ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು?ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ…ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ…ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ
ಕಾಂಗ್ರೆಸ್ ಮುಖಂಡ ಎನ್.ಕೆ.ಶ್ಯಾಮಸುಂದರ್ ಒತ್ತಾಯವೇನು?
ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಯೋಜನೆ ಆಮೇಲೆ ಬಂದ್ ಮಾಡಿ…
ಮೊದಲು ಶರಾವತಿನಗರ, ಹೊಸಮನೆ ಬಡಾವಣೆ ಕಳಪೆ ಕಾಮಗಾರಿ, ಇತರೆ ಬಡಾವಣೆಗಳ ಕಾಮಗಾರಿಯ ಭ್ರಷ್ಟಾಚಾರದ ಕರ್ಮಕಾಂಡ ತನಿಖೆ ಮಾಡಿ…
ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಿ
ಶಿವಮೊಗ್ಗ ನಗರದ ಶರಾವತಿನಗರ ಹೊಸಮನೆ ಬಡಾವಣೆಯಲ್ಲಿ ರಸ್ತೆಗಳು ಫುಟ್ಪಾತ್ ಕಳಪೆಯಾಗಿವೆ. ಲೋಪ ದೋಷದಿಂದ ಮಾಡಿದ ಈ ಕಾಮಗಾರಿಗೆ ಇವತ್ತು ಈ ಬಡಾವಣೆಯಲ್ಲಿ100 ಗುಂಡಿಗಳನ್ನು ಕಾಣಬಹುದು. ರಸ್ತೆಗಳ ಕಟಿಂಗ್ ಆಗಿದೆ. ಅದರ ಹಣ ಸಾರ್ವಜನಿಕರಿಂದ ಕಟ್ಟಿಸಿಕೊಂಡು ಅದರ ನಿರ್ವಹಣೆ ಇಲ್ಲ. ಚರಂಡಿಗಳಲ್ಲಿ ಹೂಳು ತೆಗೆಯದೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಚರಂಡಿಯಲ್ಲಿ ವಾಸನೆ ಹಾಗೂ ಸೊಳ್ಳೆಗಳ ಕಾಟ ಶಿವಮೊಗ್ಗ ಸೊಳ್ಳೆಗಳ ನಗರ ಮಾಡಿದ್ದಾರೆ. ಗಾಂಧಿನಗರದ ವಿಧಾತ್ರಿ ಭವನ ಎದುರಿನ ಫುಟ್ಪಾತ್ ಲಕ್ಷ್ಮಿ ಟಾಕೀಸ್ ಬಳಿಯ 100 ಅಡಿ ರಸ್ತೆ ಆಕ್ಸಿಸ್ ಬ್ಯಾಂಕ್ ಬಳಿಯ ಫುಟ್ಪಾತ್ ಹೊಸಮನೆ ಬಡಾವಣೆಯ ಫುಟ್ಪಾತ್ ಗಳು ಎಲ್ಲಾ ಕಡೆ ಟೈಲ್ಸ್ ಗಳು ಕುಸಿದು ಬಿದ್ದಿದೆ. ಸಾರ್ವಜನಿಕರು ಫುಟ್ಪಾತ್ ಮೇಲೆ ಓಡಾಡಲಿಕ್ಕೆ ಆಗದಂತ ಸ್ಥಿತಿ ಆಗಿದೆ . ಈ ಹಿಂದೆ ನಗರಸಭೆಯಿಂದ ಮಾಡಿರುವಂತಹ ಚರಂಡಿ ಕಾಮಗಾರಿಗಳು ಅದರ ಮೇಲೆನೆ ಮುಚ್ಚಳ ಹಾಕಿ ನಕಲಿ ಬಿಲ್ ಮಾಡಿಕೊಂಡಿರುವ ಹಳೆಯ ಕಾಮಗಾರಿಗಳು ಎಷ್ಟು,? ಹೊಸದಾಗಿ ಬಂದಿರುವ ಸ್ಮಾರ್ಟ್ ಸಿಟಿ ಎಂ ಡಿ ರವರು ವಾರಕ್ಕೊಮ್ಮೆ ಕಚೇರಿಗೆ ಬಂದು ಹೋಗುತ್ತಾರೆ ಈ ಜವಾಬ್ದಾರಿ ನನಗೆ ಸಂಬಂಧಿಸಿದಲ್ಲ.ನನ್ನ ಪಾಲು ನನಗೆ ಸಿಕ್ಕಿದಷ್ಟು ಶಿವ ಎಂದು ರಜಾ ಹಾಕಿ ಹೋಗಿದ್ದಾರೆ. ಈ ಯೋಜನೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಇಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ ಗಳು ಸಾರ್ವಜನಿಕ ದೂರುಗಳನ್ನು ಸ್ವೀಕರಿಸುವ ಇನ್ನೊಬ್ಬರು ಮಹಿಳಾಧಿಕಾರಿ. ಮೂರು ಜನ ನಿವೃತ್ತಿಯಾಗಿದ್ದರು ಪಿಂಚಣಿ ಈ ಯೋಜನೆಯ ಹೆಸರಲ್ಲಿ ಲಕ್ಷಗಟ್ಟಲೆ ಸಂಬಳ ಸಹ ಪಡೆಯುತ್ತಿದ್ದು ಈಗ ಇವರುಗಳು ಯಾವುದೇ ದೂರುಗಳನ್ನು ಸ್ವೀಕರಿಸದೆ ಕಚೇರಿಯನ್ನೇ ಮುಚ್ಚಿಸಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಹಗರಣದಿಂದ ತಪ್ಪಿಸಿಕೊಳ್ಳಲು ಸರ್ಕಾರದ ದಿಕ್ಕು ತಪ್ಪಿಸಲು ಹೊರಟಿದ್ದಾರೆ. ನಿರ್ವಹಣೆ ಹೆಸರಿನಲ್ಲಿ ಕಾಮಗಾರಿ ಮಾಡದೆ ಗುತ್ತಿಗೆದಾರನೊಂದಿಗೆ ಶಾಮಿಲಾಗಿ ಗುತ್ತಿಗೆದಾರನಿಗೆ ಕೊಟ್ಟಿರುವ ಕೋಟಿಗಟ್ಟಲೆ ಹಣ ಎಷ್ಟು? ಇನ್ನು ನಿರ್ವಹಣೆಗೆ ಉಳಿದಿದೆ ಎನ್ನಲಾದ 80 ಕೋಟಿ ಹಣವನ್ನು ಲೂಟಿ ಹೊಡೆಯಲು ಸರ್ಕಾರ ಬಿಡಬಾರದು.
ಜಲ ಮಂಡಳಿಯಿಂದ 24*7 ಕುಡಿಯುವ ನೀರಿನ ಕಾಮಗಾರಿ ಯೋಜನಾ ಬದ್ಧವಾಗಿ ಮುಗಿಯದೇ ಇದ್ದರು ತುರಾ ತುರಿಯಲ್ಲಿ ಶರಾವತಿ ನಗರ ಹೊಸಮನೆ ಬಡಾವಣೆಯಲ್ಲಿ ರಸ್ತೆ ಫುಟ್ಪಾತ್ ಕಾಮಗಾರಿಗಳು ಮುಗಿಸಿದ್ದೇಕೆ ಈಗ ಅವರು ಗುಂಡಿಗಳು ಹೊಡೆಯುತ್ತಿದ್ದು ರಸ್ತೆಗಳು ಫುಟ್ಪಾತ್ ಹಾಳು ಮಾಡುತ್ತಿದ್ದು ಇದು ತೆರಿಗೆಯ ಹಣ ಲೂಟಿ ಅಲ್ಲವೇ?
ಸ್ಮಾರ್ಟ್ ಸಿಟಿ ಮಂಡಳಿಯ ಅಧ್ಯಕ್ಷರಾದ ಬಿ ಬಿ.ಕಾವೇರಿ ಮೇಡಮ್ ರವರು ಕುಳಿತಲ್ಲೇ ಕಾಮಗಾರಿ ನೋಡದೆ ತಾವು ದಯಮಾಡಿ ಶಿವಮೊಗ್ಗಕ್ಕೆ ಬಂದು ಇದನ್ನೆಲ್ಲ ಪರಿಶೀಲಿಸಿ. ಹೊಸಮನೆ ಶರಾವತಿ ನಗರದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಯ ಗುಂಡಿಗಳನ್ನು ನಾನು ತೋರಿಸಲು ಸಿದ್ಧನಿದ್ದೇನೆ. ಇದರಲ್ಲಿ ನಡೆದಿರುವ ಸಮಗ್ರ ಭ್ರಷ್ಟಾಚಾರವನ್ನು ತನಿಖೆ ಮಾಡಿಸಿ ನಿವೃತ್ತಿಯಾಗಿರುವ ಈ ಮೂವರು ಅಧಿಕಾರಿಗಳಿಂದ ದುರುಪಯೋಗ ಆಗಿರುವ ಹಣವನ್ನ ವಸೂಲಿ ಮಾಡಬೇಕು. ಇವರ ಮೇಲೆ ಕ್ರಮ ಕೈಗೊಳ್ಳಬೇಕು.ಎಂದು ಒತ್ತಾಯಿಸುತ್ತೇನೆ. ಜಿಲ್ಲಾ ಸಚಿವರನ್ನು ವಿನಂತಿಸುತ್ತೇನೆ.
🔏
*ಎನ್ ಕೆ. ಶ್ಯಾಮಸುಂದರ್ ಮಾಜಿನಗರ ಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ*