುಲ್ ಅಜೀಜ್, ಆರ್.ಎಂ.ಎಲ್ ನಗರದ ಮೊಹಮದ್ ಫೈಝಲ್(ಬಚ್ಚಾ ಫೈಝಲ್) ಬಂಧಿತ 7 ಜನ ಆರೋಪಿಗಳು*![](https://malenaduexpress.com/wp-content/uploads/2025/02/IMG-20250208-WA0223-498x1024.jpg)
ಭಾನುವಾರ ರಾತ್ರಿ *ಸಾಗರ ಕಡೆಯಿಂದ ಶಿವಮೊಗ್ಗ ಕಡೆಗೆ ಮಾದಕ ವಸ್ತು ಗಾಂಜಾವನ್ನು ಇನ್ನೋವಾ ಕಾರಿನಲ್ಲಿ ತೆಗೆದುಕೊಂಡು ಬರುತ್ತಿರುವ ಬಗ್ಗೆ* ಬಂದ ಖಚಿತ ಮಾಹಿತಿಯ ಮೇರೆಗೆ * ಮಿಥುನ್ ಕುಮಾರ್ ಜಿ. ಕೆ ಐಪಿಎಸ್,* ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, * ಅನಿಲ್ ಕುಮಾರ್ ಭುಮರಡ್ಡಿ,* ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು * ಕಾರಿಯಪ್ಪ ಎ ಜಿ.* ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, * ಬಾಬು ಆಂಜನಪ್ಪ,* ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ-ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, * ರವಿ ಪಾಟೀಲ್ ಪಿಐ* ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು * ವಸಂತ್* ಪಿಎಸ್ಐ ದೊಡ್ಡಪೇಟೆ ಪೊಲೀಸ್ ಠಾಣೆ ರವರ ನೇತೃತ್ವದ ಮತ್ತು ಸಿಬ್ಬಂಧಿಗಳ ತಂಡವು, ದೊಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಲೆನಾಡು ಸಿರಿ ಮುಂಭಾಗ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ, *ಸಾಗರ ಕಡೆಯಿಂದ ಬಂದ ಇನೋವಾ ಕಾರನ್ನು* ತಡೆದು ಪರಿಶೀಲಿಸಿದ್ದಾರೆ.
ಕಾರಿನ *ಹಿಂಭಾಗದ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಾದಕ ವಸ್ತು ಗಾಂಜಾ ಸಿಕ್ಕಿರುತ್ತದೆ.* ನಂತರ ಕಾರಿನಲ್ಲಿದ್ದ ಆರೋಪಿತರಾದ *1) ತನ್ವಿರ್ ಪಾಷಾ @ ಮಾರ್ಕೆಟ್ ಪೌಜಾನ್, 26 ವರ್ಷ ಅಜಾದ್ ನಗರ ಶಿವಮೊಗ್ಗ, 2) ಅಕೀಪ್ @ ಪುಕ್ಕಿ 28 ವರ್ಷ, ಆರ್ ಎಂ ಎಲ್ ನಗರ, ಶಿವಮೊಗ್ಗ, 3) ಮೊಹಮ್ಮದ್ ಇಬ್ರಾಹಿಂ @ ಮುನ್ನ, 25ವರ್ಷ ಅಜಾದ್ ನಗರ ಶಿವಮೊಗ್ಗ, 4) ಅರ್ಬಾಜ್ ಖಾನ್ @ ಮಜರ್, 26 ವರ್ಷ ಇಳಿಯಾಜ್ ನಗರ ಶಿವಮೊಗ್ಗ, 5) ಜಾಫರ್ ಸಾದಿಕ್ 25 ವರ್ಷ ಟಿಪ್ಪು ನಗರ ಶಿವಮೊಗ್ಗ, 6) ಅಬ್ದುಲ್ ಅಜೀಜ್ 25 ವರ್ಷ ಸಾವಾಯಿ ಪಾಳ್ಯ ಶಿವಮೊಗ್ಗ ಮತ್ತು 7) ಮೊಹಮ್ಮದ್ ಫೈಝಲ್ @ ಬಚ್ಚಾ ಫೈಝಲ್, 21 ವರ್ಷ ಆರ್ ಎಂ ಎಲ್ ನಗರ ಶಿವಮೊಗ್ಗ* ಇವರನ್ನು ದಸ್ತಗಿರಿ ಮಾಡಿ, *ಅಂದಾಜು ಮೌಲ್ಯ 1,15,000/- ರೂಗಳ 1 ಕೆಜಿ 217 ಗ್ರಾಂ ತೂಕದ ಒಣ ಗಾಂಜಾ ಮತ್ತು ಕೃತ್ಯ ಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 5,00,000/- ರೂಗಳ ಇನ್ನೋವಾ ಕಾರು* ಸೇರಿದಂತೆ *ಒಟ್ಟು 6,15,000/- ರೂಗಳ ಮಾಲನ್ನು* ಅಮಾನತ್ತು ಪಡಿಸಿಕೊಳ್ಳಲಾಗಿದೆ.
ಸದರಿ ತನಿಖಾ ತಂಡದ *ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ* ಅಭಿನಂದಿಸಿರುತ್ತಾರೆ.